Guru Margi 2022: ಸರ್ವಗ್ರಹಗಳ ನೇರ ಚಲನೆ; ಈ ಜನರಿಗೆ ಹೆಚ್ಚುವ ಲಾಭ

2022ರಲ್ಲಿ ಬಹಳಷ್ಟು ಗ್ರಹಗಳು ವಕ್ರಿಯಾಗಿದ್ದವು. ಇದರಿಂದ ಲೋಕದಲ್ಲಿ ಕ್ರೂರತೆ, ಕೊಲೆಪಾತಕಗಳೂ ಹೆಚ್ಚಿದ್ದವು. ಇದೀಗ ಗುರು ಮಾರ್ಗಿಯಾಗುತ್ತಿರುವ ಸಮಯದಲ್ಲಿ ಬಹುತೇಕ ಗ್ರಹಗಳು ನೇರ ಚಲನೆಗೆ ಬಂದಿವೆ. 

Share this Video
  • FB
  • Linkdin
  • Whatsapp

ಶನಿ ವಕ್ರಿಯಾಗಿದ್ದು, ಗುರುವೂ ವಕ್ರಿಯಾಗಿದ್ದು, ಕುಜನೂ ಕ್ರೂರವಾಗಿದ್ದ ಕಾರಣ ಕಳೆದ ಕೆಲ ಸಮಯದಿಂದ ಚಿತ್ರವಿಚಿತ್ರವಾದ ಹಾಗೂ ಅತ್ಯಂತ ಕ್ರೂರವಾದ ಕೊಲೆಪಾತಕಗಳಿಗೆ ಲೋಕ ಸಾಕ್ಷಿಯಾಯಿತು. ಜೊತೆಗೆ ಯುದ್ಧ, ಧರ್ಮದಂಗಲ್ ಎಲ್ಲವೂ ಹೆಚ್ಚಾಗಿತ್ತು. ಇದೀಗ ಗುರು ಹಾಗೂ ಶನಿ ಮಾರ್ಗಿಯಾಗಿದ್ದಾರೆ. ಕೇವಲ ಗುರುಬಲವಿದ್ದರೆ ಸಾಲದು, ಸರ್ವಗ್ರಹಗಳೂ ಮಾರ್ಗಿಯಾಗಿದ್ದಾಗ ಸಾಕಷ್ಟು ದೋಷಗಳು ಪರಿಹಾರವಾಗುತ್ತವೆ. ಈ ಸಮಯದಲ್ಲಿ ರಕ್ಷಣಾ ವಲಯದಲ್ಲಿರುವವರಿಗೆ ಶುಭಫಲ, ಜಾತಕದಲ್ಲಿ ಕುಜಬಲ ಉತ್ತಮ ಇರುವವರಿಗೆ ಜನವರಿಯೊಳಗೆ ಅತ್ಯುತ್ತಮ ವ್ಯಾವಹಾರಾದಿ ಉನ್ನತಿ, ಧನಲಾಭ ಹೆಚ್ಚಲಿದೆ. ಸಾಲಸೋಲಗಳು ಪರಿಹಾರವಾಗುತ್ತವೆ. ಇದರೊಂದಿಗೆ ಗುರುಬಲವೂ ಇದ್ದವರು ಅತ್ಯಂತ ಶುಭದಿನಗಳನ್ನು ನೋಡಲಿದ್ದಾರೆ ಎನ್ನುತ್ತಾರೆ ಪ್ರಾಜ್ಞರಾದ ಡಾ. ಹರೀಶ್ ಕಶ್ಯಪ್.

Guru Margi 2022; ಜಗತ್ತಿನ ಕೆಡುಕುಗಳಿಗೆ ಬೀಳಲಿದೆ ಬ್ರೇಕ್

Related Video