Color Astro: ಮೇಷಕ್ಕೆ ಕಪ್ಪು ಬಣ್ಣ ತರುತ್ತೆ ದುರದೃಷ್ಟ, ದೂರವಿಡಿ!
ಬಣ್ಣಗಳೆಲ್ಲವೂ ಸುಂದರವೇ. ಆದರೂ ಎಲ್ಲ ರಾಶಿಯವರಿಗೂ ಎಲ್ಲ ಬಣ್ಣಗಳೂ ಆಗಿ ಬರುವುದಿಲ್ಲ. ಅಂತೆಯೇ ಮೇಷವು ಯಾವುದೇ ಕಾರಣಕ್ಕೂ ಕಪ್ಪು ಬಣ್ಣವನ್ನು ಬಳಸಬಾರದು. ಏಕೆ, ಧರಿಸಿದರೆ ಏನಾಗುತ್ತದೆ ತಿಳಿಯೋಣ.
ಪ್ರತಿಯೊಬ್ಬರಿಗೂ ಫೇವರೇಟ್ ಬಣ್ಣಗಳಿರುತ್ತವೆ. ಆದರೆ ನಮ್ಮ ರಾಶಿಚಕ್ರದ ಪ್ರಕಾರ ನಮ್ಮ ಅದೃಷ್ಟದ ಬಣ್ಣಗಳನ್ನು ನಾವು ತಿಳಿದಿದ್ದರೆ ಫೇವರೇಟ್ ಬಣ್ಣದ ವ್ಯಾಖ್ಯಾನ ಬದಲಾಗಬಹುದು. ಹೌದು, ಯಾವುದು ಅದೃಷ್ಟ ತರುತ್ತದೆಯೋ ಅದೇ ನೆಚ್ಚಿನ ಬಣ್ಣವಾಗಿದ್ದರೆ ಒಳಿತಲ್ಲವೇ? ಪ್ರತಿಯೊಂದು ರಾಶಿಚಕ್ರ ಚಿಹ್ನೆಯನ್ನು ವಿಭಿನ್ನ ಗ್ರಹಗಳು ಆಳುತ್ತವೆ. ಅಂದರೆ ಎಲ್ಲಾ ರಾಶಿಚಕ್ರ ಚಿಹ್ನೆಗಳು ವಿಭಿನ್ನ ಅನುಕೂಲಕರ ಮತ್ತು ಪ್ರತಿಕೂಲವಾದ ಬಣ್ಣಗಳನ್ನು ಹೊಂದಿರುತ್ತವೆ. ಈ ವಿಧವಾಗಿ ನೋಡಿದಾಗ ಮೇಷ ರಾಶಿಯು ಯಾವುದೇ ಕಾರಣಕ್ಕೂ ಕಪ್ಪು ಬಣ್ಣವನ್ನು ಬಳಸಬಾರದು. ಏಕೆಂದರೆ ಮೇಷಕ್ಕೆ ಕಪ್ಪು ದುರದೃಷ್ಟ ತರುತ್ತದೆ. ಮೇಷದ ಅದೃಷ್ಟದ ಬಣ್ಣ ಯಾವುದು, ಕಪ್ಪು ಬಣ್ಣವನ್ನೇಕೆ ಬಳಸಬಾರದು ತಿಳಿಯೋಣ ಬನ್ನಿ..
ಮೇಷದ ಸ್ವಭಾವ(Nature of Aries)
ತಮ್ಮ ಸಹವರ್ತಿ ಅಗ್ನಿ ಚಿಹ್ನೆಗಳಾದ ಸಿಂಹ ಮತ್ತು ಧನು ರಾಶಿಯಂತೆ, ಮೇಷ ರಾಶಿಯು ಉತ್ಸಾಹಭರಿತ, ಪ್ರೇರಿತ ಮತ್ತು ಆತ್ಮವಿಶ್ವಾಸದ ನಾಯಕನಾಗಿದೆ. ಈ ರಾಶಿಯವರು ತಮ್ಮ ಹರ್ಷಚಿತ್ತದಿಂದ ಮತ್ತು ಪಟ್ಟುಬಿಡದ ನಿರ್ಣಯದಿಂದ ಸಮುದಾಯವನ್ನು ನಿರ್ಮಿಸುತ್ತಾರೆ. ತಮ್ಮ ವಿಧಾನದಲ್ಲಿ ನೇರ ಸ್ವಭಾವದವರರಾದ, ಅವರು ಸಾಮಾನ್ಯವಾಗಿ ಎಲ್ಲೆಡೆ ಎದ್ದು ಕಾಣುತ್ತಾರೆ.
ಮೇಷಕ್ಕೆ ಅದೃಷ್ಟದ ಬಣ್ಣ(Lucky colour for Aries)
ಮಂಗಳ ಗ್ರಹದಿಂದ ಆಳಲ್ಪಡುವ ಮೇಷ ರಾಶಿಯು ರಾಶಿಚಕ್ರದಲ್ಲಿ ಮೊದಲನೆಯದಾಗಿದೆ. ಬೆಂಕಿಯ ಚಿಹ್ನೆಯಾಗಿರುವುದರಿಂದ, ಇದು ಉರಿಯುತ್ತಿರುವುದು ಮತ್ತು ಚಲಿಸಬಲ್ಲದು ಎಂದು ಪರಿಗಣಿಸಲಾಗುತ್ತದೆ. ಮಂಗಳದ ಬಣ್ಣ ಕೆಂಪು. ಹೀಗಾಗಿ ಮೇಷ ರಾಶಿಯವರಿಗೆ ಕೆಂಪು ಬಣ್ಣವು ಮಂಗಳಕರವಾಗಿದೆ. ಕೆಂಪು ಬಣ್ಣವು ಶಕ್ತಿ, ಚಲನಶೀಲತೆ, ಆಕ್ರಮಣಶೀಲತೆ, ಶಕ್ತಿ, ಪ್ರೇರಣೆ ಮತ್ತು ಶುದ್ಧತೆಯನ್ನು ಸಂಕೇತಿಸುತ್ತದೆ. ಇದೇ ಮೇಷದವರ ಸ್ವಭಾವವೂ ಆಗಿರುವುದರಿಂದ ಇದು ಈ ರಾಶಿಗೆ ಅದೃಷ್ಟವಾಗಿದೆ. ಕೆಂಪು ಮಾತ್ರವಲ್ಲದೆ ಕೇಸರಿ ಮತ್ತು ಹಳದಿಯಂತಹ ಬಣ್ಣಗಳೂ ಮೇಷ ರಾಶಿಯವರಿಗೆ ಅದೃಷ್ಟ ತರುತ್ತವೆ. ಈ ಬಣ್ಣಗಳಲ್ಲಿ ಮೇಷ ರಾಶಿಯವರ ಚೈತನ್ಯ ಸಂಪೂರ್ಣತೆಯಿಂದ ಪ್ರಕಾಶಿಸುತ್ತದೆ.
ಕಪ್ಪು ಬೇಡ
ನೀವು ಮೇಷ ರಾಶಿಯವರಾದರೆ, ಯಾವುದೇ ಕಾರಣಕ್ಕೂ ಕಪ್ಪು ಬಣ್ಣ(Black colour)ವನ್ನು ಬಳಸಬೇಡಿ. ಕಪ್ಪು ಬಣ್ಣವು ಶನಿಗೆ ಸಂಬಂಧಿಸಿದೆ. ಶನಿಯು ಮಂಗಳ ಗ್ರಹಕ್ಕೆ ವಿರುದ್ಧವಾಗಿದೆ. ಇವೆರಡ ಶತ್ರು ಗ್ರಹಗಳಾಗಿವೆ. ಹಾಗಾಗಿ, ಕಪ್ಪು ಬಣ್ಣವನ್ನು ಧರಿಸಿದಾಗ ಈ ಎರಡು ಗ್ರಹಗಳ ವಿರುದ್ಧ ಪರಿಣಾಮದಿಂದ ಮೇಷ ರಾಶಿಯ ಮನಸ್ಸು ಪ್ರಕ್ಷುಬ್ಧತೆ ಅನುಭವಿಸುತ್ತದೆ. ಅಲ್ಲದೆ, ಕಪ್ಪು ಬಣ್ಣವು ನಿಗೂಢತೆಯ ಬಣ್ಣವಾಗಿದೆ. ಮೇಷ ರಾಶಿಯವರು ಧೈರ್ಯಶಾಲಿಗಳು ಮತ್ತು ಮೇರ ಸ್ವಭಾವದವರು, ಅವರಲ್ಲಿ ಗುಟ್ಟಿಲ್ಲ. ಹಾಗಾಗಿ, ಕಪ್ಪು ನಿಮಗೆ ಪ್ರಯೋಜನಕಾರಿಯಲ್ಲ.
ಕಪ್ಪು ಸ್ವಭಾವಕ್ಕೆ ಮಂದತೆ ತರುತ್ತದೆ..
ಮೊದಲೇ ಹೇಳಿದಂತೆ ಶನಿ ಗ್ರಹ ಮತ್ತು ಮಂಗಳಕ್ಕೂ ಆಗದ ಕಾರಣ, ಕಪ್ಪನ್ನು ಧರಿಸಿದಾಗ ಮೇಷ ರಾಶಿಯವರು ತಮ್ಮ ಸ್ವಭಾವಕ್ಕೆ ವಿರುದ್ಧವಾಗಿ ಮಂದವಾಗುತ್ತಾರೆ. ವಿಷಯಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಮತ್ತು ಪೂರ್ಣಪ್ರಮಾಣದಲ್ಲಿ ತಾವು ತಾವಾಗಿಯೇ ಇರಲು ಆಗದೆ ಒದ್ದಾಡುತ್ತಾರೆ.
ಈ ಬಣ್ಣಗಳನ್ನೂ ತಪ್ಪಿಸಿ
ಮೇಷ ರಾಶಿಯವರು ಕಪ್ಪು ಮಾತ್ರವಲ್ಲದೆ, ಕಡು ನೀಲಿ(Dark blue) ಬಣ್ಣದಿಂದ ಕೂಡ ದೂರವಿರಬೇಕು. ಗಾಢ ಹಸಿರು ಕೂಡಾ ಬೇಡ. ಈ ಬಣ್ಣಗಳು ನಿಮ್ಮ ಸ್ವತಂತ್ರ ಮತ್ತು ಸೃಜನಶೀಲ ಸ್ವಭಾವವನ್ನು ಮಂದಗೊಳಿಸುತ್ತವೆ.
ಈ ಬಣ್ಣ ಬಳಸಬಹುದು
ನೀವು ಪುನಶ್ಚೇತನಗೊಳಿಸಲು ಅಥವಾ ಜೀವಕ್ಕೆ ತರಲು ಅಗತ್ಯವಿರುವ ಕೆಂಪು ಬಣ್ಣ(Red colour)ವನ್ನು ನಿಮ್ಮ ಮನೆಯಲ್ಲಿ ಎಲ್ಲಿಯಾದರೂ ಇರಿಸಿ. ಬಟ್ಟೆಯಲ್ಲೂ ಬಳಸಿ. ಇದಲ್ಲದೆ, ಕಿತ್ತಳೆ ಬಣ್ಣ, ಹಳದಿ, ಗೋಲ್ಡ್ ಕಲರ್, ಸಾಸಿವೆ ಬಣ್ಣಗಳು ನಿಮಗೆ ಅದೃಷ್ಟದಾಯಕವಾಗಿವೆ. ಬಿಳಿ ಮತ್ತು ಗುಲಾಬಿ ಬಣ್ಣಗಳು ನಿಮ್ಮ ಉರಿವ ಸ್ವಭಾವಕ್ಕೆ ಶಾಂತತೆ ತರಲು ಸಹಾಯ ಮಾಡುತ್ತವೆ.