ಗೌರಿ ಪೂಜೆ ಬಾಗಿನ ಎಷ್ಟು ಜನರಿಗೆ ಕೊಡಬೇಕು?
ಗೌರಿ ಪೂಜೆ ಮುಗಿದ ನಂತರ ಹೆಣ್ಣುಮಕ್ಕಳಿಗೆ ಬಾಗೀನ ಕೊಡುವ ಸಂಪ್ರದಾಯವಿದೆ. ಈ ಬಾಗೀನವನ್ನು ಎಷ್ಟು ಜನರಿಗೆ ಕೊಡಬೇಕು?
ಗೌರಿ ಹಬ್ಬದ ಪ್ರಮುಖ ತಯಾರಿಗಳಲ್ಲಿ ಮೊರದ ಬಾಗೀನ ಸಿದ್ಧಗೊಳಿಸುವುದೂ ಒಂದು. ಬಾಗೀನವು ಸಮೃದ್ಧಿ ಹಂಚುವ ಸಾಧನ. ಅದರಲ್ಲಿ 16 ರೀತಿಯ ವಸ್ತುಗಳನ್ನು ಇಡಬೇಕು. ಅವೇನೇನು? ಏಕಾಗಿ ಅವನ್ನೇ ಇಡಬೇಕು? ಬಾಗೀನ ಸಮರ್ಪಣೆಯ ಹಿಂದಿನ ಸದುದ್ದೇಶವೇನು? ಕೆಲವರು ಈ ಬಾಗೀನವನ್ನು ಒಬ್ಬರಿಗೆ ಕೊಟ್ಟರೆ ಸಾಕೆಂದರೆ ಮತ್ತೆ ಕೆಲವರು 16 ಜನರಿಗೆ ಕೊಡಬೇಕು ಎನ್ನುತ್ತಾರೆ. ನಿಜವಾಗಿಯೂ ಎಷ್ಟು ಜನರಿಗೆ ಬಾಗೀನ ಕೊಡಬೇಕು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ.