
ಜನರಿಗೆ ನೇರವಾಗಿ ತಲುಪುತ್ತಿವೆಯಾ ಕೇಂದ್ರದ ಯೋಜನೆಗಳು? ದುಡಿಯುವ ವರ್ಗದ ಕೈಗೆ ಸಿಕ್ಕಿತಾ ನಮೋ ಯೋಜನೆಗಳ ಶಕ್ತಿ?
ಬಡತನ ನಿರ್ಮೂಲನೆ.. ನಮೋ ಮೈಲಿಗಲ್ಲು..! ಕೇಂದ್ರದಿಂದ ಜನರಿಗೆ ನೇರವಾಗಿ ತಲುಪುತ್ತಿವೆ ಕೇಂದ್ರದ ಯೋಜನೆಗಳು..! ಇದುವೇ ಈ ಹೊತ್ತಿನ ವಿಶೇಷ ಬಡ ಬದುಕಿಗೆ ಮೋದಿ ಬೆಳಕು.
ಬಡ ವರ್ಗದ ಹಿತ.. ವಿಕಸಿತ ಭಾರತ.. ಅಭಿವೃದ್ಧಿಯ ಪಥ..! ಭಾರತದ ಬಡವರ್ಗದ ಬದುಕಿಗೆ ಭರವಸೆ ಮೂಡಿದ್ದು ಯಾವಾಗ..? ಹಿಂದುಳಿದ ಸಮುದಾಯದ ಸಮಗ್ರ ಪ್ರಗತಿಗೆ ಪ್ರಧಾನಿ ಪಣ..! ದುಡಿಯೋ ವರ್ಗದ ಕೈಗಳಿಗೆ ನಮೋ ಯೋಜನೆಗಳ ಶಕ್ತಿ..! ಹಲವು ಯೋಜನೆಗಳು.. 11 ವರ್ಷದ ಹೋರಾಟದ ಹಾದಿ..! ಬಡತನ ನಿರ್ಮೂಲನೆ.. ನಮೋ ಮೈಲಿಗಲ್ಲು..! ಕೇಂದ್ರದಿಂದ ಜನರಿಗೆ ನೇರವಾಗಿ ತಲುಪುತ್ತಿವೆ ಕೇಂದ್ರದ ಯೋಜನೆಗಳು..! ಇದುವೇ ಈ ಹೊತ್ತಿನ ವಿಶೇಷ ಬಡ ಬದುಕಿಗೆ ಮೋದಿ ಬೆಳಕು. ಭಾರತವನ್ನ ಬಹುವಾಗಿ ಕಾಡ್ತಾ ಇರೋ ಸಮಸ್ಯೆಗಳು ಯಾವು..? ಈ ಪ್ರಶ್ನೆಗೆ ಉತ್ತರ ಹುಡಕುತ್ತಾ ಹೋದ್ರೆ ನಮಗೆ ಮೊದಲು ಎದುರಾಗೋದೇ ಬಡತನ.. ಹೌದು, ಭಾರತದಲ್ಲಿ ಬಡವರ್ಗದ ಸಂಖ್ಯೆ ಹೆಚ್ಚಿದೆ. ಬಡತನ ಅನ್ನೋದು ಭಾರತದ ಮುಂದಿರೋ ದೊಡ್ಡ ಸಮಸ್ಯೆ..ಹಾಗೇನೆ, ಬಡತನ ನಿರ್ಮೂಲನೆ ಅನ್ನೋದು ಭಾರತದ ಎದರು ನಿಂತಿರೋ ಕಠಿಣ ಸವಾಲು.
ಈ ಸಮಸ್ಯೆಯನ್ನ ಬಗೆಹರಿಸಿ, ಈ ಸವಾಲನ್ನ ಸಮರ್ಥವಾಗಿ ಎದುರಿಸಿ ನಿಲ್ಲೋದ್ರಲ್ಲಿ ಭಾರತಕ್ಕೆ ಯಶಸ್ಸು ಸಿಗ್ತಾಯಿದೆ. ಅದ್ರಲ್ಲಿಯೂ ಕಳೆದ 11 ವರ್ಷದಿಂದ ಈಚೆಗೆ ಬಡತನ ನಿರ್ಮೂಲನೆಗೆ ಭಾರತ ದಿಟ್ಟ ಹೆಜ್ಜೆಗಳನ್ನ ಇಟ್ಟಿದೆ. ಇದಕ್ಕೆ ಕಾರಣ ಮೋದಿ.. ಬಡ ಕುಟುಂಬದಿಂದಲೇ ಬಂದು ದೇಶದ ಪ್ರಧಾನಿ ಪಟ್ಟದ ಮೇಲೆ ಕೂತಿರೋ ನರೇಂದ್ರ ಮೋದಿ. ಬಡ ಕುಟುಂಬದಿಂದ ಬಂದಂತಹ ನಾಯಕ ನರೇಂದ್ರ ಮೋದಿ. ಇದೇ ಕಾರಣಕ್ಕೆ ಬಡತನದ ವಿರುದ್ಧ ಹೇಗೆ ಹೊರಾಡ್ಬೇಕು ಅಂತ ತಮಗೆ ಚೆನ್ನಾಗಿ ಗೊತ್ತು ಅಂತಾರೆ ಮೋದಿ. 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಬಡತನದ ವಿರುದ್ಧದ ಹೋರಾಟದಲ್ಲಿ ದೇಶ ಕಂಡಿರೋ ಪ್ರಗತಿಯನ್ನ ನೋಡಿದ್ರೆ ಮೋದಿ ಆಡಿರೋ ಈ ಮಾತುಗಳು ನಿಜ ಅನ್ನಿಸುತ್ವೆ.
ಬಡವರ್ಗದ ಜನರ ಬದುಕಿಗೆ ಬೆಳಕು ತರೋದಿಕ್ಕೆ ಪಣತೊಟ್ಟು ಹಗಲಿರುಳು ನಮೋ ಹೋರಾಡ್ತಿದ್ದು, ಅದರ ಪರಿಣಾಮವೇ ಬಡವರು ಹಾಗೂ ಹಿಂದುಳಿದ ವರ್ಗಕ್ಕೆ ಕೇಂದ್ರ ಸರ್ಕಾರದಿಂದ ಹತ್ತು ಹಲವು ಯೋಜನೆಗಳು ಘೋಷಣೆಯಾಗಿರೋದು.. ಆದ್ರ ಲಾಭವನ್ನ ಭಾರತ ಬಡವರ್ಗ ಪಡೆದುಕೊಂಡಿರೋದು. ಹಸಿದನಿಗಷ್ಟೇ ಅನ್ನದ ಬೆಲೆ ಗೊತ್ತಿರೋಕೆ ಸಾಧ್ಯ. ಪ್ರಧಾನಿ ನರೇಂದ್ರ ಮೋದಿಯವ್ರು ಆ ಹಸಿವನ್ನು ನೋಡಿ ಬಂದವರು.. ಅವರದ್ದೇನೂ ಅನುಕೂಲಸ್ಥರ ಕುಟುಂಬವೇನಲ್ಲ.. ಕೆಳ ಮಧ್ಯಮವರ್ಗದ ಕುಟುಂಬದಿಂದ ಬಂದಿದ್ದ ಮೋದಿ, ಚಿಕ್ಕಂದಿನಲ್ಲೇ ಸಾಕಷ್ಟು ಕಷ್ಟಗಳನ್ನು ಅನುಭವಿಸಿದವರು.. ಈಗ ಪ್ರಧಾನಿ ಪಟ್ಟದಲ್ಲಿ ಕೂತಿರೋ ಮೋದಿ ಬಡವರಿಗಾಗಿಯೇ ಒಂದಷ್ಟು ಯೋಜನೆಗಳನ್ನು ತಂದಿದ್ದಾರೆ ಅಂದ್ರೆ ಅವರು ಕಣ್ಣಾರೆ ಕಂಡಿದ್ದ, ಸ್ವತಃ ತಾವೇ ಅನುಭವಿಸಿದ್ದ ಬಡತನದ ಕಷ್ಟವೇ ಇದಕ್ಕೆಲ್ಲಾ ಕಾರಣ.
ಪ್ರಧಾನಿ ಪಟ್ಟಕ್ಕೇರಿದಾಗ ಮೋದಿಯವರ ಮುಂದಿದ್ದದ್ದು ಎರಡು ಯುದ್ಧ. ಒಂದು ಭ್ರಷ್ಟಾಚಾರ ವಿರುದ್ಧದ ಯುದ್ಧ, ಮತ್ತೊಂದು ಬಡತನದ ವಿರುದ್ಧ ಯುದ್ಧ.. ಇರುಳ ವಿರುದ್ಧ ಬೆಳಕಿನ ಯುದ್ಧ ಆರಂಭಿಸಿದ ಮೋದಿ, ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿದ್ದಾರೆ. 11 ವರ್ಷಗಳ ಮೋದಿ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಪ್ರಕರಣಗಳಿಲ್ಲ. ಪ್ರತೀ ಇಲಾಖೆಯ ಮೇಲೂ ಹದ್ದಿನ ಕಣ್ಣಿಟ್ಟು ಆಡಳಿತ ನಡೆಸ್ತಾ ಇರೋ ಮೋದಿ, ಭ್ರಷ್ಟಾಚಾರಕ್ಕೆ ಬಹುತೇಕ ಬ್ರೇಕ್ ಹಾಕಿ ಬಿಟ್ಟಿದ್ದಾರೆ. ಹಾಗಾದ್ರೆ ಭ್ರಷ್ಟಾಚಾರ ವಿರುದ್ಧದ ಯುದ್ಧದಲ್ಲಿ ಬಹುತೇಕ ಗೆದ್ದಿರುವ ಮೋದಿ, ಬಡತನ ವಿರುದ್ಧದ ಯುದ್ಧದಲ್ಲೂ ಗೆದ್ದಿದ್ದಾರಾ..? ಗೆಲ್ಲೋದಕ್ಕೆ ಮುಂದಡಿ ಇಟ್ಟಿದ್ದಾರೆ.