ಕಿಸಾನ್ ಸಮ್ಮಾನ್, ಫಸಲ್ ಬಿಮಾ, ಸದೃಢ ರೈತ -ಸೃದೃಢ ಭಾರತ: ಕೃಷಿಯಲ್ಲಿ ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದ ನಮೋ!

ಕಳೆದ 11 ವರ್ಷಗಳಲ್ಲಿ ಭಾರತದ ಕೃಷಿ ಕ್ಷೇತ್ರದಲ್ಲಿ ಆದ ಪ್ರಗತಿಯನ್ನು ಈ ಲೇಖನವು ವಿವರಿಸುತ್ತದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೃಷಿ ಯೋಜನೆಗಳು ಮತ್ತು ಆಧುನೀಕರಣದ ಪ್ರಯತ್ನಗಳಿಂದ ರೈತರ ಬದುಕಿನಲ್ಲಿ ಹೇಗೆ ಬದಲಾವಣೆಗಳಾಗಿವೆ ಎಂಬುದನ್ನು ತಿಳಿಸುತ್ತದೆ.

Share this Video

ಬೆಂಗಳೂರು (ಜೂ.12): ರೈತ ಹೊಲದಲ್ಲಿ ಬೆವರು ಸುರಿಸಿದ್ರೇನೆ ಇಡೀ ದೇಶದ ಹೊಟ್ಟೆ ತುಂಬೋದು. ಅದಕ್ಕೆ ಆತನನ್ನ ಉಳುವ ಯೋಗಿ ಅನ್ನೋದು. ಆದರೆ, ಆತ ಮಾತ್ರ ಒಂದು ಬೆಳೆಯನ್ನ ಬಿತ್ತಿ, ಅದರ ಫಸಲು ಹೊರ ತೆಗೆಯೋವರೆಗೂ ಜೀವವನ್ನ ಕೈನಲ್ಲಿ ಹಿಡಿದು ಕೂತಿರುತ್ತಾನೆ. 

ಎಲ್ಲವೂ ಚೆನ್ನಾಗಿ ಆಗಿ, ಒಳ್ಳೆ ಫಸಲು ಬಂದಾಗ ಅದಕ್ಕೆ ಸೂಕ್ತ ಬೆಲೆ ಸಿಗುತ್ತಾ? ಇಲ್ವಾ? ಎನ್ನುವ ಭಯ ಆತನನ್ನ ಕಾಡುತ್ತೆ. ಆದರೆ, ಕಳೆದ 11 ವರ್ಷದಿಂದ ದೇಶದ ಅನ್ನದಾತ ಈ ಆತಂಕ, ಭಯದಿಂದ ಮುಕ್ತನಾಗ್ತಾ ಇದ್ದಾನೆ. ಏಕೆಂದರೆ,  ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರುತ್ತಾ.. ಮಣ್ಣಿನ ಮಕ್ಕಳ ಬದುಕು ಹಸನಾಗಿಸೋ ನಿಟ್ಟಿನಲ್ಲಿ ದೊಡ್ಡ ದೊಡ್ಡ ಹೆಜ್ಜೆಯನ್ನ ಇಡ್ತಿರೋ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತನಿಗೆ ಹಾಗೂ ಈ ಭೂಸಿರಿಗೆ ಜೈ ಅಂತಿದೆ. 

ಭಾರತ ಕೃಷಿ ಪ್ರಧಾನ ರಾಷ್ಟ್ರ.ಕೃಷಿಯಲ್ಲಿ ಸಾಕಷ್ಟು ಸವಾಲುಗಳು ಇದ್ದರೂ ಕೂಡ ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರೊ ದೊಡ್ಡ ವರ್ಗವಿದೆ. ಇದೇ ಕೃಷಿ ವಲಯದಲ್ಲಿ ಕಳೆದ 11 ವರ್ಷದಲ್ಲಿ ದೊಡ್ಡ ಕ್ರಾಂತಿ ನಡೆದಿದೆ. ಪಾರಂಪರಿಕ ಕೃಷಿಗೆ ಆಧುನೀಕರಣ ಹಾಗೂ ಡಿಜಿಟಲೀಕರಣದ ಟಚ್ ಕೊಡುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅನ್ನದಾತರಿಗೆ ಬೇಕಾಗಿರೋ ಪ್ರೋತ್ಸಾಹ, ಸಹಾಯ, ಬೆಂಬಲಕ್ಕೆಂದು ಹತ್ತು ಹಲವು ಯೋಜನೆಗಳನ್ನ ನಮೋ ಆಡಳಿತ ಜಾರಿಗೆ ತಂದಿದೆ.
 

Related Video