Asianet Suvarna News Asianet Suvarna News

ಪವರ್ ಪಾಯಿಂಟ್ ಪಂಚಾಂಗ; ಹೊಸ ಸಂವತ್ಸರದಲ್ಲಿ ಗ್ರಹಗಳ ಪಾತ್ರವೇನು?

ಈ ಸಂವತ್ಸರವು ಜಗತ್ತಿಗೆ ಏನೆಲ್ಲ ಕೊಡಲಿದೆ? ಈ ವರ್ಷದ ಪಂಚಾಂಗ ಫಲಗಳೇನು?

ಚೈತ್ರ ಮಾಸದ ಮೊದಲ ದಿನ ನಮಗೆ ವರ್ಷಾರಂಭ. ಈ ಯುಗಾದಿ(Ugadi)ಯನ್ನು ಇಡೀ ಪ್ರಕೃತಿಯೇ ಸಂಭ್ರಮಿಸುತ್ತದೆ. ಎಲ್ಲ ಗಿಡಮರಗಳು ಹೊಸ ಚಿಗುರುಗಳನ್ನು ಹೊತ್ತು ಸಡಗರದಿಂದಿವೆ. ವರ್ಷದ ಪ್ರಾರಂಭದಲ್ಲಿ ಜ್ಯೋತಿಷ್ಯ ಶಾಸ್ತ್ರದ ಮೂಲಕ ಇಡೀ ವರ್ಷದ ಮುನ್ನೋಟ ಮಾಡುತ್ತೇವೆ. ಈ ವರ್ಷದ ಹೊಸ ಹಾದಿ ಹೇಗಿರಲಿದೆ, ಮಳೆ ಬೆಳೆ ಹೇಗಿದೆ, ರಾಜಕೀಯ ಬದಲಾವಣೆಗಳೇನಿವೆ, ಆಕಾಶಕಾಯಗಳು ನಮ್ಮ ಮೇಲೆ ಬೀರುವ ಪರಿಣಾಮ ಎಲ್ಲವನ್ನೂ ಪಂಚಾಂಗ ತಿಳಿಸುತ್ತದೆ. 

ಈ ಸಂವತ್ಸರ ಶುಭ ತರುವುದೇ? ಡಾ. ಹರೀಶ್ ಕಶ್ಯಪ್ ಏನಂತಾರೆ?

ನಮ್ಮ ಅಪರಿಮಿತ ಕಾಲವನ್ನು ಗಣನೆ ಮಾಡಲು ಸಂವತ್ಸರಗಳನ್ನು ಬಳಸುತ್ತೇವೆ. ಕೆಲ ಸಂವತ್ಸರಗಳು ಶುಭವನ್ನು ತಂದರೆ, ಮತ್ತೆ ಕೆಲ ಸಂವತ್ಸರಗಳು ವಿಪತ್ತನ್ನು ತರುತ್ತವೆ. ಈ ವರ್ಷದ ಫಲ ಹೇಗಿರಲಿದೆ? ಸರ್ಕಾರದಂತೆ ಪ್ರತಿ ಸಂವತ್ಸರದಲ್ಲಿಯೂ ರಾಜ, ಮಂತ್ರಿ, ಇತ್ಯಾದಿ ಆಸ್ಥಾನ ಸಚಿವರ ದಂಡೇ ಇರುತ್ತದೆ. ಇವೇ ಗ್ರಹಗಳು. ಇವು ಹೇಗೆ ವರ್ಷವನ್ನು ನಡೆಸುತ್ತವೆ ಎಂಬುದು ರಾಜ ಮತ್ತು ಮಂತ್ರಿಯ ಮೇಲೆ ನಿರ್ಧರಿತವಾಗುತ್ತವೆ. ಅಂತೆಯೇ ಈ ವರ್ಷದ ರಾಜ ಶನಿಯಾಗಿದ್ದರೆ, ಮಂತ್ರಿ ಗುರುವಾಗಿದ್ದಾನೆ. ಇವರು ಸಂವತ್ಸರವನ್ನು ಯಾವ ರೀತಿ ಆಡಳಿತ ಮಾಡುತ್ತಾರೆ ನೋಡೋಣ. 

Video Top Stories