ಬೆಂಗಳೂರು:  ಸಾಮಾಜಿಕ ಅಂತರಕ್ಕೆ ಮಾದರಿ  ಈ ಸಲೂನ್, ಏನೆಲ್ಲಾ ಮಾಡ್ತಾರೆ!

ಕೊರೋನಾ ವಿರುದ್ಧ ಸಲೂನ್ ಹೋರಾಟ/ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಮೊದಲ ಆದ್ಯತೆ/   ಪ್ರತಿ ಗ್ರಾಹಕರಿಗೂ ಥರ್ಮಲ್ ಸ್ಕ್ಯಾನಿಂಗ್ / ಗ್ರಾಹಕರಿಗೆ ಭಾರೀ ಸಂತಸ

 

First Published May 19, 2020, 9:02 PM IST | Last Updated May 19, 2020, 9:03 PM IST

ಬೆಂಗಳೂರು(ಮೇ 19)  ಲಾಕ್ ಡೌನ್ ಕಾರಣಕ್ಕೆ ದೇಶಾದ್ಯಂತ ಸಲೂನ್ ಗಳನ್ನು ಬಂದ್ ಮಾಡಲಾಗಿತ್ತು. ಈಗ ಅವಕಾಶ ನೀಡಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಈ ಸಲೂನ್ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡುತ್ತಿದ್ದು ಮಾದರಿಯಾಗಿದೆ.

ಕೊರೋನಾಕ್ಕೆ ಬೆಂಗಳೂರಿನ ಬಾಗಲಗುಂಟೆಯ ಸ್ಪಿನ್ ಸಲೂನ್ ಸವಾಲು ಎಸೆದಿದೆ.  ಸರ್ಕಾರದ ಆದೇಶದಂತೆ ಸ್ಪಿನ್ ಸಲೂನ್ ನಲ್ಲಿ  ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗಿದೆ.  ಪ್ರತಿ ಗ್ರಾಹಕರಿಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಿ ಹಾಗೂ ಸ್ಯಾನಿಟೈಸರ್  ನೀಡಿ ಎಂಟ್ರಿ ಪಡೆದುಕೊಳ್ಳಲಾಗುತ್ತದೆ. 

ಕೊರೋನಾ ಕಾರಣಿಕರ್ತ ಚೀನಾ ವಿರುದ್ಧ ತಿರುಗಿ ಬಿದ್ದ 62 ದೇಶಗಳು

ಎಂಟ್ರಿ ಆದ ವ್ಯಕ್ತಿಗೆ ಸಂಪೂರ್ಣವಾಗಿ ಸ್ಯಾನಿಟೈಸರ್ ಸಿಂಪಡಣೆ  ಮಾಡಲಾಗುತ್ತಿದ್ದು ಗ್ರಾಹಕನಿಗೆ ಮಾಸ್ಕ್ ಕಡ್ಡಾಯ . ಗ್ರಾಹಕ ತೆರಳಿದ ಬಳಿಕ  ಸಲೂನ್ ಕುರ್ಚಿಗಳನ್ನು ಸಂಪೂರ್ಣ ಸ್ವಚ್ಛ ಮಾಡಲಾಗುತ್ತದೆ ಡಿಜಿಟಲ್ ಮೂಲಕ ಹಣ ಪಡೆಯುವುದು ಸ್ಪಿನ್ ಸಲೂನ್ ನ ನಿಯಮ.  ಸ್ಪಿನ್ ಸಲೂನ್ ನ ನಿಯಮ ನೋಡಿ ಗ್ತಾಹಕರು ಸಂತಸ ವ್ಯಕ್ತಪಡಿಸಿದ್ದಾರೆ.