Asianet Suvarna News Asianet Suvarna News

ದೀಪಾವಳಿಯಂದೇ ಸೂರ್ಯಗ್ರಹಣ! ಹಬ್ಬ ಮಾಡ್ಬೋದಾ?

ಈ ಬಾರಿ ದೀಪಾವಳಿ ಹಬ್ಬದ ದಿನವೇ ಸೂರ್ಯಗ್ರಹಣ ಸಂಭವಿಸುತ್ತಿದೆ. ಇದು ಶುಭವೋ ಅಶುಭವೋ? ಹಬ್ಬ ಆಚರಿಸಬಹುದೋ ಇಲ್ಲವೋ? 

Solar Eclipse on Diwali 2022 can we do Lakshmi Puja Amid Surya Grahan skr
Author
First Published Sep 5, 2022, 4:14 PM IST

ಈ ಬಾರಿ ದೀಪಾವಳಿ ಹಬ್ಬದ ಸಮಯದಲ್ಲಿ ಅಪರೂಪದ ವಿದ್ಯಮಾನವೊಂದು ಜರುಗುತ್ತಿದೆ. ಅದೇ ಸೂರ್ಯಗ್ರಹಣ. ಹೌದು, ದೀಪಾವಳಿ ಹಬ್ಬದ ಎರಡನೇ ದಿನ  ಸೂರ್ಯ ಗ್ರಹಣ ಸಂಭವಿಸುತ್ತಿದ್ದು, ಈ ಬಗ್ಗೆ ಜನರಲ್ಲಿ ಶುಭ ಸೂಚನೆಯೋ, ಅಶುಭವೋ, ಹಬ್ಬ ಆಚರಿಸಬಹುದೋ ಇಲ್ಲವೋ ಎಂಬ ಗೊಂದಲಗಳು ಹೆಚ್ಚಾಗಿವೆ. ಸಾಮಾನ್ಯವಾಗಿ ಗ್ರಹಣದ ಬಗ್ಗೆ ಎಲ್ಲರಲ್ಲೂ ನಕಾರಾತ್ಮಕ ಧೋರಣೆಯೇ ಇದ್ದು, ಈ ಕಾರಣದಿಂದ ಹಬ್ಬದ ದಿನ ಇಂಥದೊಂದು ಸಂಭವಿಸುವುದು ಕೆಡುಕೇನೋ ಎಂಬ ಭಯ ಆವರಿಸುತ್ತಿದೆ.  ಸೂರ್ಯಗ್ರಹಣ ಮತ್ತು ದೀಪಾವಳಿಯನ್ನು ಏಕಕಾಲದಲ್ಲಿ ಆಚರಿಸುವ ಬಗ್ಗೆ ಜನರಲ್ಲಿ ಗೊಂದಲ ಮತ್ತು ಅನುಮಾನಗಳು ಹುಟ್ಟಿಕೊಂಡಿವೆ.

ದೀಪಾವಳಿ(Diwali) ಎಂದರೆ ನಾಲ್ಕು ದಿನದ ಹಬ್ಬ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಸಂಭವಿಸುತ್ತದೆ. ಇನ್ನು, ಸೂರ್ಯ ಗ್ರಹಣ ಕೂಡಾ ಯಾವಾಗಲೂ ಅಮಾವಾಸ್ಯೆಯಂದೇ ಸಂಭವಿಸುವುದು.

ಈ ಬಾರಿ ಅಕ್ಟೋಬರ್ 24 ರಂದು ದೀಪಾವಳಿ ಆರಂಭವಾಗುತ್ತದೆ. ಹಬ್ಬದ ಎರಡನೇ ದಿನ ಅಂದರೆ ಅಕ್ಟೋಬರ್ 25ರಂದು ಸೂರ್ಯಗ್ರಹಣ(Solar Eclipse) ಸಂಭವಿಸುತ್ತಿದೆ. ಜ್ಯೋತಿಷಿಗಳ ಪ್ರಕಾರ, ಕಾರ್ತಿಕ ಅಮಾವಾಸ್ಯೆಯ ತಿಥಿಯು ಅಕ್ಟೋಬರ್ 24 ರ ಸಂಜೆ 05.29ರಿಂದ ಪ್ರಾರಂಭವಾಗಲಿದೆ, ಅದು ಮರುದಿನ ಅಂದರೆ ಅಕ್ಟೋಬರ್ 25 ರ ಸಂಜೆ 04.20 ರವರೆಗೆ ಇರುತ್ತದೆ. ಪ್ರದೋಷ ಕಾಲ ಮತ್ತು ರಾತ್ರಿ ಲಕ್ಷ್ಮಿ ಪೂಜೆ ನಡೆಯುವುದರಿಂದ ಈ ಹಬ್ಬವನ್ನು ಅಕ್ಟೋಬರ್ 24ರಂದು ಮಾತ್ರ ಆಚರಿಸಲಾಗುತ್ತದೆ. ಅಂದರೆ ದೀಪಾವಳಿ ಮತ್ತು ನರಕ ಚತುರ್ದಶಿ ಎರಡನ್ನೂ ಅಕ್ಟೋಬರ್ 24ರಂದೇ ಆಚರಿಸಲಾಗುತ್ತದೆ.
ಅದೇ ಸಮಯದಲ್ಲಿ, ಅಕ್ಟೋಬರ್ 25ರಂದು ಮಂಗಳವಾರ ಕಾರ್ತಿಕ ಕೃಷ್ಣ ಪಕ್ಷದ ಅಮಾವಾಸ್ಯೆ(new moon day)ಯಂದು ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ. 

Love Compatibility: ಮೇಷಕ್ಕೂ ಸಿಂಹಕ್ಕೂ ಜೋಡಿಯಾದ್ರೆ ಹೊಂದಾಣಿಕೆ ಇರುತ್ತಾ?

ಹಬ್ಬ ಆಚರಿಸಬಹುದೇ ?
ದೀಪಾವಳಿಯಂದು ಸಂಭವಿಸುವ ಸೂರ್ಯಗ್ರಹಣವು ವರ್ಷದ ಎರಡನೇ ಸೂರ್ಯಗ್ರಹಣವಾಗಿದ್ದು, ಈ ಬಾರಿ ಭಾರತ(India)ದಲ್ಲಿಯೂ ಗೋಚರಿಸುತ್ತದೆ.
ಒಂದು ವಿಷಯ ನೆನಪಿಟ್ಟುಕೊಳ್ಳಬೇಕು, ಯಾವುದೇ ಗ್ರಹಣ ಬಂದರೂ ಅದರ ಬಗ್ಗೆ ಚಿಂತಿಸಬೇಕಾಗಿಲ್ಲ.  ಗ್ರಹಣ ಕಾಲದ ಬಗ್ಗೆ ಭಯ ಪಡಬಾರದು. ದೀಪಾವಳಿಯನ್ನು ಸಿದ್ಧಿಗಳ ಮಹಾನ್ ಹಬ್ಬವೆಂದು ಪರಿಗಣಿಸಲಾಗಿದೆ ಮತ್ತು ಆದ್ದರಿಂದ ಋಷಿಗಳು ಇದನ್ನು ಸಿದ್ಧಿಕಾಲ ಎಂದು ಕರೆದರು. ಈ ಅವಧಿಯಲ್ಲಿ ಭಗವಾನ್ ಹರಿಯ ನಾಮವನ್ನು ಜಪಿಸುವುದರಿಂದ ಪ್ರಯೋಜನಗಳು ಮತ್ತು ಯಶಸ್ಸಿಗೆ ದಾರಿ ಮಾಡಿ ಕೊಡುತ್ತದೆ. ಗ್ರಹಣದ ಸಮಯದಲ್ಲಿ, ಭಗವಾನ್ ಶ್ರೀರಾಮನು ಗುರು ವಸಿಷ್ಠರಿಂದ ಮತ್ತು ಶ್ರೀ ಕೃಷ್ಣ ಸಂದೀಪನ ಗುರುಗಳಿಂದ ದೀಕ್ಷೆಯನ್ನು ಪಡೆದರು. ಶಾಸ್ತ್ರಗಳ ಪ್ರಕಾರ ಸೂರ್ಯಾಸ್ತದ ನಂತರ ಸಂಭವಿಸುವ ಸೂರ್ಯಗ್ರಹಣವು ಯಾವುದೇ ಹಾನಿಕಾರಕ ಪರಿಣಾಮವನ್ನು ಬೀರುವುದಿಲ್ಲ. ಮತ್ತು ಈ ಬಾರಿ ಸೂರ್ಯಗ್ರಹಣವು ಮಧ್ಯರಾತ್ರಿಯೇ ಸಂಭವಿಸುತ್ತಿದೆ.

ಯಾವ ರಾಶಿ ಚಕ್ರದವರು ಈ ಗ್ರಹಣವನ್ನು ವೀಕ್ಷಿಸುವುದನ್ನು ತಪ್ಪಿಸಬೇಕು?
ಭಾರತೀಯ ಕಾಲಮಾನದ ಪ್ರಕಾರ, ಗ್ರಹಣವು ಭಾರತೀಯ ಕಾಲಮಾನ ಮುಂಜಾನೆ 4:31ಕ್ಕೆ ಪ್ರಾರಂಭವಾಗುತ್ತದೆ. ಗ್ರಹಣವು ಸ್ವಾತಿ ನಕ್ಷತ್ರ ಮತ್ತು ತುಲಾ ರಾಶಿಯಲ್ಲಿ ಇರುವುದರಿಂದ, ಈ ಚಿಹ್ನೆಗಳಲ್ಲಿ ಜನಿಸಿದ ಜನರು ರೋಗ, ನೋವು ಮತ್ತು ಸಂಕಟಗಳನ್ನು ಅನುಭವಿಸುತ್ತಾರೆ. ಭಾರತ, ಗ್ರೀನ್‌ಲ್ಯಾಂಡ್, ಸ್ವೀಡನ್, ನಾರ್ವೆ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಜರ್ಮನಿ, ಸ್ಪೇನ್, ಯೆಮೆನ್, ಓಮನ್, ಸೌದಿ ಅರೇಬಿಯಾ, ಈಜಿಪ್ಟ್, ಇಟಲಿ, ಪೋಲೆಂಡ್, ರೊಮೇನಿಯಾ, ಆಸ್ಟ್ರಿಯಾ, ಗ್ರೀಸ್, ಟರ್ಕಿ, ಇರಾಕ್, ದೇಶಗಳಲ್ಲಿ ಗ್ರಹಣ ಗೋಚರಿಸಲಿದೆ.

Astrology Tips : ಗೆಸ್ಟ್ ಬರ್ತಾರೆ ಅನ್ನೋದ್ರಿಂದ ಹಿಡಿದು ಅನಾಹುತದವರೆಗೆ ಸೂಚನೆ ನೀಡುತ್ತೆ ಜೇಡ

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ರಾಶಿಯ ಸ್ವಭಾವಗಳು, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios