ಸಾವರ್ಕರ್ ಸಾಮ್ರಾಜ್ಯವಾಯ್ತು ಶಿವಮೊಗ್ಗದ ಹಿಂದೂ ಮಹಾಸಭಾ ಗಣೇಶೋತ್ಸವ!

ಸಾವರ್ಕರ್ ಸಾಮ್ರಾಜ್ಯವಾಯ್ತು ಹಿಂದೂ ಮಹಾಸಭಾ ಗಣೇಶೋತ್ಸವ
ಶಿವಮೊಗ್ಗ ಗಣಪತಿಗೂ ಸಾವರ್ಕರ್‌ಗೂ ಇದೆ  79 ವರ್ಷದ ಇತಿಹಾಸ
ಸಾವರ್ಕರ್ ಫ್ಲೆಕ್ಸ್ ಹರಿದ ಜಾಗದಲ್ಲೇ  ಹಿಂದೂ ಸಾಮ್ರಾಜ್ಯ ಸ್ಥಾಪನೆ

First Published Sep 13, 2022, 12:02 PM IST | Last Updated Sep 13, 2022, 12:02 PM IST

ಹಚ್ಚಹಸುರಿನ ಶಾಂತ ಪರಿಸರವಾಗಿದ್ದ ಶಿವಮೊಗ್ಗ, ಇತ್ತೀಚೆಗೆ ಹಿಂದೂ ಯುವಕರ ಹತ್ಯೆಯಿಂದ ಧರ್ಮದಂಗಲ್‌ಗೆ ಹೆಸರಾಗಿದೆ. ಹರ್ಷ ಕೊಲೆ, ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಹಿಂಸಾಚಾರ, ಆಕ್ರೋಶ ಹೆಚ್ಚಿದ್ದು ಇದೊಂದು ಕೋಮ ಸೂಕ್ಷ್ಮ ಜಿಲ್ಲೆಯಾಗಿ ಬದಲಾಗಿದೆ. ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಗಣೇಶೋತ್ಸವದಲ್ಲಿ ಪ್ರತಿ ವರ್ಷ ಸದ್ದು ಮಾಡುತ್ತದೆ. ಇದಕ್ಕೆ ಕಾರಣ ಇದನ್ನು ದೊಡ್ಡದಾಗಿ ಆಚರಿಸುವುದು. ಈ ಗಣೇಶೋತ್ಸವದಲ್ಲಿ ಸಾವಿರಾರು ಜನ ಕುಣಿದು ಕುಪ್ಪಳಿಸಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.

Color Astro: ಮೇಷಕ್ಕೆ ಕಪ್ಪು ಬಣ್ಣ ತರುತ್ತೆ ದುರದೃಷ್ಟ, ದೂರವಿಡಿ!

ಕೇಸರಿ ಧ್ವಜ ಹಿಡಿದ ಹಿಂದೂ ಕಾರ್ಯಕರ್ತರು ಡ್ಯಾನ್ಸ್ ಮಾಡುವುದನ್ನು ನೋಡುವುದೇ ಮತ್ತೊಂದು ಹಬ್ಬ. ಈ ಬಾರಿಯ ಹಬ್ಬದಲ್ಲಿ ಶಿವಮೊಗ್ಗ ನಗರದ ಎಲ್ಲೆಡೆ ಹರ್ಷ ಹಾಗೂ ಪ್ರವೀಣ್ ನೆಟ್ಟಾರು ಫ್ಲೆಕ್ಸ್ ಎಲ್ಲೆಡೆ ರಾರಾಜಿಸಿದ್ವು. ಜೊತೆಗೆ ಕಿಡಿಗೇಡಿಗಳು ಸಾವರ್ಕರ್ ಫ್ಲೆಕ್ಸ್ ಹರಿದ ಜಾಗದಲ್ಲೇ ಈ ಬಾರಿ ಸಾವರ್ಕರ್ ಫ್ಲೆಕ್ಸ್ ಹಾಕಿ ಸಂಭ್ರಮಿಸಿದ್ರು ಹಿಂದೂ ಮಹಾಸಭಾ ಯುವಕರು. ಈ ಬಗ್ಗೆ ವಿವರವಾಗಿ ನೋಡೋಣ ಬನ್ನಿ..