ಮಹಾಲಯದಲ್ಲಿ ಎಡೆ ಇಡುವಾಗ ಈ ತಪ್ಪು ತಪ್ಪಿನೂ ಮಾಡ್ಬೇಡಿ: ಬ್ರಹ್ಮಾಂಡ ಗುರೂಜಿ
ಮಹಾಲಯದ ಸಂದರ್ಭದಲ್ಲಿ ಮಾಡಬಾರದ ಕೆಲ ತಪ್ಪುಗಳ ಬಗ್ಗೆ, ಮಾತಿನಲ್ಲಾಗಬಾರದ ಮಿಸ್ಟೇಕ್ಸ್ ಬಗ್ಗೆ ಬ್ರಹ್ಮಾಂಡ ಗುರೂಜಿಗಳು ತಿಳಿಸಿಕೊಟ್ಟಿದ್ದಾರೆ.
ಸೆಪ್ಟೆಂಬರ್ 25ರಂದು ಮಹಾಲಯ ಅಮಾವಾಸ್ಯೆ ಇದೆ. ಈ ದಿನ ಕುಟುಂಬದಲ್ಲಿ ಗತಿಸಿದವರಿಗೆಲ್ಲರಿಗೂ ಎಡೆ ಇಡುವ ಸಂಪ್ರದಾಯವಿದೆ.
ಮಗು ಹುಟ್ಟಿದರೆ ಅದು ಪುರುಡು, ಸತ್ತಾಗ ಸೂತಕ, ಮಹಿಳೆ ರಜವಾದರೆ ಅದು ಮೈಲಿಗೆ. ಈ ಪದಗಳನ್ನು ಕಲಸು ಮೇಲೋಗರ ಮಾಡಬೇಡಿ ಎನ್ನುತ್ತಾರೆ ಬ್ರಹ್ಮಾಂಡ ಗುರೂಜಿ. ಜೊತೆಗೆ ಮಹಾಲಯದಲ್ಲಿ ಸಮಾಧಿಗೆ ಪೂಜೆ ಮಾಡುವುದು ಹೇಗೆ? ಮೃತ ಸದಸ್ಯರ ಫೋಟೋ ಮನೆಯಲ್ಲಿ ಎಲ್ಲಿ ಹಾಕಬೇಕು? ಮೃತರಾದವರಿಗೆ ಮದ್ಯ, ಸಿಗರೇಟು ಇಷ್ಟ ಎಂದು ಅದನ್ನೂ ಎಡೆಯೊಂದಿಗೆ ಇಡುವುದು ಸರಿಯೇ? ಎಡೆಯಲ್ಲಿ ಏನೆಲ್ಲ ಇಡಬಹುದು? ಈ ಎಲ್ಲ ಪ್ರಶ್ನೆಗಳಿಗೂ ಗುರೂಜಿಗಳು ಉತ್ತರಿಸಿದ್ದಾರೆ.