Asianet Suvarna News Asianet Suvarna News

ಖಿನ್ನತೆ ಮತ್ತು ಆತಂಕದಿಂದ ದೂರಾಗಲು ಈ Astrology Remedies ಪಾಲಿಸಿ..

ಖಿನ್ನತೆ ಮತ್ತು ಆತಂಕ ಇಂದಿನ ಯುಗದಲ್ಲಿ ಬಹುತೇಕ ಜನರ ಬಹು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಹೊರ ಬರುವ ಮಾರ್ಗ ತಿಳಿಯದೆ ಸಾಕಷ್ಟು ಜನರು ತೊಳಲಾಡುತ್ತಾರೆ. ಖಿನ್ನತೆ ಮತ್ತು ಆತಂಕ ಸಮಸ್ಯೆಗಳಿಂದ ಹೊರಬರಲು ಜ್ಯೋತಿಷ್ಯದಲ್ಲಿ ಕೆಲ ಮಾರ್ಗಗಳನ್ನು ಸೂಚಿಸಲಾಗಿದೆ. 

Follow these Astrology remedies to get rid of depression and anxiety skr
Author
Bangalore, First Published May 5, 2022, 1:38 PM IST

ನಮ್ಮ ಮನಸ್ಸಿಗಿರುವ ಶಕ್ತಿ ಅಗಾಧವಾದುದು. ಯಾವುದನ್ನಾದರೂ ಗೆಲ್ಲಬೇಕೆಂದು ಅದು ಬಯಸಿದರೆ ಗೆದ್ದೇ ಸಿದ್ದವಾಗುತ್ತದೆ. ಅದೇ, ತಾನು ಸೋಲುವುದು ನಿಶ್ಚಿತವೆಂದು ಪರಿಗಣಿಸಿ ಕೈ ಚೆಲ್ಲಿದರೆ ಗೆಲ್ಲುವ ಎಷ್ಟೇ ಅವಕಾಶಗಳು ದೊರೆತರೂ ಸೋಲು ಕಟ್ಟಿಟ್ಟ ಬುತ್ತಿ. ಇಂದಿನ ತಲೆಮಾರಿನಲ್ಲಿ ಖಿನ್ನತೆ ಮತ್ತು ಆತಂಕ(Depression and Anxiety) ಬಹಳ ಸಾಮಾನ್ಯ ಸಮಸ್ಯೆಯಾಗಿದೆ.

ಈಗಿನ ಮಕ್ಕಳಿಗೆ ಪೋಷಕರು ಕೇಳಿದ್ದೆಲ್ಲ ಕೊಡಿಸುವ ಹಪಹಪಿಗೆ ಬೀಳುತ್ತಾರೆ. ಕಡೆಗೆ ತಾವು ಬಯಸಿದ್ದು ಸಿಗದಿದ್ದಾಗ ಮಕ್ಕಳು ಖಿನ್ನತೆಗೆ ಜಾರುತ್ತಾರೆ. ಇನ್ನು ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲೆಡೆ ಗೆಲ್ಲಬೇಕೆಂಬ ಹಪಹಪಿ ಹೆಚ್ಚಿದೆ. ಸ್ಪರ್ಧೆ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಸೋಲು(Failure) ಎದುರಿಸಬೇಕಾಗುತ್ತದೆ. ಆದರೆ, ಸೋಲಲು ತಯಾರಿಲ್ಲದವರು ಈ ವಿಷಯದಲ್ಲಿ ಆತಂಕ ಎದುರಿಸುತ್ತಾರೆ. ಕೇವಲ ಇವೆರಡೇ ವಿಷಯಗಳಲ್ಲಿ, ಬದುಕಿನ ಬಹಳಷ್ಟು ಸೋಲು, ನಿರಾಶೆ, ಒತ್ತಡ, ಹತಾಶೆಗಳೆಲ್ಲವೂ ಇಂದಿನ ತಲೆಮಾರನ್ನು ಬೇಗ ಕಂಗೆಡಿಸುತ್ತವೆ, ಖಿನ್ನತೆ ಮತ್ತು ಆತಂಕಕ್ಕೆ ತಳ್ಳುತ್ತವೆ. ಈ ಮಾನಸಿಕ ಸಮಸ್ಯೆಗಳು(mental problems) ಬದುಕಿನಲ್ಲಿ ಗೆಲ್ಲಲು ಬಿಡುವುದಿಲ್ಲ, ಸಂತೋಷ ಅನುಭವಿಸಲು ಸಾಧ್ಯವಾಗುವುದಿಲ್ಲ. ನಮ್ಮ ಮೇಲೆ ನಮ್ಮ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತವೆ. ಈಗಂತೂ ಮಕ್ಕಳಿಂದ ಹಿಡಿದು ಮುದುಕರವೆರೆಗೆ ಇದು ಸಾಮಾನ್ಯ ಸಮಸ್ಯೆಯಾಗಿದೆ. 

ಜ್ಯೋತಿಷ್ಯ(Astrology)ದ ಪ್ರಕಾರ, ನಮ್ಮ ಮನಸ್ಸನ್ನು ನಿಯಂತ್ರಿಸುವವನು ಚಂದ್ರ. ಮಾನಸಿಕ ಸಮಸ್ಯೆಗಳೆಲ್ಲವೂ ಚಂದ್ರ ದೋಷದಿಂದಲೇ ಉಂಟಾಗುವುದು. ಯಾವಾಗ ಚಂದ್ರನು ಸೂರ್ಯನಿಗೆ ಸಮೀಪ ಬರುತ್ತಾನೋ ಆಗ ಜನರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚು. ಹಾಗಾಗಿಯೇ ಅಮಾವಾಸ್ಯೆ, ಹುಣ್ಣಿಮೆಯಂದು ಉನ್ಮಾದ ಹೆಚ್ಚು ಎನ್ನುವುದು. ಯಾರ ಜಾತಕದಲ್ಲಿ ರಾಹು ಅಥವಾ ಶನಿಯು ಲಗ್ನ ಅಥವಾ ಚಂದ್ರನ ಪ್ರಭಾವವನ್ನು ಹೊಂದಿದ್ದರೆ ಅಂತಹ ವ್ಯಕ್ತಿಯು ಖಿನ್ನತೆಗೆ ಜಾರುತ್ತಾನೆ. ಜಾತಕದಲ್ಲಿ ಶನಿ ಮತ್ತು ಚಂದ್ರರ ಸಂಯೋಗವಿದ್ದರೂ ಅಥವಾ ಪಾಪ ಗ್ರಹಗಳ ಮನೆಯಲ್ಲಿ ಇವರು ಸ್ಥಿತರಾದರೂ ವ್ಯಕ್ತಿಯು ಖಿನ್ನತೆಯ ಸಮಸ್ಯೆಯಿಂದ ಬಳಲಬಹುದು. ಜಾತಕದಲ್ಲಿ ಚಂದ್ರನು ದುರ್ಬಲಗೊಂಡಾಗ, ವ್ಯಕ್ತಿಯು ಖಿನ್ನತೆಯಂಥ ಗಂಭೀರ ಸಮಸ್ಯೆಗಳ ಹಿಡಿತದಲ್ಲಿರಬಹುದು.

Chanakya Niti: ಚಾಣಕ್ಯ ಹೇಳಿದ ಈ ನಾಲ್ಕು ವಿಷಯ ಪಾಲಿಸಿದರೆ ಎಂದೂ ಹಣದ ಕೊರತೆ ಇರದು!

ಒಬ್ಬ ವ್ಯಕ್ತಿಯು ಖಿನ್ನತೆಯಂತಹ ಗಂಭೀರ ಕಾಯಿಲೆಯನ್ನು ತೊಡೆದುಹಾಕುವ ಆ ಕ್ರಮಗಳ ಬಗ್ಗೆ ಈಗ ಮಾತನಾಡೋಣ. ಸಾಮಾನ್ಯವಾಗಿ, ಖಿನ್ನತೆ ಆವರಿಸಿದಾಗ ವ್ಯಕ್ತಿಯು ನಿತ್ಯ ವ್ಯಾಯಾಮ ಮಾಡಬೇಕು. ನಿಮ್ಮ ಮನಸ್ಸಿನ ಮಾತುಗಳೆಲ್ಲವನ್ನೂ ನಿಮ್ಮ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬೇಕು ಮತ್ತು ಸಕಾರಾತ್ಮಕ ಕೆಲಸಗಳನ್ನು ಮಾಡಬೇಕು. ಜೊತೆಗೆ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು.
ಈಗ ಜ್ಯೋತಿಷ್ಯ ಪರಿಹಾರಗಳನ್ನು ನೋಡೋಣ. 

ಬೆಳ್ಳಿ(Silver)
ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯು ಬೆಳ್ಳಿಯ ಆಭರಣಗಳನ್ನು ಧರಿಸಬೇಕು. ಸೋಮವಾರದಂದು ಬೆಳ್ಳಿಯ ಆಭರಣಗಳನ್ನು ಧರಿಸುವುದರಿಂದ ಮಾನಸಿಕ ರೋಗಗಳು ಗುಣವಾಗುತ್ತವೆ. ಆದರೆ ಆ ಬೆಳ್ಳಿಯ ಆಭರಣಗಳಿಗೆ ಯಾವುದೇ ಬೇರೆ ಲೋಹದ ಸೇರ್ಪಡೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. 

ಚಂದ್ರ(Moon)
ಚಂದ್ರನ ಕಾರಣದಿಂದ ಖಿನ್ನತೆಯ ಸಮಸ್ಯೆ ಉಂಟಾಗುತ್ತದೆ, ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ಜಾತಕದಲ್ಲಿ ಚಂದ್ರನನ್ನು ಬಲಪಡಿಸಬೇಕು ಮತ್ತು ಚಂದ್ರನ ಸ್ಥಾನವನ್ನು ಸುಧಾರಿಸಲು, ವ್ಯಕ್ತಿಯು ಶಿವನನ್ನು ಆರಾಧಿಸಬೇಕು.

ರುದ್ರಾಕ್ಷಿ(Rudraksha)
ಮನೋರೋಗದಿಂದ ಮುಕ್ತಿ ಹೊಂದಲು ಬಯಸುವವರು ದ್ವಿಮುಖ ರುದ್ರಾಕ್ಷಿಯನ್ನು ಬೆಳ್ಳಿಯ ಲಾಕೆಟ್‌ನಲ್ಲಿ ಹಾಕಿ ಸೋಮವಾರದಂದು ಧರಿಸಬೇಕು. ಹೀಗೆ ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗಿ ಖಿನ್ನತೆ ದೂರವಾಗುತ್ತದೆ. 

ಸ್ಪರ್ಧೆ ಯಾವ್ದೇ ಇರಲಿ, ಗೆಲ್ಲೋ ಕುದುರೆಗಳು ಈ ಐದು ರಾಶಿಯವರು!

ಬಿಳಿ(White) ವಸ್ತುಗಳು
ಚಂದ್ರನು ಬಿಳಿ ವಸ್ತುಗಳಿಗೆ ನೇರವಾಗಿ ಸಂಬಂಧಿಸಿದೆ. ನೀವು ಸೋಮವಾರ ಅಥವಾ ಹುಣ್ಣಿಮೆಯ ದಿನದಂದು ಅಕ್ಕಿ, ಹಾಲು, ಸಕ್ಕರೆ ಮಿಠಾಯಿ, ಸಕ್ಕರೆ, ಖೀರ್ ಅಥವಾ ಯಾವುದೇ ಬಿಳಿ ವಸ್ತುವನ್ನು ದಾನ ಮಾಡಬೇಕು. ಇದರಿಂದ ಚಂದ್ರನ ಬಲವರ್ಧನೆಯಾಗುತ್ತದೆ. ಆಗ ಮಾನಸಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. 
 

Follow Us:
Download App:
  • android
  • ios