Asianet Suvarna News Asianet Suvarna News

ಶರವಣ ನಿವಾಸದಲ್ಲಿ 10 ಸಾವಿರ ಗೋಲ್ಡ್‌ ಕಾಯಿನ್ ಬಳಸಿ ಲಕ್ಷ್ಮೀಗೆ ಸಿಂಗಾರ!

ಸಾಯಿಗೋಲ್ಡ್ ಪ್ಯಾಲೇಸ್ ಮಾಲೀಕ ಟಿ ಎ ಶರವಣ ನಿವಾಸದಲ್ಲಿ ವರಮಹಾಲಕ್ಷ್ಮೀ ಪೂಜೆ ವೈಭವಯುತವಾಗಿ ನಡೆಯಿತು. 

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಧಾನ ಪರಿಷತ್ ಸದಸ್ಯ ಹಾಗೂ ಸಾಯಿಗೋಲ್ಡ್ ಮಾಲೀಕ ಟಿ ಎ ಶರವಣ ಮನೆಯಲ್ಲಿ ವಿಶೇಷ ಪೂಜೆ ನಡೆಯಿತು. ಅಲಂಕಾರಕ್ಕೆ ಬರೋಬ್ಬರಿ 10,000 ಚಿನ್ನದ ನಾಣ್ಯಗಳನ್ನು ಬಳಸಲಾಗಿದ್ದು ಕಣ್ಮನ ಸೆಳೆಯುವಂತಿತ್ತು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲು ಪ್ರಾರ್ಥಿಸಲಾಯಿತು. 
ಈ ಸಂದರ್ಭದಲ್ಲಿ ಮಾತನಾಡಿದ ಶರವಣ, 'ಅಲಂಕಾರ ಪ್ರಿಯೆ ಲಕ್ಷ್ಮಿಯನ್ನು ಎಷ್ಟು ಅಲಂಕರಿಸಿದರೂ ಸಾಲದು. ಹೀಗಾಗಿ, ಪ್ರತಿ ವರ್ಷ ನಾವು ವಿಭಿನ್ನ ರೀತಿಯಲ್ಲಿ ಆಕೆಯನ್ನು ಅಲಂಕರಿಸುತ್ತೇವೆ' ಎಂದರು.

ಮಕರ ರಾಶಿಯವರ ಧನಯೋಗ; ನಿಮ್ಮ ಜಾತಕದಲ್ಲಿದೆಯಾ ಇಂಥ ಲಕ್ಷಣ?

ಶರವಣ ಮನೆಯ ಲಕ್ಷ್ಮೀ ಅಲಂಕಾರ ನೋಡೋದೇ ಕಣ್ಣಿಗೊಂದು ಹಬ್ಬ.. ನೋಡೋಣ ಬನ್ನಿ..