
ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಈ ಗ್ರಹಣ; ಇಲ್ಲಿದೆ ಕಾರಣ
ಅಕ್ಟೋಬರ್ 25ರಂದು ಜರುಗಲಿರುವ ಕೇತುಗ್ರಸ್ತ ಸೂರ್ಯಗ್ರಹಣ
ತುಲಾ ರಾಶಿ, ಸ್ವಾತಿ ನಕ್ಷತ್ರದಲ್ಲಿ ನಡೆಯಲಿರುವ ಗ್ರಹಣ
ಸರಣಿ ಘೋರ ಅಪಘಾತ, ಪರ್ವತ ಕುಸಿತ, ಭೂಕಂಪ,
ಮುಂದುವರೆಯಲಿರುವ ಅಡ್ಡಮಳೆ, ಕ್ಷಿಪ್ರ ಪ್ರವಾಹ, ಮೇಘಸ್ಪೋಟ
ಗ್ರಹ ಎಂದರೆ ಸುತ್ತುವುದು. ತನ್ನದೇ ಗತಿಯಲ್ಲಿ ನಡೆಯುತ್ತಿರುವ ಜಗತ್ತಿಗೆ ಅಡೆತಡೆ ಉಂಟಾಗುವುದೇ ಗ್ರಹಣ. ತುಲಾ ರಾಶಿಯಲ್ಲಿ ನಡೆಯುತ್ತಿರುವ ಈ ಸೂರ್ಯಗ್ರಹಣದ ವಿಶೇಷವೇನು? ಈ ಬಾರಿಯ ಗ್ರಹಣ ಬಹಳ ಕೆಟ್ಟ ಸಮಯದಲ್ಲಿ ನಡೆಯುತ್ತಿದೆ. ಈ ಕಾರಣದಿಂದ ಈ ಬಾರಿಯ ಗ್ರಹಣ ಬಹಳ ಕೆಟ್ಟ ಪರಿಣಾಮಗಳನ್ನು ಬೀರಲಿದೆ.ಆ ಕೆಟ್ಟ ಗ್ರಹಚಾರಗಳು ಯಾವೆಲ್ಲ ಎಂಬುದನ್ನು ವಿವರಿಸುತ್ತಾರೆ ಆಧ್ಯಾತ್ಮ ವಿದ್ವಾಂಸರಾದ ಡಾ. ಹರೀಶ್ ಕಶ್ಯಪ.
ಗ್ರಹಣ ಕಾಲದಲ್ಲಿ ಮಾಡುವ ದಾನದ ಪುಣ್ಯ ಸಹಸ್ರ ಪಟ್ಟಾಗುವುದು!
ಈ ಬಾರಿಯ ಸೂರ್ಯಗ್ರಹಣದಿಂದ ಪ್ರಾಕೃತಿಕ ಬಾಧೆಗಳು ಹೆಚ್ಚುತ್ತವೆ, ಸಮಸ್ಯೆಗಳು ಹೆಚ್ಚುತ್ತವಂತೆ.. ಯಾವೆಲ್ಲ ಸಮಸ್ಯೆಗಳನ್ನು ಜಗತ್ತು ನೋಡಬೇಕಾಗಿದೆ?