ಇಚ್ಛಾಮರಣಿಗಳಾಗಿದ್ದ ಮಧುಕೈಟಭರು ಶ್ರೀಹರಿಯಿಂದ ಸಂಹಾರವಾಗಿದ್ದು ಹೀಗೆ

ಮಧುಕೈಟಭರು ಶ್ರೀಮಾತೆಯಿಂದ ಇಚ್ಛಾಮರಣ ವರ ಪಡೆದಿರುವುದು ಗೊತ್ತಾಗುತ್ತದೆ. ಶ್ರೀಹರಿ ಅಮ್ಮನನ್ನು ಪ್ರಾರ್ಥಿಸುತ್ತಾನೆ. ಶ್ರೀಮಾತೆ ಅನುಗ್ರಹಿಸುತ್ತಾಳೆ. ಶ್ರೀಹರಿ ಯುದ್ಧ ಮುಂದುವರೆಸುತ್ತಾನೆ. 

First Published Apr 21, 2021, 10:17 AM IST | Last Updated Apr 21, 2021, 10:17 AM IST

 ಮಧುಕೈಟಭರು ಶ್ರೀಮಾತೆಯಿಂದ ಇಚ್ಛಾಮರಣ ವರ ಪಡೆದಿರುವುದು ಗೊತ್ತಾಗುತ್ತದೆ. ಶ್ರೀಹರಿ ಅಮ್ಮನನ್ನು ಪ್ರಾರ್ಥಿಸುತ್ತಾನೆ. ಶ್ರೀಮಾತೆ ಅನುಗ್ರಹಿಸುತ್ತಾಳೆ. ಶ್ರೀಹರಿ ಯುದ್ಧ ಮುಂದುವರೆಸುತ್ತಾನೆ. ಶ್ರೀಮಾತೆ ಸುಂದರವಾದ ಸ್ತ್ರೀ ರೂಪ ತಾಳಿ ರಾಕ್ಷಸರ ಎದುರು ಪ್ರತ್ಯಕ್ಷಳಾಗುತ್ತಾಳೆ.

ಯೋಗನಿದ್ರೆಯಲ್ಲಿದ್ದ ಶ್ರೀಹರಿಯನ್ನು ಎಬ್ಬಿಸು, ಬ್ರಹ್ಮದೇವನ ಕೋರಿಕೆ ಈಡೇರಿಸಿದ ದೇವಿ

ಆಕೆಯ ಸೌಂದರ್ಯಕ್ಕೆ ರಕ್ಕಸಲು ಮನಸೋತು, ಯುದ್ದ ಕೈ ಬಿಡುತ್ತಾರೆ. ಆಗ ವಿಷ್ಣು ಮಧುಕೈಟಭರೇ, ನಿಮಗೇನು ವರ ಬೇಕೋ ಕೇಳಿ ಎನ್ನುತ್ತಾನೆ. ಆಗ ರಾಕ್ಷಸರು, ನೀನೇನು ವರ ಕೊಡುವುದು, ನಾವೇ ಕೊಡುತ್ತೇವೆ ಕೇಳು ಎನ್ನುತ್ತಾರೆ. ಇದೇ ಸಮಯಕ್ಕೆ ಕಾಯುತ್ತಿದ್ದ ಹರಿ, ನಿಮ್ಮ ಮರಣ ನನ್ನಿಂದಾಗಬೇಕು ಎನ್ನುತ್ತಾನೆ. ಕೊನೆಗೆ ಸುದರ್ಶನ ಚಕ್ರ ಪ್ರಯೋಗಿಸಿ ಸಂಹಾರ ಮಾಡುತ್ತಾನೆ.