Covid-19 ನಾಲ್ಕನೇ ಅಲೆ ಬಗ್ಗೆ ನಿರ್ಲಕ್ಷ್ಯ ಬೇಡ: ಡಾ. ಸಿ ಎನ್ ಮಂಜುನಾಥ್
ಕೊರೋನಾ ಮೂರನೇ ಅಲೆ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ನಾಲ್ಕನೇ ಅಲೆಯನ್ನು ನೆಗ್ಲೆಕ್ಟ್ ಮಾಡಬೇಡಿ ಎಂದಿದ್ದಾರೆ ಪ್ರಖ್ಯಾತ ಡಾಕ್ಟರ್ ಸಿಎನ್ ಮಂಜುನಾಥ್.
ಜೂನ್, ಜುಲೈ, ಆಗಸ್ಟ್ ಸಂದರ್ಭದಲ್ಲಿ ರಾಜ್ಯಕ್ಕೆ ನಾಲ್ಕನೇ ಅಲೆ ಅಪ್ಪಳಿಸುವ ಸಂಭವವಿದೆ, ಇದನ್ನು ಯಾರೂ ನಿರ್ಲಕ್ಷಿಸಬಾರದು ಎಂದು ಎಚ್ಚರಿಸಿದ್ದಾರೆ ಹೃದಯತಜ್ಞ, ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಸಿ ಎನ್ ಮಂಜುನಾಥ್.
ಈಗಾಗಲೇ ಚೀನಾದಲ್ಲಿ ಲಕ್ಷಾಂತರ ಜನರು ಕೋವಿಡ್ ನಾಲ್ಕನೇ ಅಲೆಗೆ ಸಿಲುಕಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಒಮಿಕ್ರಾನ್ ಅತಿ ವೇಗವಾಗಿ ಹಬ್ಬಿ ಹರಡುತ್ತಿದೆ. ಯಾರೂ ಇದನ್ನು ಕಡೆಗಣಿಸಬಾರದು. ಸಿಂಗಾಪೂರ, ಥೈಲೆಂಡ್, ಚೀನಾ ಕಡೆಯಿಂದ ಬರುವ ಜನರ ಮೇಲೆ ಹದ್ದಿನ ಕಣ್ಣಿಡಬೇಕು. ಮೊದಲಿನಂತೆಯೇ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆಗಾಗ ಸ್ಯಾನಿಟೈಸರ್ ಬಳಸಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಮಲೇರಿಯಾಕ್ಕೆ ಕಾರಣವಾಗುವ ಸೊಳ್ಳೆಗಳನ್ನು ಗುರುತಿಸುವುದು ಈಗ ಸುಲಭ !
ಕೋವಿಡ್ ನಾಲ್ಕನೇ ಅಲೆ ಆಗಸ್ಟ್‌ನಲ್ಲಿ ಬರುವುದಾಗಿ ಐಐಟಿ ಕಾನ್ಪುರ ಅಧ್ಯಯನ ತಿಳಿಸಿದೆ ಎಂದು ಮೊನ್ನೆಯಷ್ಟೇ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದರು. ವ್ಯಾಕ್ಸಿನೇಷನ್ ಆಗಿರುವುದರಿಂದ ಭಯ ಬೀಳುವ ಅಗತ್ಯವಿಲ್ಲದಿದ್ದರೂ ಎಚ್ಚರಿಕೆ ತಪ್ಪಬಾರದು ಎಂದು ಅವರು ತಿಳಿಸಿದ್ದರು.