Asianet Suvarna News Asianet Suvarna News

ರಾಧಾದೇವಿಯ ಶಾಪ, ಗಂಗೆಗಾಗಿ ಹುಡುಕಾಟ, ಮುಂದೆ ನದಿಯಾಗಿ ಅವತರಿಸಿದ ಗಂಗೆ

ಗಂಗೆ ಹುಟ್ಟಿರುವುದು ಪರಾಶಕ್ತಿಯಿಂದ. ದೇವಿಯ ಭಕ್ತರು ಯಾವಾಗ ಬಂದು ನನ್ನಲ್ಲಿ ಸ್ನಾನ ಮಾಡುತ್ತಾರೋ ಎಂದು ಕಾಯುತ್ತಾಳಂತೆ. ಹಿಂದೆ ಒಮ್ಮೆ ಭೂಲೋಕದಲ್ಲಿ ದೊಡ್ಡ ಕಾರ್ಯಕ್ರಮ ನಡೆಯುತ್ತದೆ. 

ಗಂಗೆ ಹುಟ್ಟಿರುವುದು ಪರಾಶಕ್ತಿಯಿಂದ. ದೇವಿಯ ಭಕ್ತರು ಯಾವಾಗ ಬಂದು ನನ್ನಲ್ಲಿ ಸ್ನಾನ ಮಾಡುತ್ತಾರೋ ಎಂದು ಕಾಯುತ್ತಾಳಂತೆ. ಹಿಂದೆ ಒಮ್ಮೆ ಭೂಲೋಕದಲ್ಲಿ ದೊಡ್ಡ ಕಾರ್ಯಕ್ರಮ ನಡೆಯುತ್ತದೆ. ಆಗ ಸರಸ್ವತಿ ವೀಣೆ ನುಡಿಸುತ್ತಿರುತ್ತಾಳೆ. ದೇವತೆಗಳೆಲ್ಲಾ ರಾಧಾ ಕೃಷ್ಣರ ಸ್ತುತಿ ಮಾಡುತ್ತಾರೆ. ಇದ್ದಕ್ಕಿದ್ದಂತೆ ರಾಧಾಕೃಷ್ಣರು ಮಾಯವಾಗುತ್ತಾರೆ.

ಸರಸ್ವತಿ ದೇವಿ, ಗಂಗೆಗೆ ಕೊಟ್ಟ ಶಾಪವನ್ನು ಶ್ರೀಹರಿ ಬಗೆಹರಿಸಿದ ಕಥೆಯಿದು

ಭೂಲೋಕವೆಲ್ಲಾ ಜಲಮಯವಾಗುತ್ತದೆ. ರಾಧಾಕೃಷ್ಣರು ಜಲರೂಪ ಧರಿಸಿದ್ಧಾರೆಂದು ದೇವತೆಗಳು ಭಾವಿಸುತ್ತಾರೆ. ಜಲದಿಂದ ಒಂದು ಕನ್ಯೆ ಹುಟ್ಟುತ್ತಾಳೆ. ಕೃಷ್ಣನನ್ನೇ ನೋಡುತ್ತಾಳೆ. ರಾಧೆಗೆ ಕೋಪಬಂದು ಆ ಕನ್ಯೆಗೆ ಶಪಿಸುತ್ತಾಳೆ. ಇದರಿಂದ ಭಯಗೊಂಡ ಕನ್ಯೆ ಕರಗಿ ನೀರಾಗುತ್ತಾಳೆ. ಆ ನೀರನ್ನು ಕುಡಿಯಲು ರಾಧಾದೇವಿ ಮುಂದಾಗುತ್ತಾಳೆ. ರಾಧೆಗೆ ಗೊತ್ತಾಗದೇ ಆ ನೀರು ಬ್ರಹ್ಮನ ಪಾದ ಸೇರುತ್ತದೆ. ಆ ಕನ್ಯೆಯೇ ಮುಂದೆ ಗಂಗಾದೇವಿಯಾಗುತ್ತಾಳೆ. 

Video Top Stories