ಹಾಸನ ಅತಿರಥರ ಅಖಾಡ: ಜಾತಿ ಲೆಕ್ಕಾಚಾರದ ರಣಕಣ ಹೇಗಿದೆ ?
2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್ ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಹಾಸನ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಮಾಡಲಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿಅತಿ ಹೆಚ್ಚು ಕುತೂಹಲ ಕೆರಳಿಸಿದ ಕ್ಷೇತ್ರ ಹಾಸನ. ಪ್ರಮುಖ ಕಾರಣ ಪ್ರೀತಂ ಗೌಡ ವಿರುದ್ಧ ರೇವಣ್ಣ ಸ್ಪರ್ಧಿಸುತ್ತಾರೋ ಅಥವಾ ಅವರ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೋ ಎಂದು. 2018ರಲ್ಲಿ ಬಿಜೆಪಿಯ ಯುವನಾಯಕ ಪ್ರೀತಂ ಗೌಡ ಹಾಸನ ವಿಧಾನಸಭಾ ಕ್ಷೇತ್ರ ಗೆದ್ದು ದೇವೇಗೌಡ್ರ ಭದ್ರ ಕೋಟೆಯಲ್ಲಿ ಸಂಚಲನ ಸೃಷ್ಠಿಸಿದ್ದರು. ಹೀಗಾಗಿ 2023ರಲ್ಲಿ ಶತಾಯಗತಾಯ ಪ್ರೀತಂ ಗೌಡ್ರನ್ನು ಸೋಲಿಸಬೇಕೆಂದು ದೇವೇಗೌಡರ ಕುಟುಂಬ. ಅದ್ರಲ್ಲೂ ರೇವಣ್ಣನವರ ಕುಟುಂಬ ಹರಸಾಹಸ ಪಡುತ್ತಿದೆ.ಆದ್ರೆ ಪ್ರೀತಂ ಗೌಡ್ರ ವಿರುದ್ದ ಸ್ಪರ್ಧಿಸೋದು ಯಾರು ಅಂತ ದಳ ಕುಟುಂಬದಲ್ಲೇ ಭಿನ್ನಮತವಿದೆ,ಭವಾನಿ ರೇವಣ್ಣ ಸ್ಪರ್ಧಿಸಬೇಕೆಂದು ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸ್ವತಃ ರೇವಣ್ಣ ಅಭಿಪ್ರಾಯವಾಗಿದ್ದರೆ ಯಾವುದೇ ಕಾರಣಕ್ಕೂ ಕೂಡ ಸೊಸೆ ಸ್ಪರ್ಧಿಸಬಾರದು ಎಂದು ಕುಮಾರಸ್ವಾಮಿ ಮತ್ತು ಅವರ ಕುಟುಂಬ ಅಭಿಪ್ರಾಯವಾಗಿದೆ.