Tender Coconut Jelly: ಯಮ್ಮೀ ಯಮ್ಮೀ ಎಳನೀರು ಜೆಲ್ಲಿ.. ಎಲ್ಲಪ್ಪಾ ಎಲ್ಲಿ? ಜೇಬು ತುಂಬಿಸಿದ ಜೆಲ್ಲಿ ಬಿಸ್ನೆಸ್
ಮಡಿಕೇರಿಯ ವಸುಧಾ ಕ್ಯಾಂಟೀನ್‌ನಲ್ಲಿ ಅಪರೂಪದ ಎಳನೀರು ಜೆಲ್ಲಿ
ಕಳೆದ 6 ವರ್ಷಗಳಿಂದ ಎಳನೀರು ಜೆಲ್ಲಿ ತಯಾರಿಸುತ್ತಿರುವ ದಂಪತಿ
ಎಳನೀರು ಜೆಲ್ಲಿ ಉದ್ಯಮ ಶುರು ಮಾಡಿ ಯಶಸ್ವಿಯಾದವರು ಅಪರೂಪ
ನಮಗೆಲ್ಲ ಎಳನೀರು ಕುಡಿದು ಗೊತ್ತು, ಇದರ ತಿಳಿಗಂಜಿ ತಿಂದು ಗೊತ್ತು, ಎಳನೀರು ಜ್ಯೂಸನ್ನೂ ಸವಿದಿದ್ದೇವೆ. ಆದರೆ ಬಹಳಷ್ಟು ಮಂದಿಗೆ ಎಳನೀರು ಜೆಲ್ಲಿ ಅಂದರೇನು ಅಂತ ಗೊತ್ತಿಲ್ಲ. ಎಲ್ಲಿ ಸಿಗುತ್ತದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾದರೆ ಒಮ್ಮೆ ಮಂಗಳೂರು-ಮೈಸೂರು ಹೆದ್ದಾರಿಯ ಕೊಡಗು ಜಿಲ್ಲೆಯ ದೇವರಕೊಲ್ಲಿ ಎಂಬ ಊರಿನತ್ತ ತೆರಳಿ. ಮಡಿಕೇರಿ-ಮಂಗಳೂರು ಮಾರ್ಗದಲ್ಲಿ ಸಾಗುವಾಗ ಮಡಿಕೇರಿಯಿಂದ 19 ಕಿ.ಮೀ. ಮುಂದೆ ದೇವರಕೊಲ್ಲಿ ಎಂಬ ಪುಟ್ಟ ಊರು ಇದೆ. ಅಲ್ಲಿನ ವಸುಧಾ ಕ್ಯಾಂಟೀನ್ ನಲ್ಲಿ ಅಪರೂಪದ ಎಳನೀರು ಜೆಲ್ಲಿ ಸಿಗುತ್ತದೆ. ಕರ್ನಾಟಕ ಯಾಕೆ, ಇಡೀ ದೇಶದಲ್ಲೇ ಬೆರಳೆಣಿಕೆಯ ಮಂದಿ ಮಾತ್ರ ಎಳನೀರು ಜೆಲ್ಲಿ ಉತ್ಪಾದಿಸುತ್ತಾರೆ. ಥಾಯ್ಲಾಂಡ್, ಮಲೇಷಿಯಾದಂತಹ ದೇಶಗಳಲ್ಲಿ ತೆಂಗಿನ ಮೌಲ್ಯವರ್ಧಿತ ಉತ್ಪನ್ನವಾಗಿ ಹೆಸರು ಮಾಡಿರುವ ಟೆಂಡರ್ ಕೋಕೋನಟ್ ಜೆಲ್ಲಿಯನ್ನು ನಮ್ಮೂರಲ್ಲಿ ಉತ್ಪಾದಿಸಿದವರು ಕಮ್ಮಿ. ಹೀಗಿರುವಾಗ ಮಡಿಕೇರಿ ತಾಲೂಕು ಸಂಪಾಜೆಯ ರೈತ ಮಹಿಳೆ ವಸಂತಲಕ್ಷ್ಮೀ ಅವರು ತಮ್ಮ ಪತಿ ಸುಬ್ರಹ್ಮಣ್ಯ ಭಟ್ ಜೊತೆ ಸೇರಿ ಕಳೆದ 6 ವರ್ಷಗಳಿಂದ ವಸುಧಾ ಕ್ಯಾಂಟೀನಿನಲ್ಲಿ ಎಳನೀರು ಜೆಲ್ಲಿ ಮಾಡಿ ಹೆಸರು ಗಳಿಸಿದ್ದಾರೆ.
Egg Recipes: ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಫಟಾಫಟ್ ರೆಡಿ ಮಾಡ್ಬೋದು
ಹಿರಿಯ ಪತ್ರಕರ್ತ ಶ್ರೀಪಡ್ರೆ ಅವರು ಎಳನೀರು ಜೆಲ್ಲಿ ಕುರಿತು ತುಂಬ ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ಎಳನೀರು ಜೆಲ್ಲಿ ಉದ್ಯಮ ಶುರು ಮಾಡಿ ಯಶಸ್ವಿಯಾದವರು ಯಾರೂ ಇಲ್ಲ... ಎಳನೀರಿನ ಜೆಲ್ಲಿ ಕುರಿತು ನಾವು ಗಮನ ಹರಿಸಿದ್ದು ಸಾಲದು ಎನ್ನುತ್ತಾರೆ ಶ್ರೀಪಡ್ರೆ ಅವರು.
Buttermilk Benifits: ಆಯುರ್ವೇದಲ್ಲಿ ಮಜ್ಜಿಗೆಗೇಕೆ ಇಷ್ಟೊಂದು ಪ್ರಾಶಸ್ತ್ಯ?
ಕಾಡುಪ್ರಾಣಿಗಳ ಉಪಟಳದಿಂದ ತೋಟದ ಬೆಳೆ ಪೂರ್ಣ ಪ್ರಮಾಣದಲ್ಲಿ ಕೈ ಸೇರದಿದ್ದಾಗ ವಸಂತಲಕ್ಷ್ಮೀ ದಂಪತಿ ಕಂಡುಕೊಂಡದ್ದು ಕ್ಯಾಂಟೀನ್ ವ್ಯವಹಾರ. ಅವರ ಕ್ಯಾಂಟೀನಿನಲ್ಲಿ ಟೀ, ಕಾಫಿ, ಜೊತೆಗೆ ಅವರೇ ಜಮೀನಿನಲ್ಲಿ ಅಭಿವೃದ್ಧಿಪಡಿಸಿದ ಜೇನುತುಪ್ಪ, ಮನೆಯಲ್ಲೇ ತಯಾರಿಸುವ ವೈನ್, ತಾವೇ ಬೆಳೆದ ಹುಣಸೇ ಹಣ್ಣನ್ನು ಸಹಿತ ಮಾರಾಟ ಮಾಡುತ್ತಾರೆ. ಸ್ವಾಭಿಮಾನಿ ರೈತರು ಸ್ವಾವಲಂಬಿಗಳಾಗಬಹುದು ಎಂಬುದಕ್ಕೆ ಈ ರೈತ ದಂಪತಿ ಸಾಕ್ಷಿ.