ಈ ಸಂವತ್ಸರ ಶುಭ ತರುವುದೇ? ಡಾ. ಹರೀಶ್ ಕಶ್ಯಪ್ ಏನಂತಾರೆ?

ಶುಭಕೃತ್ ನಾಮ ಸಂವತ್ಸರ ಹೆಸರಿಗೆ ತಕ್ಕಂತೆ ಶುಭಕರವಾಗಿದೆಯೇ? ಯಾವೆಲ್ಲ ರಾಶಿಗಳಿಗೆ ಜಯಲಕ್ಷ್ಮೀ ಒಲಿಯುತ್ತಾಳೆ? ಈ ವರ್ಷದ ಫಲಗಳ ಬಗ್ಗೆ ಜ್ಯೋತಿಷಿ ಡಾ. ಹರೀಶ್ ಕಶ್ಯಪ್ ಏನಂತಾರೆ?

Share this Video
  • FB
  • Linkdin
  • Whatsapp

ಶುಭಕೃತ್ ನಾಮ ಸಂವತ್ಸರ(Shubhakruth Samvatsara)ವು ಶುಭವನ್ನು ಹೆಚ್ಚಾಗಿ ತರಲಿದೆ. ಈ ವರ್ಷ ದೇಶದ ಜನರು ಕೊಂಚ ನಿರಾಳತೆಯ ನಿಟ್ಟುಸಿರು ಬಿಡಬಹುದು ಎನ್ನುತ್ತಾರೆ ಜ್ಯೋತಿಷಿ ಡಾ. ಹರೀಶ್ ಕಶ್ಯಪ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಕಾರಿ, ಪ್ಲವ, ಶಾರ್ವರಿ ನಾಮ ಸಂವತ್ಸರಗಳು ಹೆಸರಲ್ಲೇ ಕೆಟ್ಟದ್ದನ್ನು ಸೂಚಿಸುತ್ತಿದ್ದವು. ಅಂತೆಯೇ ಕೊರೋನಾ ರೋಗವು ಜಗತ್ತನ್ನೇ ನಡುಗಿಸಿ ಜಗತ್ತು ಕೆಟ್ಟದ್ದನ್ನೇ ನೋಡಿತು. ಆದರೆ, ಈ ಬಾರಿ ಹೆಸರಲ್ಲೇ ಶುಭ ಎಂದಿರುವುದರಿಂದ ಮಂಗಳಕರ ವಿಚಾರಗಳನ್ನು ಎದುರು ನೋಡಬಹುದು.

ಬದಲಾವಣೆ ತರುವ ಈ ಸಂವತ್ಸರದ ಪ್ರಮುಖ ಗ್ರಹಪಲ್ಲಟಗಳು ಹೀಗಿವೆ..

ಶನಿವಾರ ಆರಂಭವಾಗುತ್ತಿರುವ ಈ ವರ್ಷಕ್ಕೆ ಶನೈಶ್ಚರನೇ ರಾಜನಾಗಿರುತ್ತಾನೆ. ಆತ ಕರ್ಮಗಳ ಆಧಾರದ ಮೇಲೆ ಪ್ರತಿಯೊಬ್ಬರಿಗೂ ಫಲ ನೀಡಲಿದ್ದಾನೆ. ಈ ವರ್ಷದ ಗ್ರಹ ಗತಿ, ರಾಶಿಗಳ ಫಲ, ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಎಲ್ಲವನ್ನೂ ವಿವರಿಸಿದ್ದಾರೆ. 

Related Video