ಗೌರಿ ಹಬ್ಬ ಯಾವಾಗ ಆಚರಿಸ್ಬೇಕು? ಗಣೇಶ ಹಬ್ಬದ ದಿನ ಗೌರಿ ಪೂಜೆ ಇದ್ಯಾ?
ಗೌರಿ ಹಬ್ಬ ಆಚರಣೆ ಹೇಗೆ? ಗಣೇಶ ಹಬ್ಬದ ದಿನವೂ ಗೌರಿ ಪೂಜೆ ಮಾಡಬೇಕಾ? ಪೂಜಾ ವಿಧಾನವೇನು?
ಗಣೇಶ ಚತುರ್ಥಿಯ ಒಂದು ದಿನ ಮುಂಚಿತವಾಗಿ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂದರ್ಭವು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಭಾಗಗಳಲ್ಲಿ ಜನರು ಪಾರ್ವತಿ ದೇವಿಯ ಅವತಾರವಾದ ದೇವಿ ಗೌರಿಯನ್ನು ಪೂಜಿಸುವ ಮಹತ್ವದ ಹಬ್ಬವಾಗಿದೆ. ಅವಳು ಎಲ್ಲಾ ದೇವತೆಗಳಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಆದಿ ಶಕ್ತಿ ಮಹಾಮಾಯೆಯ ಅಭಿವ್ಯಕ್ತಿ. ಗೌರಿ ಹಬ್ಬವನ್ನು ಹೇಗೆ ಆಚರಿಸಬೇಕು? ಎರಡೂ ದಿನ ಆಚರಣೆ ಬೇಕೇ? ವಿವರಣೆ ನೀಡಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.