Asianet Suvarna News Asianet Suvarna News

ಹರಿಹರಪುರ ಮಠದಲ್ಲಿ ಮಹಾ ಕುಂಭಾಭಿಷೇಕ ಸಂಭ್ರಮ

ಹರಿಹರಪುರ ಮಠದಲ್ಲಿ ಏ.15ರಂದು ಮಹಾಕುಂಭಾಭಿಷೇಕ ಮಹೋತ್ಸವ ನಡೆದಿದೆ. ಉತ್ಸವದ ಅಂಗವಾಗಿ ಆರಂಭವಾದ ಧಾರ್ಮಿಕ ಕಾರ್ಯಕ್ರಗಳು ಇನ್ನೂ ಮುಂದುವರಿದಿವೆ.

First Published Apr 18, 2022, 12:10 PM IST | Last Updated Apr 18, 2022, 12:10 PM IST

ಮಲೆನಾಡಿನ ತುಂಗಾ ನದಿ(River Tunga) ತೀರದಲ್ಲಿ ಸನಾತನ ಧರ್ಮವನ್ನು ಪಸರಿಸುವ ಸಾಕಷ್ಟು ದೇವಾಲಯಗಳಿವೆ. ಇದರ ಸಾಲಿನಲ್ಲಿ ಹರಿಹರಪುರ(Hariharapura)ದ ಶ್ರೀ ಮಠವೂ ಒಂದು. ಇದೀಗ ಕಳೆದ 11 ವರ್ಷಗಳಿಂದ ದೇವಾಲಯ ಪುನರ್‌ನಿರ್ಮಾಣ ನಡೆದು ಸಂಪನ್ನಗೊಂಡಿದ್ದು ಇದೀಗ ಹರಿಹರಪುರದ ಲಕ್ಷ್ಮೀನೃಸಿಂಹ ದೇವಾಲಯ ಹಾಗೂ ಶ್ರೀ ಶಾರದಾ ದೇವಿ ದೇವಾಲಯಗಳ ಕುಂಭಾಭಿಷೇಕ ಕಾರ್ಯಕ್ರಮವು 15 ದಿನಗಳ ಕಾಲ ನಡೆಯುತ್ತಿದೆ. 

30 ವರ್ಷಗಳ ಬಳಿಕ ಕುಂಭಕ್ಕೆ ಶನಿ ಪ್ರವೇಶ, ನಿಮ್ಮ ರಾಶಿ ಮೇಲೇನು ಪರಿಣಾಮ?

ಮಹಾಕುಂಭಾಭಿಷೇಕ ಮಹೋತ್ಸವದ ಅಂಗವಾಗಿ 15 ದಿನಗಳ ಕಾಲ ನಿತ್ಯ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹರಿಹರಪುರದಲ್ಲಿ ನಡೆಯುತ್ತಿವೆ. ಇದರ ಹಿಂದೆ ಹರಿಹರಪುರ ಮಠದ ಪ್ರಸ್ತುತ ಪೀಠಾಧಿಪತಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ಶ್ರದ್ಧೆ, ಸಂಕಲ್ಪವಿದೆ. ಇದಕ್ಕೆ ಪ್ರತಿ ದಿನ ಸಾವಿರಾರು ಜನರು ಸಾಕ್ಷಿಯಾಗುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಅದ್ಧೂರಿ ಕುಂಭಾಭಿಷೇಕ ಮಹೋತ್ಸವದ ಝಲಕ್ ಇಲ್ಲಿದೆ.