30 ವರ್ಷಗಳ ಬಳಿಕ ಕುಂಭಕ್ಕೆ ಶನಿ ಪ್ರವೇಶ, ನಿಮ್ಮ ರಾಶಿ ಮೇಲೇನು ಪರಿಣಾಮ?
ಶನಿ ಕೆಟ್ಟ ಗ್ರಹವೇನಲ್ಲ. ಕೆಟ್ಟ ಕರ್ಮಗಳಿಗೆ ಕೆಟ್ಟದ್ದನ್ನೂ, ಒಳ್ಳೆಯದಕ್ಕೆ ಒಳ್ಳೆಯ ಫಲವನ್ನೂ ಕೊಡುವಾತ. ಈತ 30 ವರ್ಷಗಳ ಬಳಿಕ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಖ್ಯಾತ ಜ್ಯೋತಿಷಿಗಳಿಂದ ಗೋಚಾರ ಫಲ ಕೇಳಿ..
ಮಕರ(Capricorn) ಮತ್ತು ಕುಂಭ(Aquarius) ರಾಶಿಯ ಅಧಿಪತಿಯಾದ ನೀಲವರ್ಣದ ಶನಿ(Saturn)ಯು ಕರ್ಮಕ್ಕೆ ತಕ್ಕ ಫಲ ನೀಡುವ ಗ್ರಹವಾಗಿದೆ. ಶನಿ ಎಂದರೆ ಬಹುತೇಕರಿಗೆ ಭಕ್ತಿಗಿಂತ ಭಯ ಜಾಸ್ತಿ. ಶನಿಯ ಚಲನೆ ಬಹಳ ನಿಧಾನ. ಶನೈ ಎಂದರೆ ನಿಧಾನ ಎಂದೂ ಚರ ಎಂದರೆ ಚಲನೆ ಎಂದೂ ಅರ್ಥವಿದೆ. ಅಂದರೆ ನಿಧಾನವಾಗಿ ಚಲಿಸುವವ ಶನಿ.
ಏಪ್ರಿಲ್ 29ರಂದು ಶನಿ ಗ್ರಹವು ಕುಂಭ ರಾಶಿಗೆ ಪ್ರವೇಶಿಸುತ್ತಿದೆ. ಇದರಿಂದ ಧನು(Sagittarius) ರಾಶಿಗೆ ಸಾಡೇಸಾತಿಯಿಂದ ಮುಕ್ತಿ ದೊರೆತರೆ, ಮೀನಕ್ಕೆ ಸಾಡೇಸಾತಿ ಆರಂಭವಾಗುತ್ತಿದೆ. ಕುಂಭ ರಾಶಿಗೆ ಸಾಡೇಸಾತಿಯ ಎರಡನೇ ಹಂತವೂ, ಮಕರಕ್ಕೆ ಮೂರನೇ ಹಂತವೂ ಆರಂಭವಾಗುತ್ತಿದೆ. ಶನಿಯು ಕುಂಭಕ್ಕೆ ಬರುತ್ತಿದ್ದಂತೆಯೇ ಕಟಕ ಹಾಗೂ ವೃಶ್ಚಿಕ ರಾಶಿಯ ಜನರಿಗೆ ಶನಿ ಧೈಯ್ಯ ಶುರುವಾಗುತ್ತದೆ.
ಕಪ್ಪು ದಾರ ಕಾಲಿಗೆ ಕಟ್ಟೋದು ಒಳ್ಳೆಯದು, ಆದರೆ ಈ 2 ರಾಶಿಯವರು ಕಟ್ಟಕೂಡದು!
ಬಹಳ ನಿಧಾನವಾಗಿ ಚಲಿಸುವ ಶನೈಶ್ಚರನ ಈ ನಡೆಯು ಯಾವ ರಾಶಿಗಳಿಗೆ ಲಾಭವಾಗಲಿದೆ, ಯಾವ ರಾಶಿಗೆ ನಷ್ಟ ತರಲಿದೆ, ಈತ ಸ್ವರಾಶಿಯಲ್ಲಿದ್ದರೆ ಆ ರಾಶಿಗೆ ಒಳಿತೋ, ಕೆಡುಕೋ ಇತ್ಯಾದಿ ಎಲ್ಲ ವಿವರಗಳನ್ನು ವಿದ್ವಾನ್ ಪ್ರಣವ್ ಶರ್ಮಾ ಹಾಗೂ ಜ್ಯೋತಿಷಿಗಳು ಹಾಗೂ ಲೇಖಕರಾದ ಅನುಸೂಯಾ ರಾಜೀವ್ ತಿಳಿಸಿಕೊಟ್ಟಿದ್ದಾರೆ.