Asianet Suvarna News Asianet Suvarna News

ಗುರು ಪೂರ್ಣಿಮಾ 2022; ಹಿಂದೂ, ಜೈನ, ಬೌದ್ಧರೆಲ್ಲರಿಗೂ ಮಹತ್ವದ ದಿನ..

ಜುಲೈ 13ರಂದು ಗುರು ಪೂರ್ಣಿಮೆ. ನಮ್ಮ ಜೀವನದಲ್ಲಿ ಗುರುವಿನ ಸ್ಥಾನ ತುಂಬಿದವರಿಗೆ ಗೌರವ ಸಲ್ಲಿಸುವ, ಕೃತಜ್ಞತೆ ಅರ್ಪಿಸುವ ದಿನ. ಈ ದಿನ ಕೇವಲ ಹಿಂದೂಗಳಿಗಲ್ಲದೆ, ಜೈನರು, ಶೈವರು, ಬೌದ್ಧರು ಎಲ್ಲರಿಗೂ ಮಹತ್ವದ್ದಾಗಿದೆ. 

Guru Purnima 2022 date tithi timings and other important things skr
Author
Bangalore, First Published Jul 10, 2022, 12:00 PM IST

ಮಾತಾ, ಪಿತಾ, ಗುರು, ದೈವಂ ಎಂಬುದು ಪ್ರಸಿದ್ಧ ಸಂಸ್ಕೃತ ಅಭಿವ್ಯಕ್ತಿಯಾಗಿದ್ದು ಅದು ಜನರ ಜೀವನದಲ್ಲಿ ತಾಯಿ, ತಂದೆ, ಗುರು ಮತ್ತು ದೇವರು ವ್ಯಕ್ತಿಯ ಜೀವನದಲ್ಲಿ ಮಹತ್ವದ ಸ್ಥಾನ ಹೊಂದಿದ್ದಾರೆ ಎಂಬುದನ್ನು ತಿಳಿಸುತ್ತದೆ. 

'ಗುರು ದೇವೋ ಭವ'  ಎಂದು ಗುರುವನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಸಂಸ್ಕೃತಿ ಹಿಂದೂಗಳದ್ದು.  ನಾವು ಗುರುವನ್ನು ಕೇವಲ ಶಿಕ್ಷಣ ನೀಡುವವರಲ್ಲದೆ ಮೌಲ್ಯಗಳನ್ನು ಕಲಿಸುವ ಮತ್ತು ಅಗತ್ಯ ಜೀವನ ಪಾಠಗಳನ್ನು ಕಲಿಸುವ ವ್ಯಕ್ತಿ ಎಂದು ನೋಡುತ್ತೇವೆ. ಅವರಿಂದ ನಾವು ಬುದ್ಧಿವಂತಿಕೆ, ಕಲಿಕೆ ಅಥವಾ ಕೌಶಲ್ಯಗಳ ರೂಪದಲ್ಲಿ ಆಶೀರ್ವಾದವನ್ನು ಪಡೆಯುತ್ತೇವೆ. ಹಿಂದೂ ಧರ್ಮದಲ್ಲಿ ಇಂಥ ಶ್ರೇಷ್ಠ ಸ್ಥಾನದಲ್ಲಿರುವ ಗುರುವಿನ ಸತ್ಕಾರ್ಯಗಳ ಸ್ಮರಣೆಗಾಗಿ ವಿಶೇಷ ದಿನವೊಂದನ್ನು ಮೀಸಲಿರಿಸಲಾಗಿದೆ. ಅದೇ ಗುರು ಪೂರ್ಣಿಮೆ(Guru Purnima). 

ಗುರು ಪೂರ್ಣಿಮೆಯು ಗುರುಗಳಿಗೆ (ಶಿಕ್ಷಕರು/ಮಾರ್ಗದರ್ಶಿಗಳು ಮತ್ತು ನಮಗೆ ಮಾರ್ಗದರ್ಶನ ನೀಡುವ ಮತ್ತು ತರಬೇತಿ ನೀಡುವ ಪ್ರತಿಯೊಬ್ಬರಿಗೂ) ನಮ್ಮ ವಿದೇಯತೆ, ಗೌರವ ಸಲ್ಲಿಸುವ ದಿನ. ಗುರು ಎಂಬ ಸಂಸ್ಕೃತ ಪದವು ಗು ಮತ್ತು ರು ಎಂಬ ಪದದಿಂದ ಬಂದಿದೆ, ಇಲ್ಲಿ ಗು ಎಂದರೆ ಅಜ್ಞಾನ/ಕತ್ತಲೆ ಮತ್ತು ರು ಎಂದರೆ ನಿವಾರಣೆ/ತೆಗೆಯುವಿಕೆ. ಆದುದರಿಂದ ಗುರುವು ಬೆಳಕಿನಂತಹ ಜ್ಞಾನವನ್ನು ಧಾರೆಯೆರೆದು ಅಂಧಕಾರದಂತಹ ಅಜ್ಞಾನವನ್ನು ಹೋಗಲಾಡಿಸುವವನು. 

ವೃಷಭ ರಾಶಿಯವರನ್ನು ಪ್ರೀತಿಸ್ತಿದೀರಾ? ಅವರ ಬಗ್ಗೆ ತಿಳ್ಕೋಬೇಕಾ?

ಆಷಾಢ ಹುಣ್ಣಿಮೆ(Ashadha Pournima)
ಗುರು ಪೂರ್ಣಿಮೆಯನ್ನು ಆಷಾಢ ಮಾಸದ ಪೂರ್ಣಿಮಾ ತಿಥಿಯಂದು ಆಚರಿಸಲಾಗುತ್ತದೆ. ಇದು ಮಹಾನ್ ಭಾರತೀಯ ಮಹಾಕಾವ್ಯವಾದ ಮಹಾಭಾರತದ ಲೇಖಕ ವೇದವ್ಯಾಸರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ದಿನ.

ಗುರು ಪೂರ್ಣಿಮಾ 2022 ದಿನಾಂಕ(Guru Purnima 2022 date)
ಈ ವರ್ಷ ಜುಲೈ 13 ರಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುವುದು.

ಗುರು ಪೂರ್ಣಿಮಾ 2022 ತಿಥಿ ಸಮಯ(Tithi timings)
ಪೂರ್ಣಿಮಾ ತಿಥಿಯು ಜುಲೈ 13ರಂದು ಬೆಳಗ್ಗೆ 4ರಿಂದ ಜುಲೈ 14ರಂದು ಬೆಳಗ್ಗೆ 12:06ರವರೆಗೆ ಜಾರಿಯಲ್ಲಿರುತ್ತದೆ.

ವೇದವ್ಯಾಸ(Ved Vyasa)
ವೇದವ್ಯಾಸರು ಭೂಮಿಯ ಮೇಲೆ ಕಾಲಿಟ್ಟ ಅಸಾಧಾರಣ ವ್ಯಕ್ತಿಗಳಲ್ಲಿ ಒಬ್ಬರು. ಅವರು ಋಷಿ ಪರಾಶರ ಮತ್ತು ದೇವಿ ಸತ್ಯವತಿಯ ಪುತ್ರರಾಗಿ ಪೂರ್ಣಿಮಾ ತಿಥಿ, ಆಷಾಢ ಮಾಸದಂದು ಜನಿಸಿದರು. ಅವರು ರಚಿಸಿದ ಮಹಾಕಾವ್ಯವಾದ ಮಹಾಭಾರತವನ್ನು ಗಣೇಶನು ಲಿಖಿತ ರೂಪದಲ್ಲಿ ದಾಖಲಿಸಿದ್ದಾನೆ.
ವೇದವ್ಯಾಸರು ವೇದಗಳನ್ನು- ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ವರ್ಗೀಕರಿಸಿದ್ದಾರೆ. ಮತ್ತು ಅವರ ಪರಂಪರೆಯನ್ನು ಅವರ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತು ಮುಂದುವರಿಸಿದರು.

ಆದಿಯೋಗಿ ಮತ್ತು ಸಪ್ತಋಷಿಗಳು(The Adiyogi and the Saptarishis)
ಯೋಗ ಪಂಥದ ಪ್ರಕಾರ, ಶಿವನು ಸಪ್ತಋಷಿಗಳಿಗೆ (ಏಳು ಋಷಿಗಳಿಗೆ) ಜ್ಞಾನವನ್ನು ನೀಡಿದ ಮೊದಲ ಗುರು ಅಥವಾ ಯೋಗಿ. ಋಷಿಗಳೊಂದಿಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಯೋಗ ಜ್ಞಾನವನ್ನು ಅನುಗ್ರಹಿಸಲು ಅವರು ಯೋಗಿಯ ರೂಪವನ್ನು ಪಡೆದರು ಎಂದು ಹೇಳಲಾಗುತ್ತದೆ. ಮತ್ತು ಅವರು ಮೊದಲ ಗುರುವಾದ್ದರಿಂದ, ಅವರನ್ನು ಆದಿಯೋಗಿ ಎಂದು ಶ್ಲಾಘಿಸಲಾಗುತ್ತದೆ.

ಊಟ ಆದ್ಮೇಲೆ ತಟ್ಟೇಲಿ ಕೈ ತೊಳೆಯೋದು ಮಾಹಪಾಪ !

ಮಹಾವೀರ ಮತ್ತು ಇಂದ್ರಭೂತಿ ಗೌತಮ್(Mahavira and Indrabhuti Gautam)
ಜೈನ ಧರ್ಮವನ್ನು ಅನುಸರಿಸುವವರಿಗೆ ಗುರು ಪೂರ್ಣಿಮೆಯು ಪ್ರಮುಖ ದಿನವಾಗಿದೆ.  24ನೇ ಜೈನ ತೀರ್ಥಂಕರ ಭಗವಾನ್ ಮಹಾವೀರರು ಕೈವಲ್ಯವನ್ನು ಪಡೆದ ನಂತರ ಗಣಧರ ಇಂದ್ರಭೂತಿ ಗೌತಮ್ (ಗೌತಮ್ ಸ್ವಾಮಿ) ಅವರನ್ನು ತಮ್ಮ ಮೊದಲ ಶಿಷ್ಯರನ್ನಾಗಿ ಮಾಡಿಕೊಂಡ ದಿನ ಇದಾಗಿದೆ.

ಗೌತಮ ಬುದ್ಧನ ಮೊದಲ ಧರ್ಮೋಪದೇಶ(Gautam Buddha's first sermon)
ಬೌದ್ಧ ಧರ್ಮದ ಅನುಯಾಯಿಗಳಿಗೆ ಗುರು ಪೂರ್ಣಿಮಾ ತಿಥಿ ಮಹತ್ವದ್ದಾಗಿದೆ. ಏಕೆಂದರೆ ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧನು ಜ್ಞಾನೋದಯವನ್ನು ಪಡೆದ ನಂತರ ಸಾರನಾಥದಲ್ಲಿ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದನು. ಆದ್ದರಿಂದ, ಬೌದ್ಧರು ಗೌತಮ ಬುದ್ಧನಿಗೆ ಗೌರವ ಸಲ್ಲಿಸಲು ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ.

Follow Us:
Download App:
  • android
  • ios