ಬಿಸಿಲೂರಿನ ದೇಗುಲಕ್ಕೆ ಸುಧಾಮೂರ್ತಿ ಭೇಟಿ: ಗಬ್ಬೂರಿನ ಲಕ್ಷ್ಮೀ ವೆಂಕಟೇಶ್ವರನಿಗೆ ವಿಶೇಷ ಪೂಜೆ

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿರುವ ಗಬ್ಬೂರಿನ ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಲಕ್ಷ್ಮೀ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು

First Published Nov 17, 2022, 9:14 PM IST | Last Updated Nov 17, 2022, 9:14 PM IST

ರಾಯಚೂರು: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿರುವ ಗಬ್ಬೂರಿನ ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಲಕ್ಷ್ಮೀ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಲ್ಯಾಣದ ಚಾಲುಕ್ಯರ ಕಾಲದ ಪುರಾತನ ದೇಗುಲ ಇದಾಗಿದ್ದು, ಇತ್ತೀಚೆಗೆ ಬಿಸಿನೀರು ಪವಾಡದಿಂದ ಪ್ರಸಿದ್ಧಿ ಪಡೆದಿದೆ. ನಂತರ ಮಾತನಾಡಿದ ಸುಧಾಮೂರ್ತಿ, ಯೂಟ್ಯೂಬ್‌ನಲ್ಲಿ ಈ ದೇವಾಲಯ ಕುರಿತು ನೋಡಿದ್ದೆ ಕೊರೊನಾ ಬಳಿಕ ಬರಬೇಕು ಅಂದುಕೊಂಡಿದ್ದೆ. ಮಂತ್ರಾಲಯ ಹಾಗೂ ಗಬ್ಬೂರು ದೇವಸ್ಥಾನಕ್ಕೆ ಭೇಟಿ ನೀಡಬೇಕು ಅಂತ ಬಂದಿದ್ದೇನೆ. ಪುರಾತತ್ವ ಇಲಾಖೆ ಅನುಮತಿ ಕೊಟ್ಟರೆ  ಜೀರ್ಣೋದ್ಧಾರಕ್ಕೆ ಕೈ ಜೋಡಿಸುತ್ತೇವೆ. ದೇವಸ್ಥಾನಕ್ಕೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ದೇವದಾಸಿ ಮಹಿಳೆಯರಿಗೆ ಪಿಂಚಣಿ ಸೇರಿ ಇತರೆ ಸೌಲಭ್ಯ ಸರಿಯಾಗಿ ಸಿಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹದ್ದೆಲ್ಲಾ ವಿಚಾರಕ್ಕೆ ನಾನು ಕೈ ಹಾಕಲು ಹೋಗಲ್ಲ, ನನ್ನ ಶಕ್ತಿಗೆ ಅನುಸಾರ ಕೈಲಾದ ಕೆಲಸವನ್ನ ನಾನು ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದರು.
 

Video Top Stories