Horror Restaurant: ಇಲ್ಲಿ ದೆವ್ವಗಳೇ ಊಟ ಬಡಿಸುತ್ತವೆ, ಬೆಚ್ಚಿ ಬೀಳಿಸುತ್ತವೆ..
ಈ ರೆಸ್ಟೋರೆಂಟ್‌ನಲ್ಲಿ ವೆಲ್ಕಂ ಮಾಡೋದೇ ದೆವ್ವ. ದುಬೈನ ಈ ರೆಸ್ಟೋರೆಂಟ್‌ನಲ್ಲಿ ದೆವ್ವಗಳದೇ ದರ್ಬಾರ್. ಈ ವಿಶೇಷ ರೆಸ್ಟೋರೆಂಟ್ ಬಗ್ಗೆ ಇಲ್ಲಿದೆ ಸ್ಪೆಶಲ್ ರಿಪೋರ್ಟ್.
ದೆವ್ವ ಭೂತ ಎಲ್ಲ ಕಟ್ಟುಕತೆಯಷ್ಟೇ ಎಂದು ವಾದಿಸುವವರ ಎದೆಯೂ ನಡುಗುವಂಥ ಸ್ಪೆಶಲ್ ಹೋಟೆಲ್ ಇಲ್ಲಿದೆ. ದುಬೈನ ಈ ರೆಸ್ಟೋರೆಂಟ್(restaurent)ನಲ್ಲಿ ವೆಲ್ಕಂ ಮಾಡೋದು ಪಿಶಾಚಿ, ಸರ್ವ್ ಮಾಡೋದು ದೆವ್ವ, ಮಧ್ಯೆ ಮದ್ಯೆ ನೀವು ಬಾಯಿಗೆ ತುತ್ತಿಡುವಾಗ ನಿಮ್ಮ ಕತ್ತನ್ನು ಕಚ್ಚಲಿವೆ ಝೋಂಬಿ(Zombie)ಗಳು, ಪಕ್ಕದ ಚೇರ್‌ನಲ್ಲಿ ಕುಳಿತಿರುವುದು ಅಸ್ಥಿಪಂಜರಗಳು!
Valentine's day: ಅಂದು ಕಣ್ಸನ್ನೆ, ಮನದನ್ನೆ.. ಇಂದು ಲವ್ಯೂ, ಹೇಟ್ಯೂ, ಗುಡ್‌ಬೈ
ಇಷ್ಟೇ ಆದ್ರೆ ಒಂದು ಕೈ ನೋಡೇ ಬಿಡೋಣ ಅನಿಸಬಹುದು. ಆದರೆ ಅಲ್ಲಲ್ಲಿ ಅಲಂಕಾರಕ್ಕೆ ಇಟ್ಟಿರುವುದು- ತಟ್ಟೆಯಲ್ಲಿ ಆಗಷ್ಟೇ ಕಡಿದ ಮನುಷ್ಯರ ತಲೆಗಳು, ವಕ್ರಪಕ್ರವಾಗಿ ರಕ್ತ ಕಾರಿಕೊಂಡು ಬಿದ್ದಿರುವ ಮನುಷ್ಯರ ದೇಹಗಳು.. ಸಾಲದೆಂಬಂದೆ ಹೆದರಿದವರನ್ನು ಮತ್ತೂ ಹತ್ತಿರ ಹತ್ತಿರ ಬಂದು ಹೆದರಿಸುವ ದೆವ್ವಗಳು. ಈ ಪ್ರೇತ ಲೋಕದಲ್ಲಿ ಕುಳಿತು ಊಟ ಮಾಡಿದರೆ ಖಂಡಿತಾ ನೀವೇನು ತಿಂದಿರೆಂಬುದೇ ನಿಮಗೆ ಗೊತ್ತಿರುವುದಿಲ್ಲ. ಈ ದೆವ್ವಗಳ ರೆಸ್ಟೋರೆಂಟ್ ಹೇಗಿದೆ, ಎಷ್ಟು ಭಯಂಕರವಾಗಿದೆ ಎಂಬುದನ್ನು ತೋರಿಸುತ್ತೇವೆ ನೋಡಿ..