ಶನಿ -ಕುಜ -ರಾಹು- ತ್ರಿಗ್ರಹ ಉಪಟಳ
ಮುಂದಿನ 4 ತಿಂಗಳಲ್ಲಿ 3 ಗ್ರಹಗಳ ಉಪಟಳ
ಮೇನಿಂದ ಆಗಸ್ಟ್ವರೆಗೂ 4 ಪಾಪಗ್ರಹಗಳ ಉಪಟಳ
ಜೂನ್ 5 ರಿಂದ ಶನಿಯು ವಕ್ರಿಯಾಗಿ ಜುಲೈ 12ಕ್ಕೆ ಮಕರಕ್ಕೆ ವಾಪಸ್
ಜೂನ್ 26ರಿಂದ ಮೇಷದಲ್ಲಿ ಕುಜ- ರಾಹು ಯುತಿ ಆರಂಭ
ಜೂನ್ 25 ರವರೆಗೂ ಕುಜನು ಮೀನದಿಂದ ದ್ವಿತೀಯ ರಾಹು ಬಾಧೆ
ಮುಂದಿನ ನಾಲ್ಕು ತಿಂಗಳಲ್ಲಿ ಶನಿ(Saturn), ಕುಜ ಹಾಗೂ ರಾಹುಗಳ ಉಪಟಳ ವಿಪರೀತ ಹೆಚ್ಚಾಗಲಿದೆ. ಮೇನಿಂದ ಆಗಸ್ಟ್‌ವರೆಗೆ ಈ ಪಾಪಗ್ರಹಗಳ ಕೈ ಮೇಲಾಗಲಿದೆ. ಇದಕ್ಕೆ ಕಾರಣವೆಂದರೆ ಜೂನ್ 5 ರಿಂದ ಶನಿಯು ವಕ್ರಿಯಾಗಿ ಜುಲೈ 12ಕ್ಕೆ ಮಕರಕ್ಕೆ ವಾಪಸಾಗಲಿದ್ದಾನೆ. ಇದಲ್ಲದೆ, ಜೂನ್ 6ರಿಂದ ಮೇಷದಲ್ಲಿ ಕುಜ- ರಾಹು ಯುತಿ ಆರಂಭವಾಗಲಿದೆ.
ಗ್ರಹಗಳ ಈ ಚಲನೆಯಿಂದ ಮಕರ, ಕುಂಭ, ಮೇಷ, ಸಿಂಹ, ವೃಶ್ಚಿಕ ರಾಶಿಯವರಿಗೆ ಹೆಚ್ಚು ದೋಷ ಕಾಡಲಿದೆ. ಇದರಿಂದಾಗಿ ಅಧಿಕಾರಿ, ನಾಯಕ ಆಡಳಿತ ವರ್ಗಕೆ ತೀವ್ರ ಬಾಧೆ ಕಾಡಿದರೆ, ಕರ್ಕ-ತುಲಾ ರಾಶಿಯ ಸ್ತ್ರೀಯರಿಗೆ ಅಲ್ಪ ದೋಷ ಇರಲಿದೆ. ದೋಷವಿರುವ ರಾಶಿಗಳ ಮಾತು-ಕೃತಿಗಳಲ್ಲಿ ಸಾಮ್ಯ ಕಾಣದೆ ಜಗಳ ಹೆಚ್ಚಲಿದೆ. ಶುಭ ಕಾರ್ಯಗಳಲ್ಲಿ ಅನಾಸಕ್ತಿ , ಅಸಹಕಾರ , ವ್ಯರ್ಥ ನಿಂದನೆ , ದುಃಖ ಹೆಚ್ಚಲಿದೆ. ಗುರು ಹಿರಿಯರ ಕೋಪ , ಧನ ನಷ್ಟ , ಆಯುನಾಶ ಆಗಬಹುದು. ಮರಣ ಮಾರಣಗಳ ಯುದ್ಧದಾಹ, ಭಯೋತ್ಪಾಕ ಕೃತ್ಯಗಳ ಸಂಚು ಹೆಚ್ಚಲಿದೆ. ಇವೆಲ್ಲದರ ಜೊತೆಗೆ ಕೋವಿಡ್ 4ನೇ ಅಲೆಯ ಬಾಧೆಯೂ ಇದೆ.
ಖಿನ್ನತೆ ಮತ್ತು ಆತಂಕದಿಂದ ದೂರಾಗಲು ಈ Astrology Remedies ಪಾಲಿಸಿ..
ಈ ಎಲ್ಲ ಹೆಚ್ಚುವ ಸಮಸ್ಯೆಗಳಿಗೆ ಪರಿಹಾರವೇನು ಎಂದು ಡಾ. ಹರೀಶ್ ಕಶ್ಯಪ್ ತಿಳಿಸುತ್ತಾರೆ ನೋಡೋಣ.