Asianet Suvarna News Asianet Suvarna News

ರಾಮಮಂದಿರಕ್ಕೆ ಕರ್ನಾಟಕದಿಂದ ಸ್ವರ್ಣ ಶಿಖರ ಅರ್ಪಣೆಗೆ ಚಿಂತನೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಚುರುಕಾಗಿದೆ. ಈ ಸಂಬಂಧ ಅಯೋಧ್ಯೆಯಲ್ಲಿ ರಾಮಮಂದಿರ ಟ್ರಸ್ಟ್‌ನಿಂದ ನಡೆದ ಸಭೆಯಲ್ಲಿ ನೀಲಿಮಿಶ್ರಿತ ಶ್ವೇತಶಿಲೆಯ ರಾಮನ ವಿಗ್ರಹ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದೆ. 

ಅಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ರಾಮಮಂದಿರ ವಿಚಾರವಾಗಿ ಸಭೆ ನಡೆದಿದ್ದು, ಸಭೆಯಲ್ಲಿ ರಾಮನ ವಿಗ್ರಹದ ಸ್ವರೂಪ, ದೇವಾಲಯದ ಸ್ವರೂಪ ಇತ್ಯಾದಿಗಳ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. 
ಈ ಸಂದರ್ಭ ಕರ್ನಾಟಕದಿಂದ ರಾಮಮಂದಿರದ ಗರ್ಭಗುಡಿಗೆ ಸ್ವರ್ಣ ಶಿಖರ ಅರ್ಪಿಸಲು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರ ಇಂಗಿತ ಮಂಡಿಸಿದ್ದಾರೆ. ಇದಲ್ಲದೆ, ಮಹಾರಾಷ್ಟ್ರದಿಂದ ಸಾಗುವಾನಿ ಮರ ತರಿಸಿಕೊಳ್ಳಲು ಚಿಂತನೆ ನಡೆದಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಭವ್ಯ ದೇವಾಲಯದ ಗರ್ಭಗುಡಿಯಲ್ಲಿ ಬಾಲ ರಾಮನ ವಿಗ್ರಹ ಪ್ರತಿಷ್ಠಾಪಿಸಲು ನಿರ್ಣಯಿಸಲಾಗಿದೆ..ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ..

Ayodhya: 1800 ಕೋಟಿ ರೂ. ಗೆ ಏರಿಕೆಯಾದ ರಾಮ ಮಂದಿರದ ಪರಿಷ್ಕೃತ ಅಂದಾಜು ನಿರ್ಮಾಣ ವೆಚ್ಚ

Video Top Stories