Hassan Mixi Blast : ಹಾಸನದಲ್ಲಿ ಮಿಕ್ಸಿ ಬ್ಲಾಸ್ಟ್: ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರಾ ಉಗ್ರರು?

ಮಂಗಳೂರು ಬಳಿಕ ಮತ್ತೊಂದು ಅನುಮಾನಾಸ್ಪದ ಬ್ಲಾಸ್ಟ್‌ ನಡೆದಿದ್ದು,  ಹಾಸನದಲ್ಲಿ ಮಿಕ್ಸಿ ಸ್ಫೋಟಗೊಂಡಿದೆ.
 

Share this Video
  • FB
  • Linkdin
  • Whatsapp

ಕರ್ನಾಟಕದಲ್ಲಿ ಮತ್ತೆ ಅನುಮಾನಾಸ್ಪದ ಸ್ಫೋಟ ನಡೆದಿದೆ. ಹಾಸನದಲ್ಲಿ ಕೋರಿಯರ್‌ ಶಾಪ್‌ಗೆ ಬಂದಿದ್ದ ಮಿಕ್ಸಿ ಬ್ಲಾಸ್ಟ್‌ ಆಗಿದ್ದು, ಶಾಪ್‌ ಮಾಲೀಕ ಶಶಿಗೆ ಬಲಗೈ , ಹೊಟ್ಟೆ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಹಾಸನದ ಕೆ.ಆರ್‌ ಪುರಂ ಸಬ್‌ ರಿಜಿಸ್ಟರ್‌ ಕಚೇರಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಶಾಪ್‌ನಲ್ಲಿರುವ ವಸ್ತುಗಳು ಛಿದ್ರವಾಗಿವೆ. ಗಾಯಾಳುಗೆ ಹಾಸನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಆಸ್ಪತ್ರೆಗೆ ಎಸ್.ಪಿ ಹರಿರಾಮ್‌ ಶಂಕರ್‌ ಭೇಟಿ ನೀಡಿದ್ದು, ಶಾಪ್‌ಗೆ ಮೈಸೂರಿನಿಂದ ಎಫ್‌ ಎಸ್‌ ಎಲ್‌ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.

Andhra Pradesh: ಫಾರ್ಮಾ ಕಂಪನಿ ಲ್ಯಾಬ್‌ನಲ್ಲಿ ಅಗ್ನಿ ಅವಘಡ: ನಾಲ್ವರ ...

Related Video