ಮಕರದಲ್ಲಿ ಶನಿ ವಕ್ರಿ; 6 ರಾಶಿಗಳಿಗೆ ಹೆಚ್ಚಲಿದೆ ಶನಿಕಾಟ

ಜುಲೈ 12ಕ್ಕೆ ಕುಂಭದಿಂದ ಮಕರಕ್ಕೆ ಶನಿ ಹಿಮ್ಮುಖ ಚಲನೆ
6 ತಿಂಗಳು 6 ರಾಶಿಗೆ ಶನಿ ಕಾಟ
2023ರ ಜನವರಿ 17ಕ್ಕೆ ವಕ್ರಿ ಸಂಚಾರಕ್ಕೆ ಶನಿ ಬ್ರೇಕ್
ಮಕರ, ಕುಂಭ, ಮಿಥುನ, ತುಲಾ, ಕನ್ಯಾ, ಧನು ರಾಶಿಗಳಿಗೆ ಅಶುಭ

Share this Video
  • FB
  • Linkdin
  • Whatsapp

ಸಧ್ಯ ಕುಂಭದಲ್ಲಿ ಹಿಮ್ಮುಖ ಸಂಚಾರಿಯಾಗಿರುವ ಶನಿಯು ಜುಲೈ 12ರಿಂದ ಮಕರ ರಾಶಿಯಲ್ಲಿ ಹಿಮ್ಮುಖ ಚಲನೆ ಮುಂದುವರಿಸುತ್ತದೆ. ಇದರ ಪರಿಣಾಮವಾಗಿ ಮಿಥುನ(Gemini) ಮತ್ತು ತುಲಾ ರಾಶಿ(Libra)ಯ ಜನರಿಗೆ ಶನಿ ಧೈಯಾ ಆರಂಭವಾಗುತ್ತದೆ. ಇನ್ನು ಮೀನ ರಾಶಿಯವರಿಗೆ ಈ ಅವಧಿಯಲ್ಲಿ ಶನಿ ಸಾಡೇಸಾತಿಯಿಂದ ಮುಕ್ತಿ ದೊರೆಯುತ್ತದೆ. ಆದರೆ, ಧನು ರಾಶಿಯವರು ಮತ್ತೆ ಶನಿ ಸಾಡೇಸಾತಿಯ ಹಿಡಿತಕ್ಕೆ ಸಿಲುಕುತ್ತಾರೆ. ಇದರೊಂದಿಗೆ, ಶನಿಯು ಮಕರ ಮತ್ತು ಕುಂಭ ರಾಶಿಯ ಜನರ ಮೇಲೆ ಹಾಫ್ ಆ್ಯಂಡ್ ಹಾಫ್(Half and half) ಇರುತ್ತದೆ. 

ಜುಲೈ 12ಕ್ಕೆ ಮಕರದಲ್ಲಿ ಶನಿ ಹಿಮ್ಮುಖ ಸಂಚಾರ; ಜನಜೀವನ ದುಸ್ತರ

ಸುಮಾರು 6 ತಿಂಗಳ ಕಾಲ ಅಂದರೆ 2023ರ ಜನವರಿ 17ವರೆಗೂ ಶನಿ ಮಕರದಲ್ಲಿ ವಕ್ರಿಯಾಗಿಯೇ ಇರುತ್ತಾನೆ. ಇದರ ಪರಿಣಾಮಗಳು ಏನೆಲ್ಲ ಇರಲಿವೆ ಎಂಬುದನ್ನು ಜ್ಯೋತಿಷ್ಯ ಗುರುಗಳಾದ ಡಾ. ಹರೀಶ್ ಕಶ್ಯಪ್ ವಿವರಿಸುತ್ತಾರೆ ನೋಡಿ..

Related Video