ತೂಕ ಇಳಿಕೆ ಸೇರಿ ತೆಂಗಿನ ಹಾಲಿನಿಂದ ಹತ್ತು ಹಲವು ಪ್ರಯೋಜನ

ತೆಂಗಿನ ಕಾಯಿಯ ನೀರು ಅಲ್ಲ, ಅದರ ಹಾಲನ್ನು ಸೇವನೆ ಮಾಡುವುದರಿಂದಲೂ ಅನೇಕ ಪ್ರಯೋಜನಗಳಿವೆ. ತೂಕ ಇಳಿಕೆ ಮಾಡುವುದರಿಂದ ಹಿಡಿದು, ಇಮ್ಯೂನಿಟಿ ಬೂಸ್ಟ್ ಮಾಡುವವರೆಗೆ ತೆಂಗಿನ ಹಾಲು ಬಳಕೆ ಮಾಡುವುದರಿಂದ ಸಾಲು ಸಾಲು ಪ್ರಯೋಜನಗಳಿವೆ. ಅವುಗಳು ಯಾವುವು..? ಪ್ರತಿದಿನ ಒಂದು ಕಪ್ ತೆಂಗಿನ ಹಾಲು ಕುಡಿದರೆ ಹಲವು ಪ್ರಯೋಜನಗಳಿವೆ 

First Published Sep 16, 2021, 12:27 PM IST | Last Updated Sep 16, 2021, 12:40 PM IST

ಬಾಯಿ ಹುಣ್ಣು ನಿವಾರಣೆಗೆ ತೆಂಗಿನ ಹಾಲು ಸಹಕಾರಿ. ಆಗಾಗ್ಗೆ ಬಾಯಿ ಹುಣ್ಣು ಸಮಸ್ಯೆ ಮತ್ತು ಹೊಟ್ಟೆ ಸಂಪೂರ್ಣವಾಗಿ ಸ್ವಚ್ಛವಾಗಿಲ್ಲದ ಜನರಿಗೆ ತೆಂಗಿನ ಹಾಲು ತುಂಬಾ ಪ್ರಯೋಜನಕಾರಿಯಾಗಿದೆ. ತೆಂಗಿನ ಹಾಲು ಕುಡಿಯುವುದರಿಂದ ಹುಣ್ಣುಗಳ ಸಮಸ್ಯೆಯನ್ನೂ ಕಡಿಮೆ ಮಾಡಬಹುದು. ಮೂಳೆಗಳನ್ನು ಬಲಪಡಿಸಲು ಕೂಡಾ ತೆಂಗಿನ ಹಾಲು ಪ್ರಯೋಜನಕಾರಿಯಾಗಿದೆ.  ಎಲುಬುಗಳನ್ನು ಬಲಪಡಿಸಲು ತೆಂಗಿನ ಹಾಲು ತೆಗೆದುಕೊಳ್ಳಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ರಂಜಕವಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ತೆಂಗಿನ ಹಾಲು ಮತ್ತು ತೆಂಗಿನ ನೀರಿಗೇನು ವ್ಯತ್ಯಾಸ?

ತೂಕ ಇಳಿಸಿಕೊಳ್ಳಲು ಕೂಡಾ ತೆಂಗಿನ ಹಾಲು ಸಹಾಯ ಮಾಡುತ್ತದೆ. ಬೊಜ್ಜಿನ ಸಮಸ್ಯೆಯನ್ನು ತೆಗೆದುಹಾಕುತ್ತದೆ. ಇದು ವಿಶೇಷ ರೀತಿಯ ಕೊಬ್ಬಿನಾಮ್ಲಗಳನ್ನು ಹೊಂದಿರುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತೆಂಗಿನ ಹಾಲಿನಲ್ಲಿ ಫೈಬರ್ ಇರುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಆದ್ದರಿಂದ, ತೂಕವನ್ನು ಕಡಿಮೆ ಮಾಡಲು, ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು.