ಜುಲೈ 12ಕ್ಕೆ ಮಕರದಲ್ಲಿ ಶನಿ ವಕ್ರಿ; ದ್ವಾದಶ ರಾಶಿಗಳ ಫಲ ಹೀಗಿದೆ..
ಜುಲೈ 12ರಂದು ಮಕರ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆ ಪ್ರಾರಂಭಿಸಲಿದ್ದಾನೆ. ಇದರ ಪ್ರಭಾವ ಯಾವ ರಾಶಿಯ ಮೇಲೆ ಏನಿರುತ್ತದೆ ಎಂಬುದನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.
ದುಃಖ, ನೋವು, ಸಂಕಟ, ವ್ಯಯಕ್ಕೆ, ಆಯಸ್ಸಿಗೆ ಅಧಿಪತಿಯಾಗಿರುವ ಕರ್ಮ ಫಲದಾತನಾದ ಶನಿ(Shani)ಯ ಹೆಸರು ಕೇಳಿದರೇ ಹಲವರು ಬೆಚ್ಚುತ್ತಾರೆ. ಆತನ ಪ್ರತಿ ಚಲನೆಯೂ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತದೆ. ಜುಲೈ 12ರಂದು ಶನಿಯು ಕುಂಭ ರಾಶಿಯಿಂದ ಹಿಮ್ಮುಖ ಚಲನೆಯಲ್ಲಿ ಮಕರಕ್ಕೆ ಪ್ರವೇಶಿಸುತ್ತಿದ್ದಾನೆ. ನಂತರ ಮುಂದಿನ ಆರು ತಿಂಗಳ ಕಾಲ ಅಂದರೆ 17 ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ವಕ್ರಿಯಾಗಿಯೇ ಉಳಿಯುತ್ತಾನೆ.
ಇದನ್ನೂ ಓದಿ: ಗುರು ಪೂರ್ಣಿಮಾ 2022; ಹಿಂದೂ, ಜೈನ, ಬೌದ್ಧರೆಲ್ಲರಿಗೂ ಮಹತ್ವದ ದಿನ..
ಶನಿಯ ಈ ಹಿಮ್ಮುಖ ಚಲನೆಯಿಂದ ಯಾವ ರಾಶಿಗೆ ಏನು ಫಲ ದೊರೆಯಲಿದೆ? ಯಾವ ರಾಶಿಗೆ ಲಾಭ, ಯಾವ ರಾಶಿಗೆ ಕಷ್ಟನಷ್ಟ, ಯಾವ ರಾಶಿಯವರು ಪರಿಹಾರಾರ್ಥವಾಗಿ ಏನು ಮಾಡಬೇಕೆಂಬುದನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.