ಕೊರೋನಾ ವಿರುದ್ಧ ಹೋರಾಡಲು ಆಯುರ್ವೇದ ಸಂಜೀವಿನಿ ‘ಆಯುಷ್ 64’ ಮಾರುಕಟ್ಟೆಗೆ
- ‘ಆಯುಷ್ 64’ ಕೋವಿಡ್ ಔಷಧ ಮಾರುಕಟ್ಟೆಗೆ
- ಆಯುಷ್ 64 ಔಷಧವನ್ನು ಕೊರೋನಾ ಸೋಂಕಿತರು 14 ದಿನಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ.
- ಮಾತ್ರೆ ಸೇವನೆಯ ವಾರದೊಳಗೆ ಸೋಂಕಿನ ಲಕ್ಷಣಗಳು ಶಮನಗೊಳ್ಳುತ್ತವೆ
ಬೆಂಗಳೂರು (ಜೂ. 08):‘ಕೋವಿಡ್-19’ ವಿರುದ್ಧ ಹೋರಾಡುವ ಆಯುರ್ವೇದ ಸಂಜೀವಿನಿ, ಕೇಂದ್ರ ಆಯುಷ್ ಇಲಾಖೆಯಿಂದ ಪ್ರಮಾಣೀಕೃತ ‘ಆಯುಷ್ 64’ ಔಷಧವನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ಕೊರೋನಾ ಸೋಂಕಿತರ ಪಾಲಿಗೆ ‘ಆಯುಷ್ 64’ ಹೊಸ ಭರವಸೆ ಮೂಡಿಸಿದೆ.
ಮನೆ ಮದ್ದಿನಿಂದಲೇ ರೋಗ ನಿರೋಧಕ ಶಕ್ತಿ ಹೆಚ್ಚಳ ಹೇಗೆ? ಕಜೆ ವಿವರಿಸ್ತಾರೆ
ಆಯುಷ್ 64 ಔಷಧವನ್ನು ಕೊರೋನಾ ಸೋಂಕಿತರು 14 ದಿನಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕೋವಿಡ್-19 ಸಾಮಾನ್ಯ ಲಕ್ಷಣಗಳಿರುವ ಸೋಂಕಿತರು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ತಲಾ ಮಾತ್ರೆಯಂತೆ ಆಹಾರ ಸೇವಿಸಿದ ಒಂದು ಗಂಟೆ ನಂತರ ನೀರಿನೊಂದಿಗೆ ಸೇವಿಸಬೇಕು. ಹೀಗೆ 20 ದಿನ ಸೇವನೆ ಮಾಡಿದರೆ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಬಹುದು. ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳ ಔಷಧಗಳೊಂದಿಗೆ ಆಯುಷ್ 64 ಮಾತ್ರೆಗಳನ್ನು ಸೇವಿಸಬಹುದು.