ಏಷ್ಯಾನೆಟ್ ಗ್ರೂಪ್ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಯಾತ್ರೆ ಕರ್ನಾಟಕ ಸಂಚಾರ ಅಂತ್ಯ
ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಏಷ್ಯಾನೆಟ್ ಗ್ರೂಪ್ ಆಯೋಜಿಸಿರುವ ಅಮೃತ ಮಹೋತ್ಸವ ಯಾತ್ರೆ ಕರ್ನಾಟಕ ಸಂಚಾರ ಅಂತ್ಯಗೊಂಡಿತು.
ಬೆಂಗಳೂರು(ಆ.03): ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಏಷ್ಯಾನೆಟ್ ಗ್ರೂಪ್ ಆಯೋಜಿಸಿರುವ ಅಮೃತ ಮಹೋತ್ಸವ ಯಾತ್ರೆ ಕರ್ನಾಟಕ ಸಂಚಾರ ಅಂತ್ಯಗೊಂಡಿತು. ಕರ್ನಾಟಕದ ವಿವಿಧ ಭಾಗಗಳಲ್ಲಿ ಸಂಚರಿಸಿದ ಯಾತ್ರೆ, ಇಂದು ಹೊರರಾಜ್ಯಗಳತ್ತ ಪ್ರಯಾಣ ಮುಂದುವರಿಸಿತು. ದೆಹಲಿಯತ್ತ ಹೊರಟ ಯಾತ್ರೆಗೆ ಕಂದಾಯ ಸಚಿವ ಅರ್. ಅಶೋಕ್ ಧ್ವಜ ಹಸ್ತಾಂತರಿಸಿದ್ರು.
ಟೂಲ್‌ಕಿಟ್ ಹಗರಣದಲ್ಲಿ ಅಶ್ವತ್ಥನಾರಾಯಣ ಭಾಗಿ ಆರೋಪ, ಲೋಕಾಯುಕ್ತಕ್ಕೆ ದೂರು
ಯಾತ್ರೆಯಲ್ಲಿ ಭಾಗವಹಿಸಿದ್ದ ಎನ್ಸಿಸಿ ಕೆಡೇಟ್ಗಳಿಗೆ ಕಂದಾಯ ಸಚಿವ ಆರ್. ಅಶೋಕ್ ಪ್ರಮಾಣ ಪತ್ರ ನೀಡಿದ್ರು. ಸಮಾರಂಭದಲ್ಲಿ ಕನ್ನಡಪ್ರಭ- ಸುವರ್ಣ ನ್ಯೂಸ್ ಚೀಫ್ ಮೆಂಟರ್ ರವಿ ಹೆಗಡೆ, ಮಾರ್ಕೆಟಿಂಗ್ ಉಪಾಧ್ಯಕ್ಷ ಅನಿಲ್ ಸುರೇಂದ್ರ, ಅಭಿಯಾನದ ಪಾಲುದಾರರಾದ ಖ್ಯಾತ ವೈದ್ಯ ಹೃಷಿಕೇಶ್ ದಾಮ್ಲೆ ಪಾಲ್ಗೊಂಡಿದ್ರು.
ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಚಂಡೀಗಢ, ಹಿಮಾಚಲ ಪ್ರದೇಶದ ಬಳಿಕ ಲಡಾಖ್‌ನಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ.