Mahashivaratri Special: ಪರಶಿವನನ್ನು ಒಲಿಸುವ ರುದ್ರಾಕ್ಷಿಯ ರಹಸ್ಯ ಬಲ್ಲಿರಾ?

ಶಿವ ಪುರಾಣ, ಸ್ಕಂದ ಪುರಾಣ, ಲಿಂಗ ಪುರಾಣ ಸೇರಿ ಹಲವು ಪುರಾಣಗಳಲ್ಲಿ ರುದ್ರಾಕ್ಷಿಯ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಶಿವನ ಕಣ್ಣೀರಿಂದ ಹುಟ್ಟಿದ ರುದ್ರಾಕ್ಷಿ ಧಾರಣೆಯಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?

Share this Video
  • FB
  • Linkdin
  • Whatsapp

ಶಿವನನ್ನು ಒಲಿಸಿಕೊಳ್ಳಲು ಕೇವಲ ಮೂರೇ ಮೂರು ಸಾಧನಗಳು ಸಾಕು ಎನ್ನಲಾಗುತ್ತದೆ. ಅದರಲ್ಲೊಂದು ರುದ್ರಾಕ್ಷಿ. ಮತ್ತೆರಡು ಬಿಲ್ವಪತ್ರೆ ಹಾಗೂ ವಿಭೂತಿಯಾಗಿವೆ. 
ಸತಿಯ ದೇಹತ್ಯಾಗದ ನಂತರ ಶಿವ ಸಿಟ್ಟಿಗೊಳಗಾಗಿ ರುದ್ರನರ್ತನ ಮಾಡುವಾಗ ಕಣ್ಣೀರು ಭೂಮಿಯ ಮೇಲೆ ಹಲವು ಕಡೆ ಬಿದ್ದು ರುದ್ರಾಕ್ಷಿಯ ಮರಗಳಾಗಿ ಉದ್ಭವವಾಯಿತೆಂಬ ನಂಬಿಕೆ ಇದೆ.

ಶಿವನ ಸೃಷ್ಟಿ ಹೇಗಾಯಿತು... ಇಲ್ಲಿದೆ ಸುಂದರ ಕತೆ

ಹದಿನಾಲ್ಕು ಪ್ರಕಾರದ ರುದ್ರಾಕ್ಷಿಗಳಿರುವುದಾಗಿ ಪದ್ಮ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿ ರುದ್ರಾಕ್ಷಿಯ ಪ್ರಕಾರಗಳಿಗೂ ಅದರದ್ದೇ ಆದ ಮಹತ್ವವಿದೆ. ರುದ್ರಾಕ್ಷಿಯ ಮಹಿಮೆ ಅಪಾರ. ರುದ್ರಾಕ್ಷಿಯನ್ನು ಧರಿಸುವುದರಿಂದ ಆರೋಗ್ಯ ಮತ್ತು ಆಧ್ಯಾತ್ಮಿಕ ಸಹಿತ ಇನ್ನೂ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ. ಈ ರುದ್ರಾಕ್ಷಿ ಕುರಿತ ಅನೇಕ ರಹಸ್ಯಗಳನ್ನು ಈ ವಿಡಿಯೋದಲ್ಲಿ ಬಿಚ್ಚಿಡಲಾಗಿದೆ. 

Related Video