Pitru Paksha 2022: ಸುಮ್ಮನೆಯಲ್ಲ ಮಾನವ ಜನ್ಮ ತಾಳುವುದು, ಇದು ಎಂಥ ಕಠಿಣ ಹಾದಿ ಗೊತ್ತಾ?
ಜನ್ಮ ತಳೆದ ಮೇಲೆ ತಂದೆ ತಾಯಿ, ಕುಟುಂಬದ ಹಿರಿಯರು ಸಂಸ್ಕಾರ ಕೊಡಲು ತಮ್ಮ ಜೀವವನ್ನೇ ತೇಯ್ದಿರುತ್ತಾರೆ. ಹಾಗಾಗಿ, ಅವರನ್ನು ಬದುಕಿರುವವರೆಗೂ ಸ್ಮರಿಸಬೇಕು..
ಮಾನವ ಜನ್ಮ ದೊಡ್ಡದು. ಮೋಕ್ಷ ಬೇಕೆಂದರೆ ಈ ಜನ್ಮದಲ್ಲಿ ಸಾಕಷ್ಟು ಪುಣ್ಯದ ಕೆಲಸಗಳನ್ನು ಮಾಡಬೇಕು. ಗುರುಹಿರಿಯರ ಆಶೀರ್ವಾದ ಪಡೆಯಬೇಕು. ಪಂಚಭೂತಗಳಿಂದ ಈ ಶರೀರವಾಗಿದೆ. ದೈವತ್ವ ಪಡೆಯುವ ಹಾದಿ ಎಂಥದ್ದು? ಪಿತೃಲೋಕದಲ್ಲಿ ಏನೆಲ್ಲ ಆಗುತ್ತದೆ? ಚಿತ್ರಗುಪ್ತ ಎಂದರೆ ನಮ್ಮದೇ ಮಸ್ತಿಷ್ಕವಾಗಿದ್ದು, ಅದು ಪಿತೃಲೋಕದಲ್ಲಿ ತನ್ನ ಖಾತೆಯಿಂದ ಪುಣ್ಯ ಪಾಪಗಳ ಲೆಕ್ಕ ಹಾಕುತ್ತದೆ.
Pitru Paksha 2022: ಹುಟ್ಟುತ್ತಲೇ ಜೊತೆಯಾಗುವ ಮೂರು ಋಣಗಳು, ಈ ಭಾರ ಕಳಚಿಕೊಳ್ಳುವುದು ಹೇಗೆ?
ಈ ಮಾನವ ಜನ್ಮ ತಾಳುವುದು ಎಷ್ಟು ವಿಶೇಷವಾಗಿದೆ ಎಂಬುದನ್ನು ಜ್ಯೋತಿಷಿಗಳಾದ ಭಾನುಪ್ರಕಾಶ್ ಶರ್ಮಾ ತಿಳಿಸುತ್ತಾರೆ ಕೇಳೋಣ. ಜೊತೆಗೆ, ಇಂಥ ಮಾನವ ಜನ್ಮ ತಳೆದ ಮೇಲೆ ತಂದೆ ತಾಯಿ, ಕುಟುಂಬದ ಹಿರಿಯರು ಸಂಸ್ಕಾರ ಕೊಡಲು ತಮ್ಮ ಜೀವವನ್ನೇ ತೇಯ್ದಿರುತ್ತಾರೆ. ಹಾಗಾಗಿ, ಅವರನ್ನು ಬದುಕಿರುವವರೆಗೂ ಸ್ಮರಿಸಬೇಕು..