Niyokov Variant: ಹೊಸ ವೈರಸ್ ಪತ್ತೆ , ಬಾವಲಿಯಿಂದ ಮನುಷ್ಯರಿಗೆ ಹಬ್ಬುವ ಭೀತಿ
ಒಮಿಕ್ರೋನ್ (Omicron) ವೈರಸ್ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸುತ್ತಿರುವ ನಡುವೆಯೇ ದಕ್ಷಿಣ ಆಫ್ರಿಕಾದಲ್ಲಿ ‘ನಿಯೋಕೋವ್’(Niyokov) ಎಂಬ ಹೊಸ ಕೋವಿಡ್ ರೂಪಾಂತರಿ ಪತ್ತೆಯಾಗಿದೆ.
ಬೆಂಗಳೂರು (ಜ. 29): ಒಮಿಕ್ರೋನ್ (Omicron) ವೈರಸ್ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸುತ್ತಿರುವ ನಡುವೆಯೇ ದಕ್ಷಿಣ ಆಫ್ರಿಕಾದಲ್ಲಿ ‘ನಿಯೋಕೋವ್’(Niyokov) ಎಂಬ ಹೊಸ ಕೋವಿಡ್ ರೂಪಾಂತರಿ ಪತ್ತೆಯಾಗಿದೆ.
ಓಮಿಕ್ರಾನ್ ಹಾಗೂ ಕೋವಿಡ್ 19 ಬಗ್ಗೆ ಐಸಿಎಂಆರ್‌ನ ಹೊಸ ಅಧ್ಯಯನ ಏನು ಹೇಳುತ್ತೆ..?
‘ಸದ್ಯ ಇದು ಬಾವಲಿಗಳಲ್ಲಿ ಮಾತ್ರ ಹರಡುತ್ತಿದ್ದು, ಭವಿಷ್ಯದಲ್ಲಿ ಮನುಷ್ಯರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದು ವೇಳೆ ಮತ್ತಷ್ಟುರೂಪಾಂತರಗೊಂಡರೆ ಮನುಷ್ಯರಿಗೆ ಹರಡುವ ಸಾಧ್ಯತೆ ಹೆಚ್ಚು. ಇಂಥ ಸಂದರ್ಭದಲ್ಲಿ ಇದರಿಂದ ಸೋಂಕಿತನಾದ ಮೂವರಲ್ಲಿ ಒಬ್ಬರು ಸಾವನ್ನಪ್ಪಲಿದ್ದಾರೆ’ ಎಂದು ಚೀನಾದ ವುಹಾನ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ವುಹಾನ್‌ನಲ್ಲೇ ಮೊದಲು ಕೋವಿಡ್ ವೈರಾಣು ಪತ್ತೆ ಆಗಿತ್ತು ಎಂಬುದು ಗಮನಾರ್ಹ.