20 ಗಂಟೆ ಬಳಿಕ ಕೊಳವೆ ಬಾವಿಯಿಂದ ರಕ್ಷಿಸಿದ 2 ವರ್ಷದ ಮಗು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ!

ಸಾವು ಗೆದ್ದು ಬಂದ 2 ವರ್ಷದ ಮಗು ಸಾತ್ವಿಕ್, ಲೋಕಸಭಾ ಚುನಾವಣೆ ಸಮೀಕ್ಷೆ, ಏಕಾಂಗಿಯಾಗಿ ಬಿಜೆಪಿಗೆ 342 ಸ್ಥಾನ, ರಾಯಬರೇಲಿಯಿಂದ ಸೋನಿಯಾ ಅಳಿಯ ಕಣಕ್ಕಿಳಿಯುವ ಸಾಧ್ಯತೆ, ಉತ್ತರ ಪ್ರದೇಶದಲ್ಲಿ ಸಂಚಲನ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಕೊಳವೆ ಬಾವಿಗೆ ಬಿದ್ದು ಬರೋಬ್ಬರಿ ಬರೋಬ್ಬರಿ 20 ಗಂಟೆ ಸಾವು ಬದುಕಿನ ನಡುವೆ ಹೋರಾಡಿದ 2 ವರ್ಷದ ಮಗು ಸಾತ್ವಿಕ್ ಆರೋಗ್ಯ ಉತ್ತಮವಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಈ ಅವಘಡ ಸಂಭವಿಸಿತ್ತು. ಕೊಳವೆ ಬಾವಿಗೆ ಬಿದ್ದ ಬೆನ್ನಲ್ಲೇ ಕಾರ್ಯಾಚರಣೆ ಆರಂಭಗೊಂಡಿತ್ತು. ತೆಲೆಕೆಳಗಾಗಿ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿದ್ದ ಸಾತ್ವಿಕ್ ರಕ್ಷಣೆಗೆ 3 ರಕ್ಷಣಾ ತಂಡಗಳು ಸತತ 20 ಗಂಟೆ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿತ್ತು. ರಕ್ಷಿಸಿದ ಬೆನ್ನಲ್ಲೇ ಆಸ್ಪತ್ರೆ ದಾಖಲಿಸಲಾಗಿದೆ. ಪಾಸಣೆ ನಡೆಸಿದ ವೈದ್ಯರು, ಈ ಮಗುವಿನ ಆರೋಗ್ಯ ಉತ್ತಮವಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅಬ್‌ಸರ್ವೇಶನ್‌ಗಾಗಿ ಮಗುವನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೀಗಾಗಿ ಸಾತ್ವಿಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾನೆ. ಈ ಮೂಲಕ ಕೋಟ್ಯಾಂತರ ಮಂದಿಯ ಪ್ರಾರ್ಥನೆ ಫಲಿಸಿದೆ

Related Video