ಮೊಟ್ಟೆ (Egg) ಅಂದ್ರೆ ಸಾಮಾನ್ಯವಾಗಿ ಎಲ್ರಿಗೂ ಇಷ್ಟ. ಚಿಕನ್ (Chicken), ಮಟನ್ ತಿನ್ನದವರು ಸಹ ಮೊಟ್ಟೆ ನೋಡಿದ್ರೆ ವಾವ್ ಅಂತಾರೆ. ಬಾಯಲ್ಲಿ ನೀರೂರಿಸೋ ಒಂದಿಷ್ಟು ಮೊಟ್ಟೆಯ ರೆಸಿಪಿ (Recipe)ಗಳು ಇಲ್ಲಿವೆ. ಬೆಳಗ್ಗಿನ ಬ್ರೇಕ್‌ಫಾಸ್ಟ್ (Breakfast)ಗೆ ಇದನ್ನು ಫಟಾಫಟ್ ರೆಡಿ ಮಾಡ್ಬೋದು
ಬೆಳಗ್ಗಿನ ಉಪಾಹಾರವು ದಿನದ ಪ್ರಮುಖ ಆಹಾರ (Food) ಎಂದು ನಮಗೆಲ್ಲರಿಗೂ ತಿಳಿದಿದೆ. ಬೆಳಗ್ಗೆ ಸಂಪೂರ್ಣವಾಗಿ ಹೊಟ್ಟೆ ತುಂಬಿದಾಗಲಷ್ಟೇ ದಿನವಿಡೀ ಚಟುವಟಿಕೆಯಿಂದಿರಲು ಸಾಧ್ಯ. ಹೀಗಾಗಿ ಬೆಳಗ್ಗಿನ ಆಹಾರದಲ್ಲಿ ಪ್ರೋಟೀನ್ (Protein), ಪೋಷಕಾಂಶಗಳ ಪ್ರಮಾಣ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಆದರೆ, ಆರೋಗ್ಯಕರ ಉಪಾಹಾರದ ವಿಷಯಕ್ಕೆ ಬಂದಾಗ, ನಮ್ಮಲ್ಲಿ ಹೆಚ್ಚಿನವರು ಏನನ್ನು ಸೇವಿಸಬೇಕೆಂದು ಗೊಂದಲಕ್ಕೊಳಗಾಗುತ್ತಾರೆ. ಪ್ರೋಟೀನ್, ವಿಟಮಿನ್, ಖನಿಜಗಳು ಹೀಗೆ ಆಹಾರದಲ್ಲಿ ಎಲ್ಲವೂ ಬೇಕೆಂದಾಗ ಮೊಟ್ಟೆಯನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ.
ಬೆಳಗಿನ ಉಪಾಹಾರವು ಪೌಷ್ಟಿಕ, ಆರೋಗ್ಯಕರ ಮತ್ತು ರುಚಿಕರವಾಗಿರಬೇಕು. ಆದರೆ ಈ ಎಲ್ಲಾ ವಿಷಯಗಳನ್ನು ಒಂದೇ ಭಕ್ಷ್ಯದಲ್ಲಿ ಸೇರಿಸುವುದು ಕಷ್ಟ ಎಂಬುದು ಹಲವರ ತಲೆನೋವು. ಆದರೆ ಕೆಲವೇ ಕೆಲವು ಪದಾರ್ಥಗಳೊಂದಿಗೆ ನೀವು ಪ್ರೋಟೀನ್ ಭರಿತ ಮತ್ತು ರುಚಿಕರವಾದ ಬ್ರೇಕ್‌ಫಾಸ್ಟ್ ತಯಾರಿಸಬಹುದು. 15 ನಿಮಿಷಗಳಲ್ಲಿ ಮಾಡಲು ಕೆಲವು ರುಚಿಕರವಾದ ಮೊಟ್ಟೆಯ ಉಪಾಹಾರ ಪಾಕವಿಧಾನಗಳು ಇಲ್ಲಿವೆ. ನೀವಿದನ್ನು ಬೆಳಗ್ಗಿನ ಬ್ರೇಕ್‌ಫಾಸ್ಟ್ (Breakfast)ಗೆ ಟ್ರೈ ಮಾಡ್ಬೋದು.
Food Tips: ಬಿರಿಯಾನಿ, ಬೇಯಿಸಿದ ಮೊಟ್ಟೆಯನ್ನು ಬಿಸಿ ಮಾಡಿ ತಿನ್ಬೋದಾ ?
ಬಿಹಾರಿ ಸ್ಟೈಲ್ ಎಗ್ ಪೌಚ್
ಹೆಸರಿನಲ್ಲೇ ಇರುವಂತೆ ಇದೊಂದು ಸ್ಪೆಷಲ್ ಬಿಹಾರಿ ಸ್ಟೈಲ್ ಎಗ್ ರೆಸಿಪಿ. ಅದರಲ್ಲೂ ಇದನ್ನು ಬಿಹಾರದ ಸ್ಟ್ರೀಟ್‌ನಲ್ಲಿ ಹೆಚ್ಚಾಗಿ ಮಾರಾಟ ಮಾಡಲಾಗುತ್ತದೆ. ದಿನದ ಯಾವುದೇ ಹೊತ್ತಿನಲ್ಲಿ ಇದನ್ನು ಸವಿಯಲು ಚೆನ್ನಾಗಿರುತ್ತದೆ. ಹೆಚ್ಚು ತರಕಾರಿಗಳನ್ನು ತಯಾರಿಸುವ ಈಗ ಎಗ್ ಪೌಚ್ ಪರಿಮಳಭರಿತವಾಗಿದ್ದು, ರುಚಿಯೂ ಅದ್ಭುತವಾಗಿರುತ್ತದೆ. .
ಮಸಾಲಾ ಮೊಟ್ಟೆ ಭುರ್ಜಿ
ಎಗ್ ಭುರ್ಜಿ ಸಾಮಾನ್ಯವಾಗಿ ಎಲ್ಲರ ಫೇವರಿಟ್. ಊಟ ಮಾಡುವಾಗ ಯಾಕೋ ತೀರಾ ಸಪ್ಪೆ ಸಪ್ಪೆ ಅನಿಸ್ತಿದೆ ಎಂದಾಗ ಮೊಟ್ಟೆಯನ್ನು ಒಡೆದು ಈರುಳ್ಳಿ, ಹಸಿಮೆಣಸಿಕಾಯಿ ಸೇರಿಸಿ ಬಾಣಲೆಗೆ ಹಾಕಿದರಾಯಿತು. ಮೇಲಿಂದ ಸ್ಪಲ್ಪ ಉಪ್ಪು, ಖಾರದ ಪುಡಿ ಚೆನ್ನಾಗಿ ಮಿಕ್ಸ್ ಮಾಡಿಬಿಟ್ಟರೆ ಎಗ್ ಭುರ್ಜಿ ರೆಡಿ. ಮಸಾಲಾ ಮೊಟ್ಟೆ ಭುರ್ಜಿ ಎಂಬುದು ರಸ್ತೆ ಬದಿಯ ಸ್ಟಾಲ್‌ಗಳು ಅಥವಾ ಹೆದ್ದಾರಿ ಡಾಬಾಗಳಲ್ಲಿ ಕಂಡುಬರುವ ಜನಪ್ರಿಯ ರೆಸಿಪಿಯಾಗಿದೆ.
ಎಗ್ ಮಫಿನ್
ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಮಾಡಿಕೊಳ್ಳಲು ಎಗ್ ಮಫಿನ್ ಅತ್ಯುತ್ತಮ ಆಯ್ಕೆ. ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಇದನ್ನು ತಯಾರಿಬಹುದು. ಮಾತ್ರವಲ್ಲ ಬಾಯಿಗೂ ಇದು ರುಚಿಕರವಾಗಿದೆ. ಎಗ್ ಮಫಿನ್ ತಾಜಾ ತರಕಾರಿಗಳು, ಮಾಂಸ ಮತ್ತು ಮಸಾಲೆಗಳಿಂದ ತುಂಬಿದ್ದು, ಆರೋಗ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಹೀಗಾಗಿಯೇ ಎಗ್ ಮಫಿನ್ ಆರೋಗ್ಯಕ್ಕೂ ಉತ್ತಮವಾಗಿದೆ.
Food Recrod: ಗಿನ್ನಿಸ್ ದಾಖಲೆಯಲ್ಲಿ ಉಗಾಂಡದ ಎಗ್ ರೋಲೆಕ್ಸ್..ಏನಿದು ?
ಚೀಸ್ ಎಗ್ ಟೋಸ್ಟ್
ಎಗ್ ಟೋಸ್ಟ್ ಒಂದು ರುಚಿಕರವಾದ ಮಸಾಲೆಯುಕ್ತ ಆಮ್ಲೆಟ್ ಆಗಿದೆ. ವಿದೇಶಿ ಸಂಸ್ಕೃತಿಯಲ್ಲಿ ಎಗ್ ಟೋಸ್ಟ್ ಬೆಳಗ್ಗಿನ ಉಪಾಹಾರಕ್ಕೆ ನೆಚ್ಚಿನ ಆಯ್ಕೆಯಾಗಿದೆ. ಭಾರತದಲ್ಲೂ ತ್ವರಿತವಾಗಿ ತಯಾರಿಸಬಹುದಾದ ಕಾರಣ ಬೆಳಗ್ಗಿನ ಬ್ರೇಕ್‌ಫಾಸ್ಟ್ ಎಗ್ ಟೋಸ್ಟ್‌ನ್ನು ಮಾಡಿಕೊಳ್ಳುತ್ತಾರೆ. ಅದರಲ್ಲೂ ಚೀಸ್ ಸೇರಿಸಿ ಮಾಡುವ ಎಗ್ ಟೋಸ್ಟ್‌ನ್ನು ಬಾಯಲ್ಲಿಟ್ಟರೆ ಕರಗುವಂತಿರುತ್ತದೆ. ಕೇವಲ ಐದೇ ನಿಮಿಷದಲ್ಲಿ ಇದನ್ನು ತಯಾರಿಸಬಹುದಾಗಿದೆ.
ಪಾಲಕ್ ಆಮ್ಲೆಟ್
ಪಾಲಕ್ ಆಮ್ಲೆಟ್ ಒಂದು ವಿಭಿನ್ನವಾಗಿರುವ ಆಮ್ಲೆಟ್ ರೆಸಿಪಿಯಾಗಿದೆ. ಇದನ್ನು ತಯಾರಿಸಲು ಮೊಟ್ಟೆ, ಈರುಳ್ಳಿ, ಪಾಲಕ್, ರುಚಿಗೆ ತಕ್ಕಷ್ಟು ಉಪ್ಪು ಮಸಾಲೆಯಿದ್ದರಷ್ಟೇ ಸಾಕು. ಮೊಟ್ಟೆಯನ್ನು ಬಾಣಲೆಗೆ ಒಡೆದು ಹಾಕಿ, ಇದಕ್ಕೆ ಸಣ್ಣಗೆ ಕತ್ತರಿಸಿದ ಪಾಲಕ್ ಸೊಪ್ಪು ಮತ್ತು ಈರುಳ್ಳಿಯನ್ನು ಸೇರಿಸಿಕೊಳ್ಳಬೇಕು. ಮೇಲಿನಿಂದ ರುಚಿಗೆ ತಕ್ಕಷ್ಟು ಉಪ್ಪು, ಇತರ ಮಸಾಲೆಗಳನ್ನು ಸೇರಿಸಿದರೆ ಪಾಲಕ್ ಆಮ್ಲೆಟ್ ರೆಡಿ.
ಮೊಟ್ಟೆಯ ಈ ಎಲ್ಲಾ ರೆಸಿಪಿಗಳನ್ನು ಬೆಳಗ್ಗಿನ ಹೊತ್ತು ತಯಾರಿಸುವುದಾದರೆ ಹೆಚ್ಚಿನ ಮಸಾಲೆ ಸೇರಿಸುವ ಅಗತ್ಯವಿಲ್ಲ. ಯಾಕೆಂದರೆ ಬೆಳಗ್ಗೇ ಅತಿಯಾದ ಮಸಾಲೆ ಸೇವನೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.
