India@75: ಮೇಘಾಲಯದ ಖಾಸಿ ಬೆಟ್ಟ ವಶಕ್ಕೆ ಮುಂದಾಗಿದ್ದ ಆಂಗ್ಲರ ವಿರುದ್ದ ಸೆಣಸಾಡಿದ್ದ ವೀರಯೋಧ ತಿರೋತ್ ಸಿಂಹ

ಖಾಸಿ ಬೆಟ್ಟವನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಬ್ರಿಟೀಷರಿಗೆ ಆ ಬೆಟ್ಟದಲ್ಲಿ ವಾಸವಾಗಿದ್ದ ಖಾಸಿ ಬುಡಕಟ್ಟು ಜನಾಂಗ ತೀವ್ರ ಪ್ರತಿರೋಧ ಒಡ್ಡಿತ್ತು

Share this Video
  • FB
  • Linkdin
  • Whatsapp

ನವದೆಹಲಿ (ಜೂ. 09): ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್‌ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ಸ್ವಾತಂತ್ರಕ್ಕಾಗಿ ಪ್ರಾಣ ಒತ್ತೆ ಇಟ್ಟ ತಿರೋತ್ ಸಿಂಹರ (Tirot Sing) ಕಥೆ ಇಲ್ಲಿದೆ. ಅದು 19ನೇ ಶತಮಾನ ಆರಂಭ, ಇವತ್ತು ಮಾಯನ್ಮಾರ್‌ ಎಂದು ಕರೆಸಿಕೊಳ್ಳುವ ಬರ್ಮಾವನ್ನು ವಶಪಡಿಸಿಕೊಂಡಿದ್ದ ಬ್ರೀಟಿಷರು ಬ್ರಹ್ಮಪುತ್ರಾ ಕಣಿವಗೆ ಕಾಲಿಟ್ಟಿದ್ದರು. 

ಇದನ್ನೂ ನೋಡಿ:ಬಾಜಿ ರಾವತ್- ಸ್ವಾತಂತ್ರ್ಯ ಹೋರಾಟದ ಅತೀ ಕಿರಿಯ ಹುತಾತ್ಮ!

ಈಗ ಮೇಘಾಲಯ ಎಂದು ಕರೆಸಿಕೊಳ್ಳುವ ಖಾಸಿ ಬೆಟ್ಟವನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಆದರೆ ಬ್ರಿಟೀಷರಿಗೆ ಆ ಬೆಟ್ಟದಲ್ಲಿ ವಾಸವಾಗಿದ್ದ ಖಾಸಿ ಬುಡಕಟ್ಟು ಜನಾಂಗ ತೀವ್ರ ಪ್ರತಿರೋಧ ಒಡ್ಡಿತ್ತು. ಈ ವಿರೋಧದ ನಾಯಕತ್ವ ವಹಿಸಿದ್ದ ಖಾಸಿ ಮುಖ್ಯಸ್ಥ ತಿರೋತ್‌ ಸಿಂಹರ ಸ್ಟೋರಿ ಇಲ್ಲಿದೆ

Related Video