
ಬಾನಂಗಳದಲ್ಲಿ ಚಂದ್ರ ಗ್ರಹಣದ ವಿಸ್ಮಯ: ಜಗದೀಶ್ ಶರ್ಮಾ ಮಾತು
ವರ್ಷದ ಕೊನೆಯ ರಕ್ತ ಚಂದ್ರಗ್ರಹಣ ಆರಂಭವಾಗಿದ್ದು, ಈ ಕುರಿತು ಖಗೋಳ ವಿಜ್ಞಾನಿ ಜಗದೀಶ್ ಶರ್ಮಾ ಮಾತನಾಡಿದ್ದಾರೆ.
ಈ ವರ್ಷದ ಕೊನೆಯ ರಕ್ತ ಚಂದ್ರಗ್ರಹಣ ಆರಂಭವಾಗಿದ್ದು, ಕಾರ್ತಿಕ ಹುಣ್ಣಿಮೆ ದಿನವೇ ರಕ್ತ ಚಂದ್ರ ಗ್ರಹಣ ಸಂಭವಿಸಿದೆ. ಗುವಾಹಟಿ, ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ ಹಾಗೂ ರಾಂಚಿಯಲ್ಲಿ ಗೋಚರವಾಗಿದೆ. ಬೆಂಗಳೂರಿನಲ್ಲಿ ಶೇ. 23ರಷ್ಟು ಚಂದ್ರ ಗ್ರಹಣ ಗೋಚರವಾಗಿದ್ದು, ಬಾನಂಗಳದಲ್ಲಿ 3 ತಾಸು ಚಂದ್ರ ಗ್ರಹಣ ವಿಸ್ಮಯ ಕಾಣಲಿದೆ. ಗ್ರಹಣದ ಮೋಕ್ಷ ಕಾಲ ಸಂಜೆ 6 ಗಂಟೆ 17 ನಿಮಿಷ ಇದ್ದು, ವಿಶ್ವದ ಹಲವು ದೇಶಗಳಲ್ಲಿ ಖಂಡಗ್ರಾಸ ಚಂದ್ರಗ್ರಹಣ ಗೋಚರವಾಗಿದೆ .