Asianet Suvarna News Asianet Suvarna News

ರಾಜಾಜಿನಗರದಲ್ಲಿ ಹಬ್ಬದ ಸಂಭ್ರಮ, ಫ್ಯಾಷನ್‌, ಫುಡ್ ಫೆಸ್ಟಿವಲ್‌ಗೆ ಜನಸಾಗರ

ವೀಕೆಂಡ್ ಬಂತೂಂದ್ರೆ ಎಲ್ಲಿಗೆ ಹೋಗೋದಪ್ಪಾ ಅಂತ ಯೋಚ್ನೆ ಮಾಡ್ತೀವಿ. ಶಾಪಿಂಗ್‌, ಫುಡ್, ಫನ್ ಎಲ್ಲವೂ ಒಟ್ಟಿಗೆ ಬೇಕು ಅಂದ್ರೆ ನೀವು ರಾಜಾಜಿನಗರದಲ್ಲಿ ನಡೀತಿರೋ ಫ್ಯಾಷನ್ ಮತ್ತು ಫುಡ್ ಫೆಸ್ಟಿವಲ್‌ಗೆ ವಿಸಿಟ್ ಮಾಡಿ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಿಲಿಕಾನ್ ಸಿಟಿಯಲ್ಲಿ ಈಗ  ರಾಜಾಜಿನಗರ ಹಬ್ಬದ ಸಂಭ್ರಮ. ಕನ್ನಡಪ್ರಭ, ಏಷ್ಯಾ ನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ ಬೆಂಗಳೂರಿಗರಿಗೆ ಹಬ್ಬದ ಸಂಭ್ರಮವನ್ನು ಉಣ ಬಡಿಸ್ತಿದೆ. ದಿನಾ ಕೆಲಸದ ಜಂಜಾಟದಲ್ಲಿದ್ದ ಸಿಟಿ ಮಂದಿ ರಾಜಾಜಿನಗರ  ಹಬ್ಬದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ರು. ಗ್ರಾಹಕ ಕೈ ಬೀಸಿ ಕರೆಯುತ್ತಿರೋ ವಿವಿಧ ವಿನ್ಯಾಸದ ಉಡುಗೆಗಳು.. ಅದಕ್ಕೆ ಒಪ್ಪುವಂತಹ ಕಿವಿಯೋಲೆಗಳು.. ವೆರೈಟಿ ಡಿಸೈನ್ ಜ್ಯುವೆಲ್ಲರಿಗಳು.. ಇದರ ಮಧ್ಯೆ ಬಾಯಲ್ಲಿ ನೀರೂರಿಸೋ ಬಗೆ ಬಗೆಯ ತಿಂಡಿ ತಿನಿಸು..  ಇದು ರಾಜಾಜಿನಗರ ಫೆಸ್ಟ್‌ನಲ್ಲಿ ಕಂಡು ಬರ್ತಿದೆ.

ವೀಕೆಂಡ್‌ಗೂ ಮುನ್ನ ದಿನವೇ ಸ್ಥಳೀಯ ಶಾಸಕ ಸುರೇಶ್ ಕುಮಾರ್  ರಾಜಾಜಿನಗರ ಸಂಭ್ರಮಕ್ಕೆ ಚಾಲನೆ ನೀಡಿದ್ರು. ಇಲ್ಲಿನ ರಾಮಮಂದಿರ ಮೈದಾನದಲ್ಲಿ ನಡೆಯುತ್ತಿರೋ ಫುಡ್, ಫನ್ & ಫ್ಯಾಷನ್ ಫೆಸ್ಟಿವಲ್ಗೆ ಮೊದಲ ದಿನವೇ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.. ಮೊದಲ ದಿನವೇ ಸಾಕಷ್ಟು ಬೆಂಗಳೂರಿಗರು ಸಂಭ್ರಮದಲ್ಲೀ ಭಾಗಿಯಾದರು.. ಶಾಪಿಂಗ್, ಈಟಿಂಗ್ ಜೊತೆಗೆ ಮನರಂಜನೆ ಕಾರ್ಯಕ್ರಮದಲ್ಲಿ ಮಿಂದೆದ್ದರು. ವಿಶೇಷ ಅಂದ್ರೆ  ಕಾರ್ಯಕ್ರಮದಲ್ಲಿ ನಟಿ ಮಾನ್ವಿತಾ ಹಾಗೂ ಒನ್ ಅಂಡ್ ಹಾಫ್ ಚಿತ್ರತಂಡ ಕೂಡ ಭಾಗಿಯಾಯ್ತು. ನಟಿ ಮಾನ್ವಿತಾ ತಮ್ಮ ತಂಡದ ಜೊತೆ ಸ್ಟೇಜ್ ಮೇಲೆ ಹೆಜ್ಜೆ ಹಾಕಿ ನೆರೆದಿದ್ದವರನ್ನು ರಂಜಿಸಿದ್ರು.

ಬೆಂಗಳೂರು ಹಬ್ಬ, ವಿಧಾನ ಸೌಧದಲ್ಲಿ ಲಾಂಟಾನ್ ಆನೆಗಳನ್ನು ನೋಡಿ ಜನ ಫಿದಾ

ಬೆಂಗಳೂರಿನ ವೀಕೆಂಡ್ ಪ್ರಿಯರಿಗೆ ಈ ಬಾರಿ ರಾಜಾಜಿನಗರ ಸಂಭ್ರಮ ಹೇಳಿ ಮಾಡಿಸಿದಂತಿದೆ.. ಒಂದೆ ವೇದಿಕೆಯಡಿ ಹಲವು ಬಗೆಯ ಫನ್, ಫ್ಯಾಷನ್ ಫುಡ್ ಸಿಗಲಿದೆ. ನಾಳೆಯವರೆಗೂ ರಾಜಾಜಿನಗರ ಸಂಭ್ರಮ ನಡೆಯಲಿದೆ.  ವಾರಪೂರ್ತಿ ಕೆಲಸದ ಒತ್ತಡದಲ್ಲಿದ್ದ ಜನರಿಗೆ ರಾಜಾಜಿನಗರ ಸಂಭ್ರಮ ಮನಸ್ಸಿಗೆ ಖುಷಿ ನೀಡಲಿದೆ.. ಮಿಸ್ ಮಾಡದೆ ವಿಸಿಟ್ ಕೊಡಿ...

Video Top Stories