ಪ್ರಧಾನಿ ಮೋದಿ ಅವಧಿಯಲ್ಲಿ ಬದಲಾದ ಪುಣ್ಯಕ್ಷೇತ್ರಗಳೆಷ್ಟು?

856 ಕೋಟಿ.. 47 ಹೆಕ್ಟೇರ್ ಜಾಗ.. ವೈಭೋಗದಿಂದ ಕೂಡಿದೆ ಉಜ್ಜಯಿನಿ ಮಹಾಕಾಲನ ದೇಗುಲ.. ಮೋದಿ ಅವಧಿಯಲ್ಲಿ ಸ್ವರೂಪವನ್ನೇ ಬದಲಿಸಿಕೊಂಡ ಪುಣ್ಯ ಕ್ಷೇತ್ರಗಳೆಷ್ಟು..? ಇದೇ ಈ ಹೊತ್ತಿನ ವಿಶೇಷ ನಮೋ ದೇವ ದೇವ. 

Share this Video
  • FB
  • Linkdin
  • Whatsapp

856 ಕೋಟಿ.. 47 ಹೆಕ್ಟೇರ್ ಜಾಗ.. ವೈಭೋಗದಿಂದ ಕೂಡಿದೆ ಉಜ್ಜಯಿನಿ ಮಹಾಕಾಲನ ದೇಗುಲ.. ಮೋದಿ ಅವಧಿಯಲ್ಲಿ ಸ್ವರೂಪವನ್ನೇ ಬದಲಿಸಿಕೊಂಡ ಪುಣ್ಯ ಕ್ಷೇತ್ರಗಳೆಷ್ಟು..? ಇದೇ ಈ ಹೊತ್ತಿನ ವಿಶೇಷ ನಮೋ ದೇವ ದೇವ. ಭಾರತ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸೋ ದೇಶ ಇಲ್ಲಿ ಎಣಿಸಲಸಾಧ್ಯ ಪವಿತ್ರ ಕ್ಷೇತ್ರಗಳು ಇದಾವೆ. ಆದ್ರೆ ಇಷ್ಟು ವರ್ಷ ಪವಿತ್ರ ಕ್ಷೇತ್ರಗಳ ಜೀರ್ಣೋದ್ಧಾರ ಕೆಲಸ ಸಮರ್ಪಕವಾಗಿ ಆಗ್ತಾನೇ ಇರ್ಲಿಲ್ಲಾ. ಆದರೆ ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಹಿಂದೂಗಳ ಪುಣ್ಯಕ್ಷೇತ್ರಗಳು ತಮ್ಮ ಕಳೆಯನ್ನ ಬದಲಿಸಿಕೊಂಡು ಆಕರ್ಷಕವಾಗಿದೆ ಹಾಗೂ ಯಾತ್ರಾರ್ಥಿಗಳ ಮೆಚ್ಚುಗೆಗೆ ಕಾರಣವಾಗಿದೆ. 

ತಾನು ಅಪ್ರತಿಮ ದೈವ ಭಕ್ತ ಅನ್ನೋದನ್ನ ಮೋದಿ ತಮ್ಮ ನಡೆಯಿಂದಲೇ ತಿಳಿಸಿದ್ದಾರೆ. ಈಗ ಅದನ್ನ ಕೃತಿಯಲ್ಲೂ ಸಾಬೀತು ಮಾಡಿದ್ದಾರೆ. ಬನ್ನಿ ಹಾಗಾದ್ರೆ ಮೋದಿ ಅವಧಿಯಲ್ಲಿ ತಮ್ಮ ಸ್ವರೂಪವನ್ನೇ ಬದಲಿಸಿಕೊಂಡ ಪವಿತ್ರ ಕ್ಷೇತ್ರಗಳು ಯಾವವು ಅನ್ನೋದನ್ನ ನೋಡೋಣ. ಮೋದಿ ಅವಧಿಯಲ್ಲಿ ಅನೇಕ ದೇವಸ್ಥಾನಗಳ ಹಾಗೂ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಯಾಗಿದೆ. ಆ ಪಟ್ಟಿಯಲ್ಲಿ ಈಗ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಕೂಡ ಸೇರ್ಪಡೆಯಾಗಿದೆ. ಇಂದು ಮೋದಿ ಉಜ್ಜಯಿನಿ ಮಹಾಕಾಲನ ಮಂದಿರದ ಕಾರಿಡಾರ್ ಉದ್ಘಾಟನೆ ಮಾಡಿದ್ದಾರೆ. ಮಹಾಕಾಲನ ಮಂದಿರಕ್ಕೆ ಹೊಸ ಕಳೆ ತಂದಿದ್ದಾರೆ. 

Related Video