ಮೀನದಲ್ಲಿ ಗುರು ಮಾರ್ಗಿ; ಅಂತೂ ಜಗತ್ತಿಗೆ ಒಳ್ಳೆ ಟೈಂ ಬಂತು!

23 ನವೆಂಬರ್​‌ಗೆ ಗುರು ವಕ್ರಿ ತ್ಯಾಗ 
ಮೀನದಲ್ಲಿ ಗುರು ಮಾರ್ಗಿಯಿಂದ ಲೋಕಕಲ್ಯಾಣ
ಧರ್ಮ ಸಂಸ್ಥಾಪನೆಗೆ ಕಾರಕನಾಗಲಿದ್ದಾನೆ ಗುರು

Share this Video
  • FB
  • Linkdin
  • Whatsapp

ಗುರುಬಲವು ಜಗತ್ತಿನ ಅನೇಕ ಆಗುಹೋಗುಗಳಿಗೆ ಪ್ರಮುಖ ಕಾರಕ. ಪಾಪಗ್ರಹಗಳು ವಕ್ರಿಯಾದರೆ ಲೋಕದಲ್ಲಿ ಸಮಸ್ಯೆ ಹೆಚ್ಚುತ್ತದೆ. ಶುಭಗ್ರಹಗಳು ವಕ್ರಿಯಾದರೆ ಶುಭವನ್ನೇ ತರುತ್ತವೆ. ಆದರೂ ಎಲ್ಲ ಗ್ರಹಗಳು ಮಾರ್ಗಿಯಾಗಿದ್ದಾಗ ಅವು ನೀಡುವ ಶುಭಫಲಗಳು ಹೆಚ್ಚು. ಕಳೆದ ತಿಂಗಳಷ್ಟೇ ಅಂದರೆ ಅಕ್ಟೋಬರ್ 21ರಂದು ಶನಿಯು ವಕ್ರಿಯಿಂದ ಮಾರ್ಗಿಯಾಗಿದ್ದಾನೆ. ಈಗ ಗುರು ಕೂಡಾ ಮೀನ ರಾಶಿಯಲ್ಲಿ ನವೆಂಬರ್ 23ರಂದು ವಕ್ರಿ ಬಿಟ್ಟು ಮಾರ್ಗಿಯಾಗಲಿದ್ದಾನೆ. ಧರ್ಮದ ನಡೆಗೆ ಕಾರಣಗಳನ್ನು ಉಂಟು ಮಾಡುವವನು ಗುರು. ಆತನ ಈ ನಡೆಯಿಂದ ಸಂತೋಷದ ಸಮಯ ಎದುರಾಗಲಿದೆ. ಮುಂದಿನ 1 ತಿಂಗಳಲ್ಲಿ ಅನೇಕ ಸಕಾರಾತ್ಮಕ ಫಲಗಳನ್ನು ಕಾಣಬಹುದು ಎನ್ನುತ್ತಾರೆ ಆಧ್ಯಾತ್ಮ ಚಿಂತಕ ಹರೀಶ್ ಕಶ್ಯಪ್. 

Numerology 2023: ಮೂಲಾಂಕ ಮೂರರಿಂದ ಒಂಬತ್ತು; ಸಂಬಂಧ, ಹಣಕಾಸಿನ ವಿಚಾರದಲ್ಲಿ ಆಪತ್ತು

Related Video