ಗೆಳೆಯನ ಜೊತೆ ಹಸೆಮಣೆ ಏರಿದ ಕೀರ್ತಿ ಸುರೇಶ್, ಪತಿ ಜೊತೆ ಲಿಪ್‌ಲಾಕ್ ಫೋಟೋ ಪೋಸ್ಟ್
ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದ ಕೀರ್ತಿ, ನಿನ್ನೆ ಮತ್ತೊಮ್ಮೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.
ಮಹಾನಟಿ ಕೀರ್ತಿ ಸುರೇಶ್ ಮದುವೆ ಧಾಂ ಧೂಂ ಅಂತ ನೆರವೇರಿದೆ. ಬಾಲ್ಯದ ಗೆಳೆಯನನ್ನ ವರಿಸಿರೋ ಕೀರ್ತಿ ಗೋವಾದಲ್ಲಿ ಆಪ್ತರ ಸಮ್ಮುಖದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದಾರೆ. ವಿಶೇಷ ಅಂದ್ರೆ ಮೊನ್ನೆ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದ ಕೀರ್ತಿ, ನಿನ್ನೆ ಮತ್ತೊಮ್ಮೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಲೈಫ್ ಪಾರ್ಟ್ನರ್ ಜೊತೆ ಲಿಪ್‌ಲಾಕ್ ಮಾಡಿ ಹೊಸ ಲೈಫ್ ಶುರುಮಾಡಿದ್ದಾರೆ. ಎರಡೂ ಸಂಪ್ರದಾಯದಂತೆ ಮದುವೆ ನಡೆದಿದೆ.