India@75: ಸ್ವಾತಂತ್ರ್ಯ ಚಳವಳಿಯಲ್ಲಿ ಬಂಧನಕ್ಕೊಳಗಾದ ಮೊದಲ ಮಹಿಳೆ ಕಮಲಾದೇವಿ ಚಟ್ಟೋಪಾಧ್ಯಾಯ

ಕಮಲಾದೇವಿ ಚಟ್ಟೋಪಾಧ್ಯಾಯ ಹಲವು ಪ್ರಥಮಗಳನ್ನು ಮುಡಿಗೇರಿಸಿಕೊಂಡ ದಿಟ್ಟ ಹೆಣ್ಣು. ಸ್ವಾತಂತ್ರ್ಯ ಹೋರಾಟದಲ್ಲಿ ಬಂಧನಕ್ಕೊಳಗಾದ ಭಾರತದ ಮೊದಲ ಮಹಿಳೆ, ಶಾಸಕಾಂಗ ಚುನಾವಣೆಗೆ ಸ್ಪರ್ಧಿಸಿದ ಮೊದಲ ಮಹಿಳೆ, ಸಮಾಜ ಸುಧಾರಕಿ. 

First Published Aug 6, 2022, 4:25 PM IST | Last Updated Aug 6, 2022, 4:25 PM IST

ಕಮಲಾದೇವಿ ಚಟ್ಟೋಪಾಧ್ಯಾಯ ಹಲವು ಪ್ರಥಮಗಳನ್ನು ಮುಡಿಗೇರಿಸಿಕೊಂಡ ದಿಟ್ಟ ಹೆಣ್ಣು. ಸ್ವಾತಂತ್ರ್ಯ ಹೋರಾಟದಲ್ಲಿ ಬಂಧನಕ್ಕೊಳಗಾದ ಭಾರತದ ಮೊದಲ ಮಹಿಳೆ, ಶಾಸಕಾಂಗ ಚುನಾವಣೆಗೆ ಸ್ಪರ್ಧಿಸಿದ ಮೊದಲ ಮಹಿಳೆ, ಸಮಾಜ ಸುಧಾರಕಿ. ಕಮಲಾದೇವಿ ಮಂಗಳೂರಿನ ಸಾರಸ್ವತ ಬ್ರಾಹ್ಮಣ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ 1903 ರಲ್ಲಿ ಜನಿಸುತ್ತಾರೆ. ಮನೆಯ ಅನೇಕ ಬ್ರಾಹ್ಮಣ ಸಂಪ್ರದಾಯವನ್ನು ಪ್ರಶ್ನಿಸುತ್ತಲೇ ಬೆಳೆಯುತ್ತಾರೆ. ಮುಂದೆ ಮದುವೆಯಾಗುತ್ತದೆ. ಮದುವೆಯಾಗಿ 2 ವರ್ಷಕ್ಕೆ ವಿಧವೆಯಾಗುತ್ತಾರೆ. ನಂತರ ಹೆಚ್ಚಿನ ಓದಿಗಾಗಿ ಮದ್ರಾಸ್‌ಗೆ ತೆರಳುತ್ತಾರೆ. ಅಲ್ಲಿ ಖ್ಯಾತ ಸ್ತ್ರೀವಾದಿ ಸುಹಾಸಿನಿ ಚಟ್ಟಾಪಾಧ್ಯಾಯ ಪರಿಚಯವಾಗುತ್ತದೆ. ಅವರ ಅಣ್ಣ ಹರೀಂದ್ರನಾಥ್ ಚಟ್ಟೋಪಾಧ್ಯಾಯ ಜೊತೆಗೆ ಪ್ರೇಮದಲ್ಲಿ ಬೀಳುವ ಕಮಲಾ, ಅವರ ಜೊತೆ ಮದುವೆ ಆಗುತ್ತಾರೆ. ನಂತರ ಪತಿ ಜೊತೆ ಲಂಡನ್‌ಗೆ ಹಾರುತ್ತಾರೆ. ಭಾರತಕ್ಕೆ ಮರಳಿದ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾರೆ. ಜೀವನ ಶ್ರದ್ಧೆ ಹಾಗೂ ಸಂಘರ್ಷದಲ್ಲಿ ಕಮಲಾದೇವಿ ತಮ್ಮ ಬದುಕನ್ನು ಕಳೆಯುತ್ತಾರೆ.