India@75: ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಹುತಾತ್ಮರಾದ ಕ್ರಾಂತಿಕಾರಿ ಅಶ್ಫಾಖ್‌ವುಲ್ಲಾ ಖಾನ್‌

ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಹುತಾತ್ಮರಾದ ಕ್ರಾಂತಿಕಾರಿ ಅಶ್ಪಾಕುಲ್ಲಾ ಖಾನ್ ಬಗ್ಗೆ ಒಂದಿಷ್ಟು...
 

First Published Jul 26, 2022, 10:58 AM IST | Last Updated Jul 26, 2022, 10:58 AM IST

ಬೆಂಗಳೂರು (ಜುಲೈ 26): ಸ್ವಾತಂತ್ರ್ಯ ಪಡೆದು 75 ವರ್ಷ ಆಗುತ್ತಿರುವ ಸಂದರ್ಭದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌, ದೇಶ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸಾಹಸಿಗಳನ್ನು ನೆನಪು ಮಾಡಿಕೊಳ್ಳುತ್ತಿದೆ. ಬ್ರಿಟಿಷರ ವಿರದ್ಧ ಶಸ್ತ್ರಸಜ್ಜಿತ ಹೋರಾಟದಲ್ಲಿ ನಂಬಿಕೆ ಇರಿಸಿದ್ದ, ದೇಶಕ್ಕಾಗಿ ಹುತಾತ್ಮರಾದ ಕ್ರಾಂತಿಕಾರಿ ಅಶ್ಫಾಖ್‌ವುಲ್ಲಾ ಖಾನ್‌ ಬಲಿದಾನದ ಕಥೆ.

ಕ್ರಾಂತಿಕಾರಿ ಭಗತ್‌ ಸಿಂಗ್‌ ಜೊತೆ ಹಿಂದುಸ್ತಾನಿ ಸೋಷಿಯಲಿಸ್ಟ್‌ ರಿಪಬ್ಲಿಕನ್‌ ಅಸೋಸಿಯೇಷನ್‌ನ ಅನ್ನು ಸ್ಥಾಪಿಸಿದ ಮತ್ತೊಬ್ಬ ಕ್ರಾಂತಿಕಾರಿ ತರುಣ  ಅಶ್ಫಾಖ್‌ವುಲ್ಲಾ ಖಾನ್‌ (Ashfaqulla Khan). ಈಗಿನ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಪಠಾಣ್‌ ಕುಟುಂಬದಲ್ಲಿ ಹುಟ್ಟಿದಾತ. ಬಾಲಕನಾಗಿದ್ದಾಗಿನಿಂದಲೂ ಸ್ವಾತಂತ್ರ್ಯ ಚಳವಳಿಯಲ್ಲಿ ಸೆಳೆತ. ಚೌರಾ ಚೌರಿಯ ಹಿಂಸಾಚಾರದ ನಂತರ, ಮಹಾತ್ಮಾ ಗಾಂಧೀಜಿ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡ ಸಂದರ್ಭದಲ್ಲಿ ಭ್ರಮನಿರಸನಗೊಂಡ ತರುಣರಲ್ಲಿ ಅಶ್ಫಾಖ್‌ವುಲ್ಲಾ ಖಾನ್‌ ಕೂಡ ಒಬ್ಬರು.

India@75: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಶಹೀದ್ ಭಗತ್‌ ಸಿಂಗ್ ಜೀವನಗಾಥೆ

ವಿದೇಶಿ ಆಡಳಿತದ ವಿರುದ್ಧ ಶಸ್ತ್ರಾಸ್ತ್ರ ಹೋರಾಟವನ್ನೇ ಮಾಡಬೇಕು ಎಂದು ಭಗತ್‌ ಸಿಂಗ್‌ ಜೊತೆ ಸೇರಿ ಎಚ್‌ಎಸ್ಆರ್‌ಎ ಎನ್ನುವ ಹೊಸ ಸಂಘಟನೆಯನ್ನು ಹುಟ್ಟುಹಾಕುತ್ತಾರೆ ಅಶ್ಫಾಖ್‌ವುಲ್ಲಾ ಖಾನ್‌. 1925 ಆಗಸ್ಟ್‌ 9 ರಂದು ಅಶ್ಫಾಖ್‌ವುಲ್ಲಾ ಖಾನ್‌, ಚಂದ್ರಶೇಖರ್‌ ಆಜಾದ್‌ ಹಾಗೂ ಆತನ ಗೆಳೆಯರು ಸುದ್ದಿಯಾದರು. ಕಾಕೋರಿಯಲ್ಲಿ ರೈಲನ್ನು ಅಡ್ಡಗಟ್ಟಿ ಸರಕಾರಿ ಹಣವನ್ನು ದೋಚುವ ಮೂಲಕ ಗಮನಸೆಳೆದಿದ್ದರು.

Video Top Stories