ರಾಹುಗ್ರಸ್ಥ ಸೂರ್ಯ ಗ್ರಹಣ: ಭಾರತದಲ್ಲಿ ಗೋಚಾರ ಇಲ್ಲ, ಆದರೂ ಪ್ರಭಾವ ಹೆಚ್ಚು!
ಈ ವರ್ಷದ ಮೊದಲ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗದಿದ್ದರೂ ಅದರ ಪರಿಣಾಮಗಳು ದಟ್ಟವಾಗಿ ಕಾಡುತ್ತವೆ ಎನ್ನುತ್ತಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್.
ಈ ವರ್ಷದ ಮೊದಲ ಸೂರ್ಯಗ್ರಹಣ(Solar Eclipse)ವು ಭಾರತದಲ್ಲಿ ಗೋಚರವಾಗದಿದ್ದರೂ ಅದರ ಪರಿಣಾಮಗಳು ದಟ್ಟವಾಗಿ ಕಾಡುತ್ತವೆ ಎನ್ನುತ್ತಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್.
ಹೌದು, ಈ ಬಾರಿ ರಾಹುಗ್ರಸ್ಥ ಸೂರ್ಯಗ್ರಹಣವು ಸಂಭವಿಸಿದ್ದು ಇದು ಭಾಗಶಃವಾಗಿದ್ದರೂ ಇದರಿಂದ ಸಾಕಷ್ಟು ಹಾನಿಗಳು, ಅಪಾಯಗಳು ಸಂಭವಿಸಲಿದೆಯಂತೆ.
ಗ್ರಹಣದಿಂದಾಗಿ ಸಮಾಜ ಮತ್ತು ಅಧಿಕಾರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ, ಪ್ರಕೃತಿ ವಿಕೋಪಗಳು ಎದುರಾಗುತ್ತವೆ, ಅಗ್ನಿ ಸ್ಪರ್ಶ ಅವಾಂತರಗಳು ಹೆಚ್ಚುತ್ತವೆ ಎಂದು ಕಶ್ಯಪ್ ಅವರು ಹೇಳಿದ್ದಾರೆ.
Akshaya Tritiyaದ ದಿನ ಈ ವಸ್ತುಗಳನ್ನು ದಾನ ಮಾಡಿದ್ರೆ ನಿಮ್ಮ ಸಂಪತ್ತು ಅಕ್ಷಯವಾಗುವುದು..
ಎಲ್ಲ ಗ್ರಹಗಳೂ ಒಂದೇ ತಿಂಗಳಲ್ಲಿ ಬದಲಾಗಿರುವ ಅತಿ ಅಪರೂಪದ ಜ್ಯೋತಿಷ್ಯ ವಿದ್ಯಮಾನ ಏಪ್ರಿಲ್‌ನಲ್ಲಿ ಘಟಿಸಿದೆ. ಇದಲ್ಲದೆ ಸೂರ್ಯ ಗ್ರಹಣ ಕೂಡಾ ಬಂದಿದೆ. ಇನ್ನು ಕೇವಲ 15 ದಿನಗಳಲ್ಲಿ ಚಂದ್ರಗ್ರಹಣವೂ ಬರುತ್ತಿದೆ. ನಿಧಾನ ಸಂಚಾರಿಯಾದ ಶನಿ ಕೂಡಾ ರಾಶಿ ಬದಲಿಸಿದ್ದಾನೆ. ಈ ಎಲ್ಲ ಜ್ಯೋತಿಷ್ಯ ವಿದ್ಯಮಾನಗಳು ಕೂಡಾ ಮುಂಬರುವ ಜಗತ್ತಿನ ಬದಲಾವಣೆಗಳನ್ನು, ಪ್ರಾಕೃತಿಕ ವಿದ್ಯಮಾನಗಳನ್ನು, ರಾಜಕೀಯ ಅಸ್ಥಿರತೆಗಳನ್ನು ತರುತ್ತವೆ. ಈ ಬಗ್ಗೆ ವಿವರವಾಗಿ ತಿಳಿಯೋಣ.