ನಿಫಾ ವೈರಸ್ ಬಗ್ಗೆ ಯಾವ ರೀತಿ ಜಾಗ್ರತೆ ವಹಿಸ್ಬೇಕು?
ಕೇರಳದಲ್ಲಿ ನಿಫಾ ವೈರಸ್ ದೊಡ್ಡ ಮಟ್ಟದ ಆತಂಕ ಸೃಷ್ಟಿಸಿದೆ. ನಿಫಾ, ಕೋವಿಡ್‌ಗಿಂತ ಹತ್ತು ಪಟ್ಟು ಹೆಚ್ಚು ಅಪಾಯಕಾರಿ ಎಂದು ಈಗಾಗ್ಲೇ ಮಲೇಷ್ಯಾ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗಿದ್ರೆ ಈ ವೈರಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸೋದು ಹೇಗೆ? ಇಲ್ಲಿದೆ ಮಾಹಿತಿ.
ಕೇರಳದಲ್ಲಿ ನಿಫಾ ವೈರಸ್ ದೊಡ್ಡ ಮಟ್ಟದ ಆತಂಕ ಸೃಷ್ಟಿಸಿದೆ. 2018ರ ಬಳಿಕ ಕೇರಳದಲ್ಲಿ ವಾರದ ಹಿಂದೆ ಮತ್ತೆ ಕಾಣಿಸಿಕೊಂಡಿರುವ ನಿಫಾ ವೈರಸ್ ಬಾಂಗ್ಲಾದೇಶ ರೂಪಾಂತರವಾಗಿದ್ದು, ಬಹಳ ಅಪಾಯಕಾರಿಯಾಗಿದೆ. ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಮತ್ತೊಂದು ನಿಫಾ ವೈರಸ್ ಪ್ರಕರಣವನ್ನು ದೃಢಪಡಿಸಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಆರಕ್ಕೆ ತಲುಪಿದೆ ಎಂದು ಹೇಳಿದ್ದಾರೆ. ನಿಫಾ, ಕೋವಿಡ್‌ಗಿಂತ ಹತ್ತು ಪಟ್ಟು ಹೆಚ್ಚು ಅಪಾಯಕಾರಿ ಎಂದು ಈಗಾಗ್ಲೇ ಮಲೇಷ್ಯಾ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಹೀಗಾಗಿ ಕೇರಳದ ನೆರೆ ರಾಜ್ಯವಾದ ಕರ್ನಾಟಕ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸೋದು ಅಗತ್ಯವಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಪಾಲಿಸುವ ಮೂಲಕ ಸೋಂಕು ಬರದಂತೆ ತಡೆಯಬಹುದು ಎಂದು ವೈದ್ಯರಾದ ಡಾ.ಪ್ರತ್ಯೂಶ್ ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೇರಳದಲ್ಲಿ ಆತಂಕ ಮೂಡಿಸಿದ ನಿಫಾ; ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ