ಕಾರ್ತಿಕದಲ್ಲಿ ಸಾಲು ಸಾಲು ಅನಾಹುತ! ನಿಜವಾಗುತ್ತಾ ಕೋಡಿ ಶ್ರೀ ಭವಿಷ್ಯ?

ಕಾರ್ತಿಕ ಮಾಸದಲ್ಲಿ  ಗಂಡಾಂತರ ಪಕ್ಕಾ!
ಕೋಡಿ ಶ್ರೀಗಳು ನುಡಿದ ಭವಿಷ್ಯ!
ಕಾರ್ತಿಕ ಮಾಸದಲ್ಲಿ ನೀರಿನಿಂದ  ಜಲಗಂಡಾಂತರ
ಜಗತ್ತಿಗೆ ಕಾದಿದೆ ಮಹಾ ವಿಪತ್ತು!

First Published Sep 5, 2022, 4:44 PM IST | Last Updated Sep 5, 2022, 4:44 PM IST

ಜಲಬಾಧೆ ದ್ವಿಗುಣ.. ಭೂಕಂಪ ದುಪ್ಪಟ್ಟಾದೀತು! ಕಾರ್ತಿಕ ಮಾಸದಲ್ಲಿ  ಜಲ ಗಂಡಾಂತರ ಪಕ್ಕಾ, ಭೂಮಿ ನಡುಗುತ್ತೆ.. ಬೆಂಕಿ ಅನಾಹುತಗಳು ಹೆಚ್ಚಾಗುತ್ತೆ.. ಇನ್ನೂ 3-4 ದಿನ ಮಳೆ ಅಲರ್ಟ್! ಕೋಡಿ ಶ್ರೀಗಳ ಈ ಎಲ್ಲ ಬೆಂಕಿ ಭವಿಷ್ಯ ನಿಜವಾಗ್ತಾ ಇದೆಯಾ?

ಹೌದು, ಆಶ್ವೀಜ ಕಾರ್ತಿಕದಲ್ಲಿ ದೇಶಕ್ಕೆ ಕಷ್ಟವಿದೆ, ಬಯಲುಸೀಮೆ ಮಲೆನಾಡಾಗುತ್ತೆ, ಮಲೆನಾಡು ಬಯಲುಸೀಮೆಯಾಗುತ್ತೆ, ಭೂಮಿ ನಡುಗೀತು.. ಮೇಘ ಅಬ್ಬರಿಸೀತು.. ನೀರು ತಲ್ಲಣಗೊಂಡೀತು ಎಂದೆಲ್ಲ ಕೋಡಿ ಶ್ರೀಗಳು ಭವಿಷ್ಯವಾಣಿ ನುಡಿದಿದ್ರು. ಈಗ 2022ರಲ್ಲಿ ಮಳೆ ಹಿಂದೆಂದೂ ಕಂಡ ಕೇಳರಿಯದಂತೆ ಬದುಕನ್ನು ಮೂರಾಬಟ್ಟೆ ಮಾಡುತ್ತಿದೆ. ಪ್ರವಾಹ, ಗಾಳಿ ಹೆಚ್ಚಾಗುತ್ತೆ, ನಗರದ ರಸ್ತೆಗಳು ನದಿಗಳಾಗಿವೆ, ಹಳ್ಳಿಗಳು ಕೊಚ್ಚಿ ಹೋಗುತ್ತಿವೆ..  ಇವೆಲ್ಲ ಸ್ವಾಮೀಜಿ ಹೇಳಿದಂತೆಯೇ ನಡೆಯುತ್ತಿದೆ. 

ದೀಪಾವಳಿಯಂದೇ ಸೂರ್ಯಗ್ರಹಣ! ಹಬ್ಬ ಮಾಡ್ಬೋದಾ?

ಇದೀಗ ಕಾರ್ತಿಕ ಮಾಸದಲ್ಲಿ  ಗಂಡಾಂತರ ಪಕ್ಕಾ, ಜಲಬಾಧೆ ದ್ವಿಗುಣ.. ಭೂಕಂಪ ದುಪ್ಪಟ್ಟಾದೀತು.. ಎಂಬ ಕೋಡಿ ಶ್ರೀಗಳ ವಿಶ್ವ ವಿನಾಶದ ಭವಿಷ್ಯ ಕೂಡಾ ನಿಜವಾಗುವ ಭಯ ಆವರಿಸಿದೆ.