Asianet Suvarna News Asianet Suvarna News

ಇಲ್ಲಿ ನಾಗ ದೇವತೆಗಳಿಗೆ ನಿತ್ಯವೂ ನೆರವೇರಲಿದೆ ಶೋಡಷೋಪಚಾರ ಪೂಜೆ!

ಉಡುಪಿ ಸಮೀಪದ ಉಚ್ಚಿಲ ಮಹಾಲಕ್ಷ್ಮೀ ದೇವಾಲಯ
ಮಹಾಲಕ್ಷ್ಮೀ ಸನ್ನಿಧಾನದಲ್ಲಿದೆ ಬೃಹತ್ ನಾಗಾಲಯ
ನವನಾಗ ಸಾನ್ನಿಧ್ಯದ ದೇವಾಲಯ
ನಾಗ ದೇವತೆಗಳಿಗೆ ನಿತ್ಯವೂ ಶೋಡಷೋಪಚಾರ ಪೂಜೆ

Aug 2, 2022, 1:05 PM IST

ದಕ್ಷಿಣ ಕನ್ನಡದ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಮಹಾಲಕ್ಷ್ಮೀ ದೇವಾಲಯದ ಸನ್ನಿಧಾನದಲ್ಲಿ ಬೃಹತ್ ನಾಗಾಲಯವಿದೆ. ಈ ದೇವಾಲಯ ಈ ವರ್ಷವಷ್ಟೇ 32 ಕೋಟಿ ರುಪಾಯಿ ವೆಚ್ಚದಲ್ಲಿ ನವೀಕರಣಗೊಂಡಿದೆ. ದೇವಾಲಯದಲ್ಲಿ ಶ್ರೀ ಪ್ರಸನ್ನ ಗಣಪತಿ, ಶ್ರೀ ಭದ್ರಕಾಳಿ ಸೇರಿದಂತೆ, ನಾಗದೇವರ ಸಹಿತ ಮಹಾಲಕ್ಷ್ಮಿಯ ಪುನರ್ ಪ್ರತಿಷ್ಠಾಪನೆಯಾಗಿದೆ.

ಇಲ್ಲಿ ನವನಾಗ ಸಾನಿಧ್ಯದಲ್ಲಿ ಪ್ರತಿ ದಿನ ನಾಗದೇವತೆಗಳಿಗೆ ಶೋಡಷೋಪಚಾರ ನಡೆಯುತ್ತದೆ. ಈ ದೇವಾಲಯದಲ್ಲಿ ನಡೆವ ನಾಗಪೂಜೆಯನ್ನು ಕಣ್ತುಂಬಿಕೊಳ್ಳೋಣ ಬನ್ನಿ..